ಚುಟುಕುಗಳು ಮತ್ತು ಹನಿಗವನಗಳು

ಚುಟುಕುಗಳು ಮತ್ತು ಹನಿಗವನಗಳು

   ಮಾನವ

 ನೋಡಿಲ್ಲಿ  ಓ  ಗೆಳೆಯ  ಕಾಗೆಗಳ  ಗುಂಪು

ಅವುಗಳಲ್ಲಿಯು  ಇಹುದು  ಸಹಕಾರದಿಂಪು

ಖೂಳ ಮಾನವರಲ್ಲಿ ಇದು ಎಂದು  ಇಲ್ಲ

ಪರರ ಕೇಡನು ದಿನವು ಬಯಸುವರು ಎಲ್ಲ

 

  ಮಠದಲ್ಲಿ  ನಿನ್ನೆ

 ಜೀವನದಿ  ಏನುಂಟು ಅದು ಬರಿಯ  ಸೊನ್ನೆ

ಮಠದಲ್ಲಿ  ಗುರುಗಳು  ಹೇಳಿದರು  ನಿನ್ನೆ

ಬಳಿಯಲ್ಲಿ ಬಾ  ಎಂದು ಶಿಷ್ಯೆಯನು  ಕರೆದು

ಕಣ್ಮುಚ್ಚಿ ನಡೆದರು ಅವಳ  ಕರ ಹಿಡಿದು

 

  ಬಿರುದುಬಾವಲಿ

 

  ಬೇಕೆ?......  ನಿಮ್ಮ

  ಉತ್ಕೃಷ್ಟ  ಸೇವೆಗೆ 

  ಬಿರುದುಬಾವಲಿ

  ಹಾಗಿದ್ದರೆ....ಈಗಲೇ ಆಗಿ

  ರಾಜಕಾರಣಿಗಳ

  ಮನೆಯ  ಬಾವಲಿ

 

 ತಡೆ.... ವರಿಸುವೆ

 

  ಹುಡುಗೀ....

  ನಾನು  ನಿನ್ನ

 ಮದುವೆಯಾಗಿಲ್ಲವೆಂದು

 ಏಕೆ  ತಡವರಿಸುವೆ

 ಒಂದು ವರ್ಷ  ತಡೆ....ವರಿಸುವೆ !

 

 

 

Rating
No votes yet