ಚಿತ್ರದುರ್ಗನಗರದಲ್ಲಿ ರಾಯರ ೩೪೦ ನೇ ಆರಾಧನಾ ಮಹೋತ್ಸವ
ಚಿತ್ರದುರ್ಗದ ರಾಯರ ಮಠ.
ರಾಯರ ಪೂಜೆ
ಬೆಳ್ಳಿಯ ರಥ.
ಇದೇ ಖರನಾಮ ಸಂವತ್ಸರದ ಶ್ರಾವಣ ಬಹುಳ ಪ್ರತಿಪದ, ದ್ವಿತೀಯ , ತೃತೀಯ ದಿನಾಂಕ ೧೪, ೧೫, ೧೬ ಆಗಸ್ಟ್ ೨೦೧೧ ರ ಭಾನುವಾರ, ಸೋಮವಾರ, ಮಂಗಳವಾರದ ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಚಿತ್ರದುರ್ಗ ನಗರದ ರಾಘವೇಂದ್ರ ಯತಿರಾಯರ ಮಠದಲ್ಲಿ ಅತ್ಯಂತ ಹರ್ಷೋಲ್ಲಾಸಗಳಿಂದ ಜರುಗಿದವು. ಈ ವರ್ಷದಮತ್ತೊಂದು ವಿಶೇಷ ಆಕರ್ಷಣೆಯೆಂದರೆ, ರಾಯರ ರಥಕ್ಕೆ ಸುವರ್ಣ ಕಲಶ ಸಹಿತ ರಜತ ಕವಚ, ಚಲ ವೃಂದಾವನಕ್ಕೆ ಸುವರ್ಣ ಕವಚ ಮತ್ತು ಗರ್ಭಗುಡಿದ್ವಾರಕ್ಕೆ ಬೆಳ್ಳಿಯ ಕವಚ ನಿರ್ಮಾಣಗೊಂಡು ಪರಮ ಪೂಜ್ಯ ೧೦೮ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರಿಂದ ಸಮರ್ಪಿತವಾಗಿದೆ. ಚಿತ್ರದುರ್ಗ ಮತ್ತು ಸುತ್ತಮುತ್ತಲ ಸ್ಥಳಗಳಿಂದ ಸಜ್ಜನರು, ಭಕ್ತಾದಿಗಳು ಶ್ರೀಮಠಕ್ಕೆ ಆಗಮಿಸಿ ಶ್ರೀಗುರುರಾಜರ ದರ್ಶನಭಾಗ್ಯವನ್ನು ಪಡೆದರು.
ಕಾರ್ಯಕ್ರಮಗಳ ಪಕ್ಷಿನೋಟ :
* ರವಿವಾರ ಪೂರ್ವಾರಾಧನೆ
* ಸೋಮವಾರ ಮಧ್ಯಾರಾಧನೆ
* ಮಂಗಳವಾರ, ಉತ್ತರಾರಾಧನೆ ಮಹಾರಥೋತ್ಸವ
* ಬುದವಾರ, ಶ್ರೀ ಸುಜ್ಞಾನಂದ ತೀರ್ಥರ ಆರಾಧನೆ, ಪವಮಾನ ಹೋಮ ಹಾಗೂ ಸರ್ವಸಮರ್ಪಣೋತ್ಸವ