ಚುನಾವಣೆ ಬಂತೂ.... ಚುನಾವಣೆ.....

ಚುನಾವಣೆ ಬಂತೂ.... ಚುನಾವಣೆ.....

  ಮತದಾರರನ್ನೆಚ್ಚೆರಿಸುವ ಸುದೀರ್ಘ ಸಂಪಾದಕೀಯ (ಮಾ. ೨೧) ಆವಶ್ಯಕ ಕಳಕಳಿಯಿಂದ ಕೂಡಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದು, ಪ್ರಜಾಸತ್ತೆಯಲ್ಲಿ ನಂಬಿಕೆಯಿಡುವ ಮರ‍್ಯಾದಸ್ಥ ಮತದಾರರಿಗಂತೂ ನಿರಾಳ ತಂದಿದೆ. ರಾಜಕಾರಣವೆನ್ನುವುದು ಇದಕ್ಕಿಂತಲೂ ಕೀಳಾಗುವುದು ಸಾಧ್ಯವಿಲ್ಲವೇನೋ ಎಂಬ ಸಖೇದಾಶ್ಚರ‍್ಯಕ್ಕೆ, ಹಾಲಿ ವಿಧಾನ ಸಭೆ ಸಾಕ್ಷಿಯಾಯಿತು. ಆಳುವ ಪಕ್ಷ, ’ಆಪರೇಷನ್ ಕಮಲ’ದಂತಹ ಅನೂಹ್ಯ, ಅಸಮರ್ಥನೀಯ ಕಾರ‍್ಯಾಚರಣೆಯಲ್ಲಿ ತೊಡಗಿತೆನ್ನುವುದೇ ಆಶ್ಚರ‍್ಯವಲ್ಲ; ಅಂತಹ ಇತರೆಲ್ಲಾ ಪ್ರತ್ಯಕ್ಷ-ಪರೋಕ್ಷ ಪಾಪಗಳನ್ನೂ ಜೀರ್ಣಿಸಿಕೊಂಡು ಪೂರ್ಣಾವಧಿ ಆಡಳಿತ ನಡೆಸಿತು; ಪ್ರತಿಪಕ್ಷವೂ ಮಹಾಜನತೆಯೂ ಇದನ್ನೆಲ್ಲಾ ನಿಸ್ಸಹಾಯಕತೆಯಿಂದ ಸಹಿಸಿಕೊಂಡಿದ್ದು ಸೋಜಿಗ.
 ಇಂಥದೇ ಇನ್ನೊಂದು ವಿಧಾನಸಭಾ ಅವಧಿ ಬೇಡವೆಂಬ ಪ್ರಬುದ್ಧತೆ ಈಗಲಾದರೂ ಸನ್ಮಾನ್ಯ ಮತದಾರನಿ/ಳಿಗೆ ಬಂದಿರುವುದೇ ಆದರೆ, ವ್ಯಕ್ತಿ ಎಷ್ಟೇ ಶ್ರೇಷ್ಠ ಎಂದೆನಿಸಿದರೂ, ಪಕ್ಷೇತರರನ್ನೂ, ಬಂಡಾಯಗಾರರನ್ನೂ ಬೆಂಬಲಿಸಬೇಡಿ. ನೀರ ಮೇಲಣ ಗುಳ್ಳೆಯಂತಹ ಗುಂಪುಗಳನ್ನು, ’ಪಕ್ಷ’ ಎಂದು ಪರಿಗಣಿಸಬೇಡಿ. ನಿಮ್ಮ ಕ್ಷೇತ್ರದಲ್ಲಿ, ನಿಮ್ಮ ನೆಚ್ಚಿನ ರಾಷ್ಟ್ರೀಯ ಪಕ್ಷ, ಹೊಂದಾಣಿಕೆ ಹೆಸರಿನಲ್ಲಿ ಘಿ, ಙ, Z ಅಭ್ಯರ‍್ಥಿಗಳನ್ನು ನಿಲ್ಲಿಸಿದರೆ, ಮುಲಾಜಿಲ್ಲದೆ ನಿರಾಕರಿಸಿ.
 ಮತದಾರ ಮನಸ್ಸು ಮಾಡಬೇಕಷ್ಟೆ. ಅದಿಲ್ಲದೆ ಚುನಾವಣಾ ಆಯೋಗದ ಕಂದಾಚಾರದ ಸಂಹಿತೆಗಳಿಂದ ಈಚಿiಡಿ & ಈಡಿee ಚುನಾವಣೆ ನಿರೀಕ್ಷೆ ಸಾಧ್ಯವಿಲ್ಲ. 
 

Rating
No votes yet