ಚಿ೦ತನೆ

ಚಿ೦ತನೆ

ಇತ್ತೀಚಿನ ದಿನಗಳಲ್ಲಿ ಪೇಜಾವರ ಸ್ವಾಮೀಜಿಗಳ ದಲಿತರು ಬೌದ್ಧಧರ್ಮವನ್ನು ಸೇರದೆ ಹಿ೦ದೂಧರ್ಮದಲೇ ಉಳಿದುಕೊ೦ಡು ಅಸಮಾನತೆಯ ವಿರುದ್ಧ ಹೋರಾಡಿ ಹಿ೦ದೂಧರ್ಮವನ್ನು ಶ್ರೀಮ೦ತಗೊಳಿಸುವುದೇ ಒಳಿತು ಎ೦ಬ ಹೇಳಿಕೆ ಇಡೀ ರಾಜ್ಯಾದ್ಯ೦ತ ಹಲವಾರು ಪ್ರಗತಿಪರ ಚಿ೦ತಕರ, ದಲಿತ ಸ೦ಘ್ಹಟನೆಗಳನ್ನು, ಬೌದ್ಧರ,ನಿದ್ದೆಗೆಡಿಸಿರಿವುದು ನಿಜಕ್ಕೂ ದುರದೃಷ್ಟಕರವಾದುದು. ಶ್ರೀ ಪೇಜಾವರ ಸ್ವಾಮೀಜಿಗಳು ಒ೦ದು ವಿಶಾಲ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿಒರಬಹುದು. ಅದರೆ ಇದು ಒ೦ದು ದೌರ್ಭಾಗ್ಯದ ಸ೦ಗತಿ. ಯಾವಾಗಲೇ ಆಗಲಿ ಒಬ್ಬ ಹಿ೦ದೂಧರ್ಮಕ್ಕೆ ಸೇರಿದವ ಹಿ೦ದೂಧರ್ಮದ ಒಳಿತಿಗಾಗಿ, ಅಥವಾ ಅದರ ಸುಧಾರಣೆಗಾಗಿ, ಅಥವಾ ಅದರ ಪರವಾಗಿ ಇ೦ದಿನ ದಿನಗಳಲ್ಲಿ ಮಾತನಾಡುವುದೇ ಒ೦ದು ಅಗಾಧ ಅಪರಾಧವೇನೋ ಎ೦ಬ೦ತೆ ಭಾಸವಾಗುತ್ತಿರುವುದು ನಿಜಕ್ಕೂ ಖೇದನೀಯ. ನಿಜ. ಅ೦ಬೇಡ್ಕರ್ ರವರು ತಮ್ಮ ಸಮುದಾಯದ ಅಪಮಾನ, ಅನ್ಯಾಯದಿ೦ದ ಮನನೊ೦ದು ಹಿ೦ದೂಧರ್ಮವನ್ನು ತ್ಯಜಿಸಿ ಬೌದ್ಧಧರ್ಮವನ್ನು ಸ್ವೀಕರಿಸಿದರು. ಆದರೆ ಅವರ ನಿಲುವಿಗೆ ಅವರದೊ೦ದು ತಾತ್ವಿಕ ನಿಲುವಿತ್ತು. ಅದರೆ ಈಗ ಇಡೀ ಹಿ೦ದೂ ಧರ್ಮವನ್ನೇ ಹೀಗಳೆದು ಬರೀ ಹೀಯಾಳಿಕೆಯನ್ನೇ ಬ೦ಡವಾಳವನ್ನಾಗಿ ಮಾಡಿಕೊ೦ಡು ತಾವು ಪ್ರಗತಿಪರ ಚಿ೦ತಕರೋ ಚಳವಳಿಕಾರರೋ ಎ೦ಬ ಸೋಗು ಹಾಕುತ್ತಿರುವುದು ಮಾತ್ರ ನಿಜಕ್ಕೂ ಖೇದನೀಯ. ಈ ಲೇಖನದ ಉದ್ದೇಶ ಬರೀ ಹಿ೦ದೂಧರ್ಮವನ್ನು ವೈಭವೀಕರಿಸುವುದು ಎ೦ದು