ಜನಸ್ನೇಹಿ "ಸ್ಪೀಡ್ ಬ್ರೇಕರ್" ಇರುವ ಬದಲು ಮಾನವ ನಿರ್ಮಿತ ಹಳ್ಳ-ಗುಂಡಿಗಳು

ಜನಸ್ನೇಹಿ "ಸ್ಪೀಡ್ ಬ್ರೇಕರ್" ಇರುವ ಬದಲು ಮಾನವ ನಿರ್ಮಿತ ಹಳ್ಳ-ಗುಂಡಿಗಳು

ಚಿತ್ರ

ತುಂಬಾ ದಿನಗಳ ನಂತರ , ನಮ್ಮ ಸಂಪದದಲ್ಲಿ ಬರೆಯುವಾಸೆ, ಯಾವುದರ ಬಗ್ಗೆ ಬರೆಯಲಿ ಎಂದು ಯೋಚಿಸಿದ ನನಗೆ ನಮ್ಮ ಊರಿನ ವಾಹನಗಳ, ವಾಹನ ಸವಾರರ ಬಗ್ಗೆ ಬರೆಯೋಣವೆನಿಸಿತು.  
*ನಮ್ಮ ಬೆಂಗಳೂರಿನಲ್ಲಿ ಓಡಾಡುವ ವಾಹನಗಳು ದಿನೇ ದಿನೇ ಹೆಚ್ಚಾಗುತ್ತಿವೆ ಹೊರತು ಕಡಿಯಾಗುತ್ತಿಲ್ಲ, ನಮ್ಮ ಸುತ್ತ ಮುತ್ತಲಿನ ರಸ್ತೆಗಳು
ಸೈಟು,ನಿವೇಶನಗಳಾಗಿ ಪದೋನ್ನತ್ತಿ ಹೊಂದುತ್ತಿವೆಯೇ ಹೊರತು ಜನ ಸಂಪರ್ಕ ಸೇತುವೆಗಳಾಗುತ್ತಿಲ್ಲ.
 
ರಸ್ತೆಯಲ್ಲಿ  ನಾನು  ನೋಡಿದ   ಕೆಲವು  ಪ್ರಸಂಗಗಳನ್ನು  ಇಲ್ಲಿ  ಹೇಳಲು  ಇಚ್ಚಿಸುತ್ತೇನೆ,
೧.ಮೊದಲನೆಯದು, ನಮ್ಮ ಮಾಯಾನಗರಿಯಲ್ಲಿ ಟ್ರಾಫಿಕ್ ಸಿಗ್ನಲ್ ರೂಲ್ಸ್ ಫಾಲೋ ಮಾಡುವವರು ತುಂಬಾ ಕಡಿಮೆ, ಟ್ರಾಫಿಕ್ ಪೋಲಿಸ್ ಇರುವಲ್ಲಿ ತುಂಬಾ ನಿಷ್ಠೆಯಿಂದ ಸಿಗ್ನಲ್ನಲ್ಲಿ  ನಿಲ್ಲುವವರು ಇದ್ದಾರೆ.
೨. ನಮ್ಮ ಸಾರ್ವಜನಿಕರು ಫುಟ್ ಪಾತ್  ಮೇಲೆ ಓಡಾಡುವುದು ಅತಿ ವಿರಳ,
(ಕೆಲವೊಂದು ಸ್ತಳಗಳಲ್ಲಿ ಫುಟ್ ಪಾತ್ ಗಳ ಮೇಲೆ ದ್ವಿ ಚಕ್ರ ವಾಹನಗಳ ಭರಾಟೆ ಜೋರಾಗಿರುವುದರಿಂದ ನಾವು ರಸ್ತೆಯಲ್ಲೇ ನಡೆದಾಡುವ ಪರಿಸ್ತಿತಿ ಉಂಟಾಗಿರುತ್ತದೆ.)
೩. ಎಲ್ಲೆಂದರಲ್ಲಿ ರಸ್ತೆ ದಾಟುವ ಜನರು ಕ್ಷಣಕ್ಕೊಮ್ಮೆ ಕಾಣಸಿಗುತ್ತಾರೆ, ಕಾರಣ ನಮ್ಮ ಶಾಲೆಯಲ್ಲಿ ಕಲಿತ "ಜೀಬ್ರಾ ಕ್ರಾಸಿಂಗ್" ಮೇಲೆ ರಸ್ತೆ ದಾಟುವ ಪಾಠ ನೆನಪಿದ್ದರೂ ಸಹ "ಜೀಬ್ರಾ ಕ್ರಾಸಿಂಗ್" ಮೇಲೆ ವಾಹನ ಸವಾರರಿರುತ್ತಾರೆ.
೪. ಜನರ ಸುರಕ್ಷೆಗಾಗಿ ಇರುವ ಪಾದಚಾರಿ ಸುರಂಗ ಮಾರ್ಗಗಳು ಶುಚಿತ್ವ ವನ್ನು ಕಳೆದುಕೊಂಡು ಕಸದ ಕೊಣೆಯಾಗುವ  ಮುನ್ಸೂಚನೆ ಸೂಚಿಸುತ್ತಿರುತ್ತದೆ.
೫. ಅಲ್ಲಲ್ಲಿ ಜನಸ್ನೇಹಿ "ಸ್ಪೀಡ್ ಬ್ರೇಕರ್" ಇರುವ ಬದಲು ಮಾನವ ನಿರ್ಮಿತ ಹಳ್