ಜಗ ವಂದ್ಯ

ಜಗ ವಂದ್ಯ

ಚಿತ್ರ

’ಅವನು’ 
ದಿಕ್ಕು ಬದಲಿಸುವಾಗ
ಬದಲಿಸಿ ಸಾಗುತ್ತಲೇ ಇರುವಾಗ
ಹೆದರದಿದ್ದೀತೆ ಜಗ!
 
ದಕ್ಷಿಣವನು ಮುಟ್ಟಿದಾಗ
ಮುಂದೆ ಸಾಗಿಬಿಟ್ಟಾನೆಂಬ 
ಭಯದುದ್ವೇಗ!
 
ಮುಂದೇನು?
ಅಂತ್ಯವಾದರೆ ಯುಗ!
 
ಅವನು 
ಅವನಿಯ ನಲ್ಲ 
ಬಿಡಲೊಲ್ಲ!
 
ಜಾಡ ಹಿಡಿದ
ಹಿಂತಿರುಗಿದ
ಹಿಮ ಕರಗಿಸುತ್ತ 
ಮೋರೆ ಬೆಳಗಿಸುತ್ತ
 
ಅದೇ ಸಂಕ್ರಮಣ 
ಪಥ ಬಿಡದ ಚಲಿತ
ಜನ ಹಿತನು  
ಜಗ ಹೃದಯನು
ಮಿಗಿಲ ವಂದ್ಯನು
ಸಂಕ್ರಾಂತಿ ಪುರುಷನು
 
(Pic courtesy: Pixel)

Rating
No votes yet