ಚೊಚ್ಚಲ ಲೇಖನ ಪ್ರಕೃತಿಗೆ ನಮನ!!

ಚೊಚ್ಚಲ ಲೇಖನ ಪ್ರಕೃತಿಗೆ ನಮನ!!

 

 

ಚೊಚ್ಚಲ ಲೇಖನ ಪ್ರಕೃತಿಗೆ ನಮನ  !!
 
ತನ್ನ ಹುಟ್ಟನ್ನು ತನ್ನ ಪ್ರಭೆಯಿಂದಲೇ ತಿಳಿಸುವಂತೆ
ಹಕ್ಕಿಗಳ ಇಂಚರದ ಮೇಳದೊಡನೆ ಮೂಡಣದಿ ಮೂಡಿಬರುವನು,
ಕವಿಗಳ ಕಲ್ಪನೆಯ ಸಾರಥಿಯಾಗಿ, ಭಾವನೆಗಳ ಹರಿಕಾರನಾಗಿ, ಚಿಣ್ಣರ ಕಣ್ಣಿನ ಹಣ್ಣಾಗಿ,
ಲಲನೆಯರ ಕಣ್ಣಿನ ಮುದವಾಗಿ, ದಿಗಂತದಲ್ಲಿ ಹೆಜ್ಜೆಯಿಡುತಾನೆ ನಮ್ಮ ಸೂರ್ಯ !
 
ಪ್ರಕೃತಿಯ ಅರಮನೆಯ ದೀಪದಂತೆ ವಿಭ್ರಾಜಮಾನನಾಗಿ!
ಜೀವರಾಶಿಯೆಲ್ಲದರ ಚೈತನ್ಯನಾಗಿ - ಆಸ್ತಿಕರ ಪ್ರಾರ್ಥನೆಯ ವಿಶೇಷನಾಗಿ
ಹಗಲಿಗೆ ಹಿತವಾಗಿ - ಸಂಜೆಗೆ ತಂಪಾಗಿ - ಮಧ್ಯದಲಿ ಹುರುಪಿನ ಸಾಕ್ಷಿಯಾಗಿ
ಜೀವನದ ಹಂತಗಳ, ಮೌನದಲೆ ಸಾರುತಿಹ ಜೀವಲೋಕಕೆ ಗುರುವು ನಮ್ಮ ಸೂರ್ಯ !
 
ಸ್ವಪ್ನಗಳ ಸಾರ್ಥತೆಗೆ ಶ್ರಮಿಸುವುದೆ ಸಾಧನವು,  ಜಡತನವ ತ್ಯಜಿಸಿರೈ ಎಂದು ತಿಳಿಸಿ -
ಲಕ್ಷ್ಯವನೆ ಎಂದೆಂದು ಮನದೊಳಗೆ ತಾ ಉಳಿಸಿ - ಉದ್ಯಮಿಸು ನೀ ಜೀವಿ ಎಂದು ಹರಸಿ!
ಮುಂಬರುವ ಜೀವನವ ಕುಗ್ಗದೆಯೆ ಎದುರಿಸು, ಕಷ್ಟಗಳ ಸರಮಾಲೆ ತೃಣದ ಸಾಲು
ಎಂದೆನುತ ಆಶಯವ ಭೂರಿ, ಜೀವದಿ ತುಂಬಿ ಕೈ ಬೀಸುತಾ ಇಳಿವ ನಮ್ಮ ಸೂರ್ಯ !

 

Rating
No votes yet

Comments