ಚೆಲುವೆಯ ಬಣ್ಣಿಸಲಾಗದೆ

ಚೆಲುವೆಯ ಬಣ್ಣಿಸಲಾಗದೆ

ಚೆಲುವೆಯ ಬಣ್ಣಿಸಲಾಗದೆ
ಕವಿತೆ ಸೋತಿದೆ
ಈ ರೂಪ ಹಿಡಿದಿಡಲು
ಪದಗಳೇ ಸಾಲದೆ

ಈ ನಡಿಗೆಯ ಮೋಡಿಗೆ
ನವಿಲು ನಾಚಿದೆ
ಕುಡಿನೋಟದ ಮಿಂಚಿಗೆ
ಉಪಮೇ ಎಲ್ಲಿದೆ
ತುಟಿ ಅಂಚಿನ
ಕಿರು ನಗೆ ಕಾದಿದೆ

ಮುಖ ಚಂದಿರ ಬೆಳದಿಂಗಳ
ಹಾಲು ಸುರಿದಿದೆ
ಮುಂಗುಳುರಿನ ಮಾಟವು
ಸನಿಹ ಕರೆದಿದೆ
ಈ ಸೊಬಗಿಗೆ
ಹೋಲಿಕೆ ಎಲ್ಲಿದೆ

ಹಗಲಲ್ಲು ಹೊಳೆವ
ತಾರೆ ಇವಳ ಕಂಗಳು
ಸವಿ ಮಾತು
ಅತಿಮಧುರ ಜೇನಿಗಿಂತಲು
ಈ ಕವಿಗೆ ಸವಾಲು ನೀಡಿದೆ.

Rating
No votes yet