ಜಗದಿರುವಿಕೆ (ಶ್ರೀ ನರಸಿಂಹ 71)

ಜಗದಿರುವಿಕೆ (ಶ್ರೀ ನರಸಿಂಹ 71)

ಅಜ್ಞಾನವೆಂಬುವ ಸುಲೋಚನವ ನೀ  ಕಣ್ಣಿಗೆ  ಧರಿಸಿ

ಜಗವ ನೋಡುತಲಿ  ಕಾಣ್ವುದನೆ ನಿಜವೆಂದು ಭ್ರಮಿಸಿ

ಸರಿಯಿಲ್ಲವೀ ಜಗದೊಳಾವುದು ಎನುತ ಗೊಣಗದಿರು

ನಡೆಯುತಿಹುದೆಲ್ಲವ ನೋಡಿ ನೊಂದು  ಮರುಗದಿರು

 

ತನ್ನಿಚ್ಚೆಯೆಂತೆ ನಡೆಸಿಹುದೊಂದು ಶಕ್ತಿ ಈ ಜಗವನೆಲ್ಲ

ವಿವಿಧ ಹೆಸರುಗಳ ನೀಡಿ ಆ ಶಕ್ತಿಯನೆ ನಮಿಸುವೆವೆಲ್ಲ

ವೀಕ್ಷಿಪನು ನಾಟಕದ ತೆರದಿ ಜ್ಞಾನಿಯಾದವ ಈ ಜಗವ

ಮನಸಿನಜ್ಞಾನ ಕಳೆಯಲು ಪಡೆ ನೀನು ಶ್ರೀಹರಿ ಒಲವ

 

ಹಿಂದಿನಿಂದಲೂ, ಮುಂದೆಯೂ ಈಗಿನಂತೆ ನಡೆದಿಹುದೀ ಜಗವು

ಕಳೆವುದೆಲ್ಲ ಕ್ಲೇಷಗಳನು ಜಗದೊಡೆಯ ಶ್ರೀನರಸಿಂಹನ ಜಪವು

Rating
No votes yet

Comments

Submitted by sathishnasa Sun, 10/06/2013 - 14:06

In reply to by nageshamysore

"ಅವನಿಚ್ಚೆಯ ಮೀರಿ ಯಾವುದೂ ನಡೆಯದು ನಮ್ಮೋತೆ ನಡೆದರೂ ಅದು ಅವನಿಚ್ಚೆಯಾಗಿಹುದು " ಧನ್ಯವಾದಗಳು ನಾಗೇಶ್ ರವರೇ ......ಸತೀಶ್