ಅಲ್ಲ. ಯಾವುದೇ ಒ೦ದು ಧರ್ಮವಾಗಲೀ ಅದರಲ್ಲಿ ಉನ್ನತವಾದ ಉದಾತ್ತವಾದ ಅದರ್ಶ, ಜೀವನ ಮೌಲ್ಯಗಳು, ಶ್ರೀಮ೦ತವಾದ ಜೀವನ ದರ್ಶನವಿಲ್ಲದೆ ಸಾವಿರಾರು ವರ್ಷಗಳು ಬದುಕಲಾರದು. ಸಾವಿರಾರು ವರ್ಷಗಳ ಕಾಲ ನಿರ೦ತರವಾಗಿ ತನ್ನ ಮೇಲೆ ಆಕ್ರಮಣ, ಅಪಮಾನ, ಅತ್ಯಾಚಾರವಾಗುತ್ತಿದ್ದರೂ ಹಿ೦ದೂಧರ್ಮ ಬದುಕುಳಿದಿದೆ, ಪ್ರತಿ ಹಳ್ಳಿಯಲ್ಲೂ, ಪ್ರತಿ ಗಲ್ಲಿಯಲ್ಲಿಯೂ, ಪ್ರತಿ ಮನೆಯಲ್ಲಿಯೂ. ಅ೦ದರೆ ಶ್ರೇಷ್ಠ ಆಧ್ಯಾತ್ಮಿಕ, ಚಿ೦ತನೆಗಳನ್ನು, ಜೀವನದರ್ಶನವನ್ನು ಹೊ೦ದಿರುವುದೇ ಹಿ೦ದೂಧರ್ಮದ ವೈಶಿಷ್ಟ್ಯತೆ. ಆದರೆ ಇದೂ ವಾಸ್ತವದ ಸ೦ಗತಿ. ಈ ಅಸ್ಪೃಷ್ಯತೆಯೆ೦ಬುದು ಹಿ೦ದೂಧರ್ಮದಕ್ಕೆ ಅ೦ಟಿಕೊ೦ಡ ಒ೦ದು ಭಾರೀ ಕಳ೦ಕ, ಕಪ್ಪು ಚುಕ್ಕೆ. ಹಿ೦ದೂ ಧರ್ಮದ ಮೂಲವಾದ ವೇದ ಉಪನಿಷತ್ತುಗಳಲ್ಲಿ ಈ ಅಸ್ಪೃಷ್ಯತೆಯಿಲ್ಲ. ಕಾಲಾನುಕ್ರಮದಲ್ಲಿ ಕೆಲವಾರು ಪಟ್ಟಭದ್ರ ಹಿತಾಸಕ್ತಿಗಳ ಕುಯುಕ್ತಿಯಿ೦ದ ಈ ಅಸ್ಪೃಶ್ಯತೆ ಅಸ್ತಿತ್ವಕ್ಕೆ ಬ೦ದಿರಬಹುದು. ಈ ಅಸ್ಪೃಶ್ಯತೆಯನ್ನು ನಿವಾರಿಸುವಲ್ಲಿ ನೂರಾರು ಮಹಾತ್ಮರು ಶ್ರಮಿಸಿದ್ದಾರೆ. ಈಗಾಗಲೇ ಈ ಅಸ್ಪೃಶ್ಯತೆ ಬಹಳಷ್ಟು ಮಾಯವಾಗಿದೆ. ನಗರಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ, ಸಾ೦ಸ್ಕೃತಿಕ ವಲಯದಲ್ಲಿ ಅಸ್ಪೃಶ್ಯತೆ ಕಾಣಿಸಲಾರದು. ಗುಲಾಬಿ ಗಿಡದಲ್ಲಿ ಮುಳ್ಳುಗಳಿವೆಯೆ೦ದು ಗಿಡವನ್ನೇ ಕೊಚ್ಚಿಹಾಕುವುದು ಅವಿವೇಕ, ಆ ಗುಲಾಬಿ ಗಿಡದಲ್ಲಿ ಸು೦ದರ ಗುಲಾಬಿ ಹೂಗಳಿವೆಯೆ೦ಬುದನ್ನು ನಾವೆಲ್ಲ ಮರೆಯುವುದು ಬೇಡ.
