ಚಿತ್ರಾನ್ನ ಚಿತ್ರಾನ್ನ... ಟ್ವಿಟರ್ ನ ಟ್ವೀಟುಗಳು.. ಭಾಗ-6
ಟಿಪ್ಪಣಿ:- ಈ ಟ್ವೀಟುಗಳನ್ನು ಈಗಾಗಲೇ ಬಜ್ ನಲ್ಲಿ ಪೋಸ್ಟ್ ಮಾಡಿರುತ್ತೇನೆ.
1) ಯಳವತ್ತಿ ಟ್ವೀಟ್:-
ಎಲ್ಲಾ ಗರ್ಲ್ ಫ್ರೆಂಡ್ ಗಳಿಗೂ Catch you Later ಅಂತಾ ಮೆಸೇಜ್ ಕಳಿಸಬಾರದು..
catch ಮಾಡೋಕೆ ಕೆಲವರು ತುಂಬಾನೇ ಭಾರ ಇರ್ತಾರೆ.
2) ಯಳವತ್ತಿ ಟ್ವೀಟ್:-
ಈ ಪ್ರಪಂಚದಲ್ಲಿ ಕೆಟ್ಟವರಿಲ್ಲ.. ಕೆಟ್ಟ ಮನಸ್ಸುಗಳು ಅಷ್ಟೇ ಇರುತ್ತೆ. ಅವರ ಜೊತೆ ಬದುಕೋದು ನಮಗೆ ಅನಿವಾರ್ಯ.. ಅವರಿಗೆ ಹೆದರಿಕೊಂಡು ಪಲಾಯನ ಮಾಡುವುದು ಸರಿಯಲ್ಲ.. ಆ ಕೆಟ್ಟ ಮನಸ್ಸುಗಳನ್ನು ಬದಲಾಯಿಸಲು ಪ್ರಯತ್ನಿಸಬೇಕು. ಒಂದಲ್ಲಾ ಒಂದು ದಿನ ನಾವು ಗೆದ್ದೇ ಗೆಲ್ತೀವಿ.
3)ಚಿಕ್ಕವರಿದ್ದಾಗ ಯಾರಾದ್ರೂ ಬಿದ್ರೆ ಹೇಳ್ತಾ ಇದ್ದಿದ್ದು.
"ಹಿಂಗೆ ಆಗಬೇಕು.. ಹಲ್ಲು ಮುರಿಬೇಕು.. ನೀನು ಅಳಬೇಕು.. ನಾನು ನಗಬೇಕು..ಹ್ಹ ಹ್ಹ ಹ್ಹ...
4) ಯಳವತ್ತಿ ಟ್ವೀಟ್:-
"ನೀ ನನ್ನ ಎಷ್ಟು ಪ್ರೀತಿಸ್ತೀಯಾ?" ಅಂತಾ ಕೇಳಿದಳು.
"ಸತ್ತು ಹೋಗುವಷ್ಟು ಕಣೇ" ಅಂದೆ..
"ಹಾಗಾದ್ರೆ, ಬೇಗ ಮದುವೆ ಮಾಡಿಕೊಂಡುಬಿಡು" ಅಂದಳು.
ಕೊನೆಗೆ, ನಾನು ಹೇಳಿದ್ದು ಜೋಕು ಅಂತಾ ಅವಳನ್ನು ನಂಬಿಸೋಕೆ ಸಖತ್ ಕಷ್ಟ ಪಟ್ಟೆ ಕಣ್ರೀ..
5) ಯಳವತ್ತಿ ಟ್ವೀಟ್:-
ಪಡ್ಡೆ ಹುಡುಗರುಗಳು ದಿನಾ ಬೆಳಿಗ್ಗೆ 6 ಗಂಟೆಗೆ ಎದ್ದು ತಮ್ಮ ಬೀದಿಯಲ್ಲಿ ವಾಕಿಂಗ್ ಮಾಡೋದು ಒಳ್ಳೇದು..
