'' ಚುಟಕುಗಳು 14 "
ಮರ ಹಣ್ಣಾದ ಎಲೆಗಳನ್ನು
ಉದುರಿಸುತ್ತದೆ
ಶಿಶಿರ ಋತುವಿನಲ್ಲಿ
ವಸಂತದ ಬಿರು ಬೇಸಿಗೆಯಲ್ಲಿ
ಚಿಗುರಿಸುತ್ತದೆ
ತಂಬೆಲರುಗಳನ್ನು
ಮರದ ಬದುಕು
ನಿತ್ಯವೂ ಸುಂದರ
ಮನುಷ್ಯ
ಕೊಡಲಿ ತಾಗಿಸುವ ವರೆಗೆ
***
ಆಲೋಚನೆಗಳು ನಿರಂತರ
ದಾಂಗುಡಿಯಿಡುತ್ತಿರುತ್ತವೆ
ಮಸ್ತಿಷ್ಕದ ಕೋಶಗಳೊಳಗೆ
ತಲೆ ಅಸಂಖ್ಯ ಗಿಗಾ ಬೈಟಗಳ
ಒಂದು ಅಸಾಧಾರಣ ಚಿಪ್
***
Rating
Comments
ಚಿಪ್ಪಿನೊಳಗಿನ ಚಿಪ್ಪು!! :))
ಚಿಪ್ಪಿನೊಳಗಿನ ಚಿಪ್ಪು!! :))
In reply to ಚಿಪ್ಪಿನೊಳಗಿನ ಚಿಪ್ಪು!! :)) by kavinagaraj
ಕವಿ ನಾಗರಾಜ ರವರಿಗೆ ವಂದನೆಗಳು
ಕವಿ ನಾಗರಾಜ ರವರಿಗೆ ವಂದನೆಗಳು
" ಚಿಪ್ಪಿನೊಳಗಿನ ಚಿಪ್ಪು " ಅದ್ಭುತ ಪ್ರತಿಕ್ರಿಯೆ, ಧನ್ಯವಾದಗಳು.
ಚುಟಕುಗಳು 14
ಪಾಟೀಲರಿಗೆ ನಮಸ್ಕಾರಗಳು,
ಮನುಷ್ಯನೆ ಈಗ ಪ್ರಕೃತಿಗೆ ಕಂಟಕ ಪ್ರಾಯನಾಗಿದ್ದಾನೆಂದರೆ ಅತಿಶಯೋಕ್ತಿ ಆಗಲ್ಲಾ.ತಾನು ಬದಕುಬೇಕು ಹಾಗೆ ತನ್ನಂತೆ ಮರ ಗಿಡಗಳು,ಪ್ರಾಣಿ ಪಕ್ಷಿಗಳು ಸಹ ಇರಬೇಕು ಅನ್ನುವ ಮನೋಭಾವ ಎಂದೋ ಕಳೆದು ಕೊಂಡಿದ್ದಾನೆ. ಹಾಗೆಯೆ ಕವಿನಾಗರಾಜರ ಪ್ರತಿಕ್ರಿಯೆ ಓದಿ ಮುಖದಲ್ಲಿ ಮಂದಹಾಸ ಮೂಡಿತು .ಕಾರಣ ತಲೆ ಬುರುಡೆಯ ಚಿಪ್ಪಿನೊಳಗೆ ಮೆದುಳಿನ ಚಿಪ್ಪಿನ ಅರ್ಥಕ್ಕಾಗಿ.ವಂದನೆಗಳು
In reply to ಚುಟಕುಗಳು 14 by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ. ನಾಗರಿಕ ಮಾನವನ ಮನೋ ವ್ಯಾಪಾರವನ್ನು ಸರಿಯಾಗಿಯೆ ಗ್ರಹಿಸಿದ್ದೀರಿ, ನೀವಂದಂತೆ ಕವಿ ನಾಗರಾಜ ರವರ ಪ್ರತಿಕ್ರಿಯೆ ಅವರ ಗ್ರಹಿಕೆಯ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ನಿಮ್ಮಬ್ನರದೂ ಅದ್ಭುತವಾದ ಗ್ರಹಿಕೆಗಳು. <<< ತಲೆ ಬುರುಡೆಯ ಚಿಪ್ಪಿನೊಳಗೆ ಮೆದುಳಿನ ಚಿಪ್ಪಿನ >>> ಗ್ರಹಿಕೆ ಅಸಾಧಾರಣ, ಮೆಚ್ಚುಗೆಗೆ ಧನ್ಯವಾದಗಳು.