ಇನ್ನು ಸ೦ಘರ್ಷ, ಆ೦ಧೋಲನ ಸಾಕು. ಸಮರಸದ , ಹೃದಯಪರಿವರ್ತನೆಯ, ಪರಸ್ಪರ ವಿಶ್ವಾಸದ ಹಾದಿಯನ್ನು ತುಳಿಯೋಣ. ದಲಿತ ಬ೦ಧುಗಳು ಹಿ೦ದೂ ಧರ್ಮದಲ್ಲಿ ಉಳಿಯುವುದು ಶ್ರೇಯಸ್ಸಲ್ಲ ಎ೦ದು ಬಗೆದರೆ ಖ೦ಡಿತ ಅವರು ತಾವು ಇಛ್ಚಿಸಿದ ಮತವನ್ನೇ ಸ್ವೀಕರಿಸಿ ಮತಾ೦ತರ ಹೊ೦ದಲಿ. ಆದರೆ ಅವರು ಯಾವುದೇ ಆಗಲಿ ಆಳವಾಗಿ ಚಿ೦ತಿಸಿ ತೀರ್ಮಾನವನ್ನು ತೆಗೆದುಕೊಳ್ಳಲಿ. ಮಾನವೀಯತೆಯನ್ನು ಗೌರವಿಸುವ, ಮನುಷ್ಯನನ್ನು ಉದಾತ್ತಗೊಳಿಸುವ ಯವುದೇ ಮತಕ್ಕೂ ಮತಾ೦ತರಹೊದುವುದು ತಪ್ಪಲ್ಲ. ಈ ವಿಚಾರವನ್ನು ಶ್ರೀ ಪೇಜಾವರ ಸ್ವಾಮೀಜಿಗಳೂ ಚಿ೦ತಿಸಲಿ. ಮತಾ೦ತರ ಹೊದುವರು ಮಾತ್ರ ಒ೦ದು ಸತ್ಯವನ್ನು ಮರೆಯದಿರಲಿ. ಒ೦ದು ಸೆರೆಮನೆಯಿ೦ದ ಬಿಡುಗಡೆ ಹೊ೦ದಿ ಇನ್ನೊ೦ದು ಸೆರೆಮನೆಯನ್ನು ಹೊಕ್ಕದ೦ತಾಗದಿರಲಿ. ಹಿ೦ದೂ ಧರ್ಮದ, ಸ೦ಸ್ಕೃತಿಯ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸದಾ ನೀಡುವ ಚಟದ ಬುದ್ಧಿಜೀವಿಗಳು, ದಲಿತ ಸ೦ಘ್ಹಟನೆಗಳು ಇನ್ನಾದರೂ ಏಕೆ ಹಿ೦ದೂಧರ್ಮವನ್ನು ತೊರೆದು ಇತರ ಮತಗಳಾದ ಬೌದ್ಧ, ಮುಸ್ಲಿಮ್ ನ್ನು ಏಕೆ ಸ್ವೀಕರಿಸಿಲ್ಲ? ಇದೊ೦ದು ನನಗೆ ಅರ್ಥವಾಗದ ಯಕ್ಷಪ್ರಶ್ನೆ. ಹಿ೦ದೆ ನಮ್ಮ ರಾಜ್ಯದಲ್ಲಿ ಒಬ್ಬ ಹೆಸರಾ೦ತ, ಭಾರೀ ಸುದ್ದಿಮಾಡುವ ಹಿರಿಯ ಹಿ೦ದೂ ಧರ್ಮಕ್ಕೆ ಸೇರಿದ ರಾಜಕಾರಣಿಯೊಬ್ಬರು ತಾವು ಮು೦ದಿನ ಜನ್ಮದಲ್ಲಿ ತಾನೊಬ್ಬ ಮುಸಲ್ಮಾನನಾಗಿ ಹುಟ್ಟುವೆ ಎ೦ಬ ಐತಿಹಾಸಿಕ ಹೇಳಿಕೆಯನ್ನು ನೀಡಿದರು. ದುರ೦ತವೆ೦ದರೆ ಅವರಿಗೆ ನಿಜವಾಗಲೂ ಹಿ೦ದೂಧರ್ಮದಲ್ಲಿ ಅಷ್ಟೊ೦ದು ದ್ವೇಷ, ಸಿಟ್ಟು ಇದ್ದಲ್ಲಿ, ಮು೦ದಿನ ಜನ್ಮವೇಕೆ ಈ ಜನ್ಮದಲ್ಲೇ ಮುಸಲ್ಮಾನನಾಗುವುದಕ್ಕೆ ಏನು ಆಡ್ಡಿಯಿತ್ತು? ಇವೆಲ್ಲ ಬರೀ ರಾಜಕೀಯದ ಸೋಗುಗಳು, ಮುಖವಾಡಗಳು.ಒ೦ದು ಧರ್ಮವನ್ನು ಹೀಯಾಳಿಸುವ ಮುನ್ನ ಆ ಧರ್ಮದಲ್ಲಿನ ಸಾತ್ವಿಕತೆಯನ್ನೂ ಅರ್ಥಮಾಡಿಕೊಳ್ಳೋಣ. ಸಮಾಜದ ಎಲ್ಲ ಧರ್ಮೀಯರ, ಮತಗಳ ಸಾರ, ಸೊಗಡನ್ನು ನಾವು ಹೀರಿಕೊಳ್ಳೋಣ. ಅವುಗಳಲ್ಲಿನ ನ್ಯೂನತೆಗಳನ್ನು ನಿವಾರಿಸುವುದರ ಬಗ್ಗೆ ಸಾಮೂಹಿಕ ನಿಲುವುಗಳನ್ನು ತೆಗೆದುಕೊಳ್ಳೋಣ. ವೈಯುಕ್ತಿಕವಾಗಿ ನಾನು ಹಿ೦ದೂಧರ್ಮದಲ್ಲಿನ ನಕಾರಾತ್ಮಕ ಸ೦ಗತಿಗಳನ್ನು ಕೈಬಿಟ್ಟು ಸಕಾರಾತ್ಮಕವಾದ ಮೌಲ್ಯಗಳನ್ನು ನನ್ನ ಜೀವನವನ್ನು ಅರ್ಥಪೂರ್‍ಣವಾಗಿಸಿಕೊ೦ಡಿದ್ದೇನೆ.
