ಚೆಂಗುಲಾಬಿ
ಮುತ್ತನುದುರಿಸಿದ ಮುಂಜಾವಿನಲಿ
ಮಧು ಹೀರಿ ಮುಗುಳುನಗೆ ಚೆಲ್ಲಿ
ತಂಗಾಳಿಯಲೆಯಲ್ಲಿ ತೊನೆದಿಹಳು ಚೆಂಗುಲಾಬಿ
ಕತ್ತಲಾವರಿಸಿರಲು ಬಾಡಿಹಳು,
ಕೊರೆವ ಚಳಿಯಿರುಳಿನಲಿ, ತಿಂಗಳಿನ ಬೆಳಕಿನಲಿ
ಮಂಕಾಗಿ ಮುದುರಿಹಳು ಚೆಂಗುಲಾಬಿ
ಚೆಂಗುಲಾಬಿಯ ಹಾಗೆ
ನನ್ನ ಎದೆಯಲೂ ಬೇಗೆ,
ಬಾಡಿದರೂ ಬತ್ತದು ಪ್ರೀತಿ ಸೋನೆ
ಒಲವಿನಾ ಬಲದಲ್ಲಿ
ನಲಿವಿರಲಿ ಮನದಲ್ಲಿ
ಏನಾದರೇನು ಭಯವ ಕಾಣೆ
ಪಿ ಬಿ ಷೆಲ್ಲಿಯ To Constantia ಕವನದಿಂದ ಪ್ರೇರಿತ .
Rating
Comments
ಉ: ಚೆಂಗುಲಾಬಿ
ಹೂಮನಸು!