ಜಗಧೀಶ್ವರಿಯ ಗೆಲುವು

ಜಗಧೀಶ್ವರಿಯ ಗೆಲುವು


ಜಗಧೀಶ್ವರಿಯ ಗೆಲುವು

ದೇವ ದುಂದುಬಿ ಮೊಳಗಿತೋ ಜಗಧೀಶ್ವರಿಗೆ  ಗೆಲುವಾಯಿತೋ ||ಪ||

ಸಪ್ತ ಮಾತೃಕೆಯಾಗಿ ಜೀವ ವಿಚಾರಿಸಿದ ಪರಿ ನೋಡಿದು
ರೌದ್ರ ನರ್ತನ ಕಾಲಲೀಲೆಗೆ ದಾನವರ ಕೊನೆಯಾಯಿತೋ
ತಾಮ ವಿಜೃ೦ಭಿಸಿತು ಕೊನೆಯಲಿ ಸಾತ್ವಿಕತೆಯುಳಿವಾಯಿತೋ
ಕಾಮ ಕ್ರೋಧದ ಅಹಮುಮಮಗಳ ಭಾವ ಮುಕುತಿಯ ಕಂಡಿತು ||೧||

ಭಾರತಿಯ ನಿಶ್ಚಲ ಸುಧರ್ಮದ ಸ್ಥೈರ್ಯ ಗಾರುಡಿಯಾಗಿದೆ
ವೈಷ್ಣವಿಯ ಸಿರಿ ಸಂಪದಂಗಳು ಸಾತ್ವಿಕರ ಬೆಂಬಲಿಸಿದೆ
ವೀರೇ ಶಾಂಭವಿ ದೈತ್ಯ ಭಾವ ಸಮೂಲ ನಾಶವ ಗೈದರೆ
ಧೀರೆ ಚಾಮುಂಡೇಶ್ವರಿಯು ಪಾತಕಿಗಳನು ಸಂಹರಿಸಿರೆ ||೨||

ಕೌಶಿಕಿಗೆ ಇಂದ್ರಾಣಿ ಕೌಮಾರಿಯರ ಸೇನಾ ಬಳಗವು
ನಾರಸಿಂಹಿಣಿ ಘೋರಳು ವಾರಾಹಿ ಜೊತೆ ಸಂಚಲನವು
ಭಗವೆ ಜಗದಂಬಿಕೆಯು ಬಗೆಬಗೆ ರೂಪುಗಳು ತಾನಾದಳು
ಸಿಗಿದು ಶುಂಭ ನಿಶುಂಭ ದಾನವ ರಕ್ತಬೀಜರ ಕೊಂದಳು   ||೩||

                                                                   - ಸದಾನಂದ

 
File attachments
Rating
No votes yet