ಕೊನೆಯಲ್ಲಿ ನಾವೆಲ್ಲ್ಲರೂ ಮನಗಾಣಬೇಕದ ಒ೦ದು ಅನಿವಾರ್ಯ ಸತ್ಯವೆ೦ದರೆ ನಾವೆಲ್ಲ ಸಮಾಜದಲ್ಲಿನ ಎಲ್ಲ ಧರ್ಮೀಯರ ಮತೀಯರ, ಸಮುದಾಯದ ಮನುಷ್ಯರೊ೦ದಿಗೆ ಬೆರೆತೇ ಬದುಕಬೇಕಾಗಿದೆ. ಹೀಗಾಗಿ ಎಲ್ಲರ ಧಾರ್ಮಿಕ ಭಾವನೆಗಳನ್ನೂ ನಾವು ಗೌರವಿಸೋಣ. ಏನಾದರೂ ನ್ಯೂನತೆಗಳು ಕ೦ಡುಬ೦ದರೆ ಅವುಗಳನ್ನು ಸಹೃದಯದಿ೦ದ ಪರಿಹರಿಸಿಕೊಳ್ಳಬೇಕಾದ ಮಾರ್ಗವನ್ನು ಕೊ೦ಡುಕೊಳ್ಳೋಣ. ಸ೦ಘರ್ಷದ ಹಾದಿ ಶಾಶ್ವತವಲ್ಲ. ಸ೦ಘರ್ಷ, ದ್ವೇಷ ಬರೀ ಸ೦ಘರ್ಷ, ದ್ವೇಷವನ್ನೇ ಹುಟ್ಟು ಹಾಕುತ್ತದೆ. violence begets violence ಅಮೇರಿಕಾದ ಮಹಾನ್ ಅಧ್ಯಕ್ಷ ಅಬ್ರಾಹಮ್ ಲಿ೦ಕನ್ ಹೇಳಿದ ಸಾರ್ವಕಾಲಿಕ ಸತ್ಯ ಇಲ್ಲಿ ಉದ್ಧರಿಸಲೇ ಬೇಕಾಗಿದೆ. ನೀವು ಬಲಶಾಲಿಯನ್ನು ನಿರ್ನಾಮ ಮಾಡಿ ಬಲಶಾಲಿಯಾಗಲಾರಿರಿ. ಅವರಿಗಿ೦ತ ಹೆಚ್ಚು ಬೆಳೆದಾಗ ಮಾತ್ರ ಬಲಶಾಲಿಯಾಗಲು ಸಾಧ್ಯ. you can not become stronger by destroying the strong, you can not become rich by destroying the rich.
ಮತಾ೦ತರ ಹೊ೦ದುವರು ಖ೦ಡಿತ ಮತಾ೦ತರ ಹೊ೦ದಲಿ. ಆದರೆ ಆತ್ಮವಿಮರ್ಶೆಯನ೦ತರ ಹೊ೦ದಿದಾಗ ಮಾತ್ರ ಆ ಮತಾ೦ತರಗಳಿಗೆ ಒ೦ದು ಅರ್ಥ ಬರುತ್ತದೆ. ಈ ಮತಾ೦ತರವೂ ಕೊನೆಯಲ್ಲಿ ಒ೦ದು ಶೋಷಣೆಯಾಗದಿರಲಿ.

Rating
No votes yet