ಚುಟುಕುಗಳು 14
ಹಿರಿಯ ಹನುಮಂತ ಅನಂತ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಚುಟುಕು ಹೇಳಬೇಕಾದುದನ್ನು ಹೇಳುವ ಕಲೆ ತಮಗೆ ಕರಗತವಾಗಿದೆ. ಎಲ್ಲರಿಗೂ ಬರುವುದಲ್ಲ ಅದು. 'ಮರದ ಬದುಕು ನಿತ್ಯವೂ ಸುಂದರ ಮನುಷ್ಯ ಕೊಡಲಿ ತಾಗಿಸುವ ವರೆಗೆ' ಹೌದು. ಯಾವಾಗ ಮನುಷ್ಯನ ಫುಟ್ ಪ್ರಿಂಟ್ಸ್ ಆ ಮರದ ನೆಲದೆಡೆ ಊರಿತೋ ಮರದ ಮರಣ ಬಂದಂತೆ! ತುಂಬ ಮನೋಜ್ಞ ವಿಷಯಗಳು ಆಲೋಚನೆಗೂ ಹಚ್ಚುತ್ತವೆ. ತಮಗೆ ಮತ್ತೊಮ್ಮೆ ಧನ್ವವಾದಗಳು.
In reply to ಚುಟುಕುಗಳು 14 by lpitnal@gmail.com
ಲಕ್ಷ್ಮಿಕಾಂತ ಇಟ್ನಾಳ ರವರಿಗೆ
ಲಕ್ಷ್ಮಿಕಾಂತ ಇಟ್ನಾಳ ರವರಿಗೆ ವಂದನೆಗಳು.
ತಮ್ಮ ಪ್ರತಿಕ್ರಿಯೆ ಓದಿದೆ.ಈ ಪೃಥ್ವಿಯ ಮೇಲೆ ಮೊದಲು ವಿಕಸನ ಗೋಂಡವುಗಳೆ ಸಸ್ಯಗಳು, ನಂತರದಲ್ಲಿ ಪಕ್ಷಿಗಳು ಪಶುಗಳು, ನಂತರದ ಸೃಷ್ಟಿಯೆ ಮನುಷ್ಯ, ಅದು ಆತನಿಗೆ ಗೊತ್ತಿದ್ದ ಸತ್ಯವಾದರೂ ಕಿವುಡನಾಗಿದ್ದಾನೆ, ನಾವು ಹೀಗೆಯೆ ಮುಂದುವರಿದರೆ ಪ್ರಕೃತಿ ನಮಗೆ ಪಾಠ ಕಲಿಸದೆ ಬಿಡುವುದಿಲ್ಲ. ಮುಂದಿನ ಚಿತ್ರಗಳ ಟ್ರೆಲರ್ ಈ ವರ್ಷದ ಮಳೆಗಾಲ.ತಮ್ಮ ಸೂಕ್ಷ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಸುಂದರವಾದ ಚುಟುಕುಗಳು ಪಾಟೀಲರೆ,
ಸುಂದರವಾದ ಚುಟುಕುಗಳು ಪಾಟೀಲರೆ, ಮಾನವನು ತಿಳಿಯಬೇಕಾದುದು ತುಂಬಾ ಇದೆ,ಆದರೆ ಆಸೆಗಳೆಂಬ ಹುಳುಗಳು ಬುರುಡೆಯ ಚಿಪ್ಪಿನಲ್ಲಿ ಸೇರಿ, ಸರಿ ತಪ್ಪುಗಳ ಗ್ರಹಿಕೆಗೆ ಅಡ್ಡಗೋಡೆಯಾಗಿಬಿಟ್ಟಿವೆ..........
In reply to ಸುಂದರವಾದ ಚುಟುಕುಗಳು ಪಾಟೀಲರೆ, by sumangala badami
ಮೇಡಂ ವಂದನೆಗಳು
ಮೇಡಂ ವಂದನೆಗಳು
ಬಹಳ ಕಾಲದ ನಂತರ ಸಂಪದಕ್ಕೆ ಮರಳಿದ್ದೀರಿ, ತಮ್ಮ ಅನಿಸಿಕೆ ಸರಿ, ಪ್ರತಿಕ್ರಿಯೆಗೆ ಧನ್ಯವಾದಗಳು.
@ ಹಿರಿಯರೇ
"ಮರದ ಬದುಕು
ನಿತ್ಯವೂ ಸುಂದರ
ಮನುಷ್ಯ
ಕೊಡಲಿ ತಾಗಿಸುವ ವರೆಗೆ"
:(((
ಹಿರಿಯರೇ
ಚುಟುಕಗಳು ಅರ್ಥಪೂರ್ಣವಾಗಿವೆ....
ಬರಡಾದುದು ಚಿಗುರುವುದು- ಮನುಷ್ಯನ ಹಸ್ತ ಕ್ಷೇಪ ಬಗ್ಗೆ ಕೆಲವೇ ಸಾಲುಗಳಲಿ ತುಂಬಾ ಚೆನ್ನಾಗಿ ಬರೆದಿರುವಿರಿ....
ನನ್ನಿ
ಶುಭವಾಗಲಿ......
\|/
In reply to @ ಹಿರಿಯರೇ by venkatb83
ವೆಂಕಟ ರವರಿಗೆ ವಂದನೆಗಳು
ವೆಂಕಟ ರವರಿಗೆ ವಂದನೆಗಳು
ಚುಟುಕುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಿರಿ ಧನ್ಯವಾದಗಳು.