" ಚುಟುಕುಗಳು 18 "

Submitted by H A Patil on Fri, 10/26/2012 - 12:43
 


 


ದೇವರು ಕಣ್ಮುಂದೆ ಚಲಿಸುವ


ಎಲ್ಲ ಸಾದೃಶ್ಯ  ಅಸಾದೃಶ್ಯ


ಚರಾಚರ ವಸ್ತಗಳಲ್ಲಿದ್ದಾನೆ


ಆದರೆ ಸತ್ಯ ? ಅದು ಅಗೋಚರ 


ಹೃದಯಕ್ಕೆ ವೇದ್ಯ 


ದೇವರಿಗಿಂತ ಸತ್ಯ ದೊಡ್ಡದು 


 


     ***


 


ಬದುಕು ಒಂದು ಯಕ್ಷ ಪ್ರಶ್ನೆ 


ವಿವೇಚನೆ ಮತ್ತು 


ಮಾನವೀಯತೆ ಗಳಿದ್ದಲ್ಲಿ ಮಾತ್ರ


ಉತ್ತರ ಸಾಧ್ಯ 


ಕತ್ತಲು ಓಡಿಸಲು ಬೆಳಕು 


ಬರುವಂತೆ ಬದುಕು ವಿಶ್ಲೇಷಿಸಲು 


ವಿವೇಚನೆ ಬೇಕು


 


     ***


 


ಪ್ರೇಮ ಅನುಕಂಪ ದಯೆಗಳು


ಇಲ್ಲದ ಜನರ ನಡುವಿನ ಬದುಕು


ಕಾಗೆಗಳ ಸಂಗದಲಿ


ಕೋಗಿಲೆಯ ಬದುಕಂತೆ 


 


     ***


 

ಬ್ಲಾಗ್ ವರ್ಗಗಳು
Rating
No votes yet

Comments

lpitnal@gmail.com

Sat, 10/27/2012 - 08:35

ಆತ್ಮೀಯ ಹೆಚ್ ಎ ಪಾಟೀಲ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು . ಚುಟುಕುಗಳು ಅನಂತ ಗಹನತೆ ಅರ್ಥವಂತಿಕೆಯ ಸಾಲುಗಳು. ಆಧ್ಯಾತ್ಮ, ಜೀವನ ಸತ್ಯ ಶೋಧನೆಯ ಹಾದಿ ನಿಜಕ್ಕೂ ಬಹು ಕಠಿಣ. ಅದರ ಮತಿತಾರ್ಥಗಳು ನಮ್ಮನ್ನು ದಾರಿದೀವಿಗೆಯಂತೆ ನಡೆಸುವ ಉಕ್ತಿಗಳು. ಪ್ರತಿಯೊಂದು ಸಾಲಿನಲ್ಲಿ ಹೆಚ್ಚಿನದೇನೋ ಇದೆ, ಎನ್ನುವ ಗಂಭೀರ ಛಾಪು ಮನಸ್ಸಿನ ಪರದೆಯ ಮೇಲೆ ಬಂದು ಹೋಗುವ ಭಾವನೆಗಳನ್ನು ನೀಡುವ ಚುಟುಕುಗಳು. ಇಂಥ ರಸಘಟ್ಟಿ ಗಳನ್ನು ನೀಡುತ್ತಿರುವುದಕ್ಕಾಗಿ ಧನ್ಯವಾದಗಳು.

"ಪ್ರೇಮ ಅನುಕಂಪ ದಯೆಗಳು

ಇಲ್ಲದ ಜನರ ನಡುವಿನ ಬದುಕು

ಕಾಗೆಗಳ ಸಂಗದಲಿ

ಕೋಗಿಲೆಯ ಬದುಕಂತೆ

v"

ಹಿರಿಯರೇ
ನೀವ್ ಇಲ್ಲಿವರ್ಗೆ ಬರೆದ ಚುಟುಕಗಳಲ್ಲಿಯೇ ಈ ಚುಟುಕುಗಳಿಗೆ ವಿಶೇಷ ಸ್ಥಾನ ...
ಎಷ್ಟು ಅರ್ಥಪೂರ್ಣ -ಸರಳ ಸುಂದರ -ಕಟ್ಹೊರ ಸತ್ಯ ನುಡಿಗಳು...

ಈ ಮಧ್ಯೆ ನೀವ್ ಯಾವುದೇ 'ಹೊಸ' ಕಥೆ ಬರೆಯದೆ ಇರುವುದು ನಂಗೇನೋ ಕಳೆದುಕೊಂಡ ಹಾಗಾಗಿದೆ..

ಹಲವು ಪುಟಗಳ ಸಾಲುಗಳ ಬರಹ ಹೇಳದ್ದನ್ನ ಈ ಚುಟುಕಗಳು ಕೆಲವೇ ಸಾಲಲಿ ಸರಳವಾಗಿ ತಿಳಿಸುವವು.. ಚುಟುಕಗಳ ಮಹಿಮೆಗೆ ನಮೋ..ನಮಃ...

ಶುಭವಾಗಲಿ..
ನನ್ನಿ

\|

ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆ ಓದಿದೆ, ಈ ಸರಣಿಯ ಮೂರನೆ ಚುಟುಕನ್ನು ವಿಶೇಷವಾಗಿ ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ, ನಿಮ್ಮ ಮೆಚ್ಚುಗೆಯ ಗುಣ ಅದನ್ನು ನಿಸ್ಸಂಕೋಚವಾಗಿ ದಾಖಲಿಸುವ ನಿಮ್ಮ ಕ್ರಮ ಅನುಕರಣೀಯ, ಒಂದು ಕಥಾನಕ ಮನದಾಳದಲ್ಲಿ ಚಿಗುರೊಡೆದಿದೆ, ದಾಖಲಿಸಿದ್ದೇನೆ, ಅದರ ಪಾಲಿಸಿಂಗ್ ಕೆಲಸ ನಡೆಯುತ್ತಿದೆ, ಮತ್ತದೆ ಸೋಮಾರಿತನ ಆಮೆಯ ಗತಿಯಲ್ಲಿ ಬರವಣಿಗೆ ಸಾಗಿದೆ, ಆದಷ್ಟು ಬೇಗನೆ ಕಥಾನಕವನ್ನು ದಾಖಲಿಸುವೆ, ತಮ್ಮ ಅಭಿಮಾನಕ್ಕೆ ಧನ್ಯವಾದಗಳು.

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಚುಟುಕುಗಳ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆ ನನಗೆ ಬರೆಯಲು ಇನ್ನಷ್ಟು ಹುಮ್ಮಸು ತುಂಬಿದೆ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.