ಚಿಪ್ ತಂತ್ರಜ್ನಾನ-ಸುಧೀಂದ್ರ ಅವರ ಕನ್ನಡ ಬರಹ-ನನ್ನ ವಿಮರ್ಷೆ!

ಚಿಪ್ ತಂತ್ರಜ್ನಾನ-ಸುಧೀಂದ್ರ ಅವರ ಕನ್ನಡ ಬರಹ-ನನ್ನ ವಿಮರ್ಷೆ!

ಹಾಲ್ದೊಡ್ಡೇರಿ ಸುಧೀಂದ್ರ ಅವರ ದಿನಾಂಕ ಏಪ್ರಿಲ್ ಆರು, ೨೦೦೯ ರ  ೨೦೦೯ ರ ಚಿಪ್ ತಂತ್ರಜ್ನಾನಕ್ಕೆ ಹೊಸ ಸಾಧ್ಯತೆ ನೀಡುತ್ತಿರುವ ಸಾಮಗ್ರಿ ನನ್ನ ಗಮನವನ್ನು ಬಹುವಾಗಿ ಸೆಳೆಯಿತು.

ನಾನು ಇದೇ ಕ್ಷೇತ್ರದಲ್ಲಿ ಕಾಯಕ ಮಾಡ್ತ ಇರೋದು. ನಾನೂ ಸಹ ತಂತ್ರಜ್ಞಾನದ ಅದರಲ್ಲೂ ಈ ಅರೆವಾಹಕ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಬರೆಯಲು ಪ್ರಯತ್ನ ಮಾಡ್ತಾ ಇದ್ದೇನೆ. ಹಾಗಾಗಿ ಸುಧೀಂದ್ರ ಅವರ ಕನ್ನಡದ ಈ ಬರಹ ಸಹಜವಾಗಿ ನನ್ನ ಗಮನ ಸೆಳೆಯಿತು.

ನಾನು ಇನ್ನೂ ಈ ಕ್ಷೇತ್ರದಲ್ಲಿ ಸರಿಯಾಗಿ ಕಣ್ಣೂ ;) ಸಹ ಬಿಟ್ಟಿಲ್ಲ. ಹಾಗಾಗಿ ಹಿರಿಯರಾದ ಸುಧೀಂದ್ರ ಅವರ ಬರಹದ ಬಗ್ಗೆ ವಿಮರ್ಶೆ / ಟೀಕೆ ಮಾಡಲು ಹೋಗ್ತಾ ಇಲ್ಲ. ತಪ್ಪು ತೋರಿಸುವುದು ಈ ಬರಹದ ಉದ್ದೇಶವಲ್ಲ. ನಾನು ಕೆಲವೊಂದು ಸನ್ನಿವೇಶಗಳನ್ನು ಅನುಭವಿಸಿದ ಆಧಾರದ ಮೇಲೆ ನನ್ನೆರಡು ಮಾತುಗಳು ಈ ಲೇಖನದ ಬಗ್ಗೆ!

ಈ ಬ್ಲಾಗಿನಲ್ಲಿ ಲೇಖಕರ ಇಂಗ್ಲೀಷಿನ Technical terms ಗೆ ಕನ್ನಡದ (ಪಾರಿಭಾಶಿಕ ಪದಗಳು! ….ಪಾರಿಭಾಷಿಕ ಅಂದ್ರೆ ಏನು?) ಅವರ ಪದಗಳ ಬಗ್ಗೆ ಬಗ್ಗೆ ಬರೆಯುತ್ತ ಇದ್ದೇನೆ.
… content ಅನ್ನೂ ಸೇರಿಸ್ಕೊಂಡು ಇತರೆ ವಿಶಯಗಳ ಬಗ್ಗೆ ಮುಂದಿನ ಬ್ಲಾಗಿನಲ್ಲಿ ಬರೆಯುತ್ತೇನೆ.

ವಿದ್ಯುದಲೆಗಳ ಆವೃತ್ತಿ

ಇಂತಹ ಪದಗಳಿಗೆ ಇಂಗ್ಲೀಷಿನ ಪದಗಳನ್ನೂ ಬ್ರಾಕೆಟ್ನಲ್ಲಿ ಬರೆದರೆ ಅರ್ಥ ಮಾಡಿಕೊಳ್ಳಲು ಸುಲಭ.

>“ಆವೃತ್ತಿ” ಅಂದ್ರೆ ಏನು? Frequency ಅಂತಲೆ!

>“ವಿದ್ಯುದಲೆ” ಪದವನ್ನು ನಾನು ಮತ್ತೆ ;) ನೇರವಾಗಿ ಇಂಗ್ಲೀಷಿಗೆ ಅನುವಾದ ಮಾಡಿದರೆ current pulse ಅಂತಾಗುತ್ತೆ. ಇಲ್ಲಿ current pulse ಆವೃತ್ತಿ (frequency) ಅಂದ್ರೆ ಏನು?

