ಚೀನಾದ ನೂತನ ಸರ್ಚ್ ಇಂಜಿನ್
ಚೀನಾದ ಹೊಸ ಸರ್ಚ್ ಇಂಜಿನ್ "goso.cn" ಅನ್ನು ಹೊರ ತಂದಿದೆ.ಇದನ್ನು "ಪೀಪಲ್ಸ್ ಡೈಲಿ " ಪತ್ರಿಕೆ ವರದಿ ಮಾಡಿದೆ.ಇದು ಆಡಳಿತ ಪಕ್ಷವಾದ "ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ "ಅವರ ಪತ್ರಿಕೆ.
ಇದೆಲ್ಲ ಬೆಳವಣಿಗೆಗಳು ಇದೇ ಮಾರ್ಚ್ ೨೦೧೦ ರಲ್ಲಿ ಗೂಗಲ್ ತನ್ನ ಚೈನೀಸ್ ಸರ್ಚ್ ಇಂಜಿನ್ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದ ನಂತರ ಕಂಡ ಮಹತ್ತರ ಬೆಳವಣಿಗೆ.
ಗೂಗಲ್ ಚೈನಾದಿಂದ ಹೊರಬಂದ ನಂತರವೂ ಕೆಲ ಸೈಬರ್ ಕ್ರೈಮ್ ಗಳೂ ಹಾಗೂ ಗೂಗಲ್ ಸರ್ವರ್,ಹಾಗೂ ಚೀನಾದ ಮಾನವ ಹಕ್ಕುಗಳ ನಿರ್ವಾಹಕರ ಜಿ - ಮೇಲ್ ಗಳನ್ನು ಹ್ಯಾ ಕ್ ಮಾಡಿದಲ್ಲದೆ ಕೆಲವು ಐ ಟಿ ದಿಗ್ಗಜ ಕಂಪನಿ ಗಳ್ಳಲ್ಲಿ ಅಡೋಬೆ ,ಯಾಹೂ ಅಂತ ಇನ್ನೂ ೩೪ ಕಂಪನಿಗಳ ಮೇಲ್ ನ ಹ್ಯಾಕ್ ಮಾಡಿದ್ದರಿಂದ ತನ್ನ ಆ ದೇಶದ ಸರ್ವರನ್ನೇ ಸ್ಥಗಿತಗೊಳಿಸಿತು.ಇದನ್ನು ಹಾಂಗ್ಕಾಂಗ್ ಗೆ ವರ್ಗಾಯಿಸಿದೆ.
ಗೊಸೋ ನೆಟ್ವರ್ಕ್ ನ ಸರ್ಚ್ ಇಂಜಿನ್ ನಲ್ಲಿ ವಾರ್ತೆ,ಬ್ಲಾಗ್,ಚಿತ್ರ,ವೀಡಿಯೋ ಗಳನ್ನೂ ನೋಡಬಹುದೆಂದು ವರದಿ ಮಾಡಿದೆ.
ಗೂಗಲ್ ಅರ್ಥ್ ಮಾಪ್ ಗೆ ಅನುಕ್ರಮವಾಗಿ ನೂತನ ಅರ್ಥ್ ಮಾಪ್ ಗಳನ್ನೂ ಅಳವಡಿಸಿದೆ ಎಂದು ಹೇಳಿದೆ.ಇದೇ ನಕ್ಷೆಗಳಲ್ಲಿ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ನ ಜಾಗವೆಂದು ತೋರಿಸಿರಿವುದು ವಿಷಾದನೀಯ ಸಂಗತಿ.ಎಷ್ಟಂದರೂ ಇಂಥ ಕಳ್ಳ ಬುದ್ದಿ ಅವರಿಗೆ ಮಾತ್ರ ಬರೋದು ಬಿಡಿ.