ಇಲ್ಲಾ ಅಂದ್ರೆ, ತಮ್ಮ ಬೀದಿಲಿ ಯಾವ ಯಾವ ಒಳ್ಳೊಳ್ಳೆ ಫಿಗರ್ ಗಳು ಇದಾವೆ ಅಂತಾ ಗೊತ್ತಾಗಲ್ಲ.
ಟಿಪ್ಪಣಿ:- ಇದು ಪಡ್ಡೆ ಹುಡುಗರಿಗಾಗಿ ಬರೆದಿದ್ದು. ಸುಮ್ಕೆ ಯಾಕೆ ನನ್ನ ಬೈಯ್ಯೋ ಕಷ್ಟ ನಿಮಗೆ ಕೊಡಲಿ ಅಲ್ವಾ?
6) ಯಳವತ್ತಿ ಟ್ವೀಟ್:-
ಇಂಟರ್ನೆಟ್ ನಲ್ಲಿ ಸಿಕ್ಕಿರೋ ಒಬ್ಬಳು ಸೂಪರ್ರಾಗಿರೋ ಹುಡುಗೀ ಫೋಟೋನ ಕಾಪಿ ಮಾಡಿ ನನ್ ಕಂಪ್ಯೂಟರ್ ನಲ್ಲಿ ಸೀಕ್ರೆಟಾಗಿ ಇಟ್ಟಿದ್ದೆ..
ಬೇಜಾರಾದಾಗ ನೋಡಿ ಖುಷಿ ಪಡ್ತಿದ್ದೆ..
ಮದುವೆಯಾದ ಮೇಲೆ ಒಂದು ದಿನವೂ ನೋಡಿರಲಿಲ್ಲ..
ನನ್ ಅರ್ಧಾಂಗಿ ಅಡುಗೆ ಮನೇಲಿದ್ದಾಗ, ಅವಳಿಗೆ ಗೊತ್ತಾಗದ ಹಾಗೆ ಆ ಫೋಟೋ ನೋಡ್ತಾ ಇದ್ದೆ..
ಅದ್ಯಾವ ಮಾಯದಲ್ಲಿ ಬಂದಳೋ ನನ್ನವಳು, ಫೋಟೋ ನೋಡಿ ಯಾರ್ರೀ ಇವಳು ಅಂತಾ ಕೇಳಿದಳು..
ನಾನು ಗಾಬರಿಯಾಗಿ, ಬಾಯಿ ತಪ್ಪಿ ನನ್ ತಂಗಿ ಆಗ್ಬೇಕು ಕಣೇ ಅಂದುಬಿಟ್ಟೆ.
ಅವಳು "ಹೌದಾ..?" ಅಂತ್ಹೇಳಿ, ಒಳಗೊಳಗೆ ಮುಸಿ ಮುಸಿ ನಗುತ್ತಾ ಅಡಿಗೆ ಮನೆಗೆ ಹೋದಳು.
ತಂಗಿ ಅಂದ ತಪ್ಪಿಗೆ ಫೋಟೋನ ಪರ್ಮನೆಂಟಾಗಿ ಡಿಲೀಟ್ ಮಾಡಬೇಕಾಯ್ತು.
Moral:-
1) ಅಪ್ಪಿ ತಪ್ಪಿಯೂ ಸೂಪರ್ರಾಗಿರೋ ಹುಡುಗೀರ್ ಫೋಟೋನ ಹೆಂಡ್ತಿಗೆ ತೋರಿಸಬೇಡಿ.
2) ಸುಳ್ಳು ಹೇಳೋಕೆ ಮೂಲ ಕಾರಣ ಹೆಂಡ್ತಿ
7) ಯಳವತ್ತಿ ಟ್ವೀಟ್:-
ಸಮಯದ ಜೊತೆಗೆ ಸಂಬಂಧಗಳು ಪಕ್ವಗೊಳ್ಳಬೇಕು ಅಥವಾ ಹೊಸ ಸಂಬಂಧಗಳು ಹುಟ್ಟಿಕೊಳ್ಳಬೇಕು.. ಅದೇ ಪ್ರಕೃತಿ ನಿಯಮ ಅನ್ಕೊಂಡಿದ್ದೀನಿ...
8) ಯಳವತ್ತಿ ಟ್ವೀಟ್:-
ಅವಳ ಪ್ರೀತಿ ನನ್ನ ಮನಸ್ಸಿನಲ್ಲಿ ಗರಿಕೆ ಹುಲ್ಲಿನ ಥರಾ ಬೆಳೆದಿತ್ತು.. ನನ್ನವಳು ಸ್ವಲ್ಪ ನೀರುಣಿಸಿದಳು.. ಕಬ್ಬಿನ ಜಲ್ಲೆ ಥರಾ ಬೆಳೆದು ನಿಂತಿದೆ..ಪ್ರೀತಿಗೆ ಪೋಷಣೆ ಬೇಕು.. ಇಲ್ಲದಿದ್ದರೆ ಬರೀ ಗರಿಕೆ ಹುಲ್ಲಾಗಿ ಕಮರಿ ಹೋಗ್ತಿತ್ತು..
9) ಯಳವತ್ತಿ ಟ್ವೀಟ್:-
ಹೆಂಡತೀಗೂ ಗರ್ಲ್ ಫ್ರೆಂಡ್ ಗಳಿಗೂ "ಬಂಗಾರಿ" ಅಂತಾ ಒಂದೇ ಹೆಸರಲ್ಲಿ ಕರೆಯೋದು ಒಳ್ಳೇದು.
ನಿದ್ದೆಯಲ್ಲಿ ಯಾರನ್ನು ನೆನಪಿಸಿಕೊಂಡು ಕನವರಿಸಿದರೂ ಹೆಂಡತಿಗೆ ಅನುಮಾನ ಬರಲ್ಲ.
10) ಯಳವತ್ತಿ ಟ್ವೀಟ್:-
ನೀ ನನ್ನ ಮರೆತರೆ ನಾನು ಆ ಕ್ಷಣವೇ ಸತ್ತು ಹೋಗ್ತೀನಿ ಅಂತಾ ನನ್ನವಳಿಗೆ ಮಾತು ಕೊಟ್ಟಿದ್ದೆ..
ಒಮ್ಮೆ ನನ್ನವಳು ನನ್ನನ್ನು ಮರೆತಂತೆ ನಾಟಕವಾಡಿದಳು..
ಅದಕ್ಕೆ ನಾನೂ ಸತ್ತಂತೆ ನಾಟಕವಾಡಿದೆ..
Moral:- ಪ್ರೀತಿ ಅಂದ್ರೆ ಬರೀ ನಾಟ್ಕ ಕಣ್ರೀ.
11) ಯಳವತ್ತಿ ಟ್ವೀಟ್:-
ವೈಸ್ ವರ್ಸಾ (Vice Versa) ಅಂತಾ ಕೇಳಿದ್ದೀರಾ??
ಅದೇ ಥರಾ ಹೊಸ ಟ್ವೀಟ್
"ದುಃಖವೇ ಆಸೆಗೆ ಮೂಲ"
12) ಯಳವತ್ತಿ ಟ್ವೀಟ್:-
ಕಬ್ಬಿಣವನ್ನು ಚಿನ್ನ ಮಾಡುವ ಸುಲಭ ವಿಧಾನ..
ಕಬ್ಬಿಣಕ್ಕೆ ಚಿನ್ನ ಅಂತಾ ಹೆಸರು ಬದಲಾಯಿಸಿಬಿಡಿ.. ಅಷ್ಟು ಸಾಕು...
13) ಯಳವತ್ತಿ ಟ್ವೀಟ್:-
ನಮ್ಮ ದೇವಿ ಇಲ್ಲದಾಗ ಅವಳ ಜಾಗಕ್ಕೆ ನಿದ್ರಾದೇವಿ ಬರುವ ಸೂಚನೆಗೆ ಆಕಳಿಕೆ ಎನ್ನಬಹುದು