ನಾನು ಊಹಿಸಬಹುದಾದ (?!) ಮಟ್ಟಿಗೆ “ವಿದ್ಯುದಲೆಗಳ ಆವೃತ್ತಿ” ಅನ್ನುವ ಪದ ಒಂದು ಚಿಪ್ ನ clock speed ಬಗ್ಗೆ ಮಾತಾಡುತ್ತೆ ಅನ್ನಿಸುತ್ತೆ. ಮತ್ತು ಈ ಪದ clock speed ಬಗ್ಗೆ ಮಾತಾಡುವದೇ ಆದರೆ “ವಿದ್ಯುದಲೆ” ಪದ ತಪಾಗುತ್ತೆ ಅನ್ಸುತ್ತೆ.

ಅಲೆಗಳ ಕದಡುವಿಕೆ.

Frequency Multiplier ಜೊತೆಯಲ್ಲಿ ಈ ಪದವನ್ನು ಬಳಸಿರುವುದರಿಂದ ನಾನು “ಅಲೆಗಳ ಕದಡುವಿಕೆ” ಪದಕ್ಕೆ Jitter ಅಂತ ಅರ್ಥ ಮಾಡ್ಕೊತೀನಿ. ಅಲ್ದೇ ಹೋದರೆ signal distortion / Wave distortion ಅನ್ನುವ ಪದ ತಲೆಗೆ ಬರುತ್ತೆ. ಮತ್ತು ಎರಡೂ ಪದಗಳಿಗೆ ತುಂಬಾ ವ್ಯತ್ಯಾಸವಿದೆ.

ಸೋಸುಕ

ಬಹುಶ ಇದು filter ಪದಕ್ಕೆ ಬದಲಾಗಿ ಬಳಸಿದ್ದಾರೆ ಅನ್ಸುತ್ತೆ. ಯಾಕೋ ಈ ಪದ ತುಂಬಾ ಕೃತಕ ಅಂತ ನನಗೆ ಅನ್ನಿಸುತ್ತೆ. ( ನಮ್ಮಲ್ಲಿ ಈ ಪದ ಬಳಕೆಯಲ್ಲಿ ಇಲ್ಲದೇ ಇರುವುದಕ್ಕೆ ಇರಬಹುದು;) ) ಈಗಾಗಲೆ ಬಳಕೆಯಲ್ಲಿರುವ “ಜಾಲರಿ” ಪದವೂ ಒಪ್ಪುತ್ತೆ.

Processor

ಪದವನ್ನು ಹಾಗೇಯೇ ನೇರವಾಗಿ ಬಳಸಿದ್ದಾರೆ. ಸಂಪದದಲ್ಲಿಯೇ ಈ ಮುಂಚೆ ಬಳಸಲ್ಪಟ್ಟ “ಸಂಸ್ಕಾರಕ” ಪದ ಒಪ್ಪುತ್ತೇ ಅನ್ನಿಸುತ್ತೆ. ( ಹಾ ಬ್ರಾಕೆಟ್ನಲ್ಲಿ ಇಂಗ್ಲೀಶಿನ ಪದವನ್ನು ಒಮ್ಮೆಯಾದರೊ ಕೊಡಬೇಕು).

ಚಿಪ್

ಲೇಖನದ ಮೊದಲಲ್ಲೇ “ಕಂಪ್ಯೂಟರಿನ ಮಿದುಳಾದ ಸಿ ಪಿ ಯು ಅನ್ನು ಮುದ್ದಾಗಿ “ಚಿಪ್” ಎಂದು ಕರೆಯುವ ವಾಡಿಕೆಯಿದೆ” ಅಂತ ಇದೆ. ಇದು ಅಷ್ಟೊಂದು ಸರಿಯಾದ ವಾಕ್ಯವಲ್ಲ.. ಮತ್ತು ಓದುಗರನ್ನು mislead ಮಾಡುವ ಸಾಧ್ಯತೆ ಇದೆ.

ಈ ಬರಹಕ್ಕೆ ಇನ್ನೂ ಹೆಚ್ಚಿನ ವಷಯವನ್ನು ಮುಂದಿನಬ್ಲಾಗಿನಲ್ಲಿ ಸೇರಿಸಲು ಯೋಚಿಸ್ತಾ ಇದ್ದೀನಿ.

Note: ಈ ಬ್ಲಾಗಿನ ಉದ್ದೇಶ ಕನ್ನಡದಲ್ಲಿ ತಂತ್ರಜ್ಞಾನದ ಬಗೆಗಿನ ಚರ್ಚೆಗೆ ನನ್ನೊಂದಿಷ್ಟು ಮಾತು ಸೇರಿಸುವುದಷ್ಟ್ಟೇ… ಟೀಕೆಗಾಗಿ ಈ ಬ್ಲಾಗು ಅಲ್ಲ.

 

 

Rating
No votes yet

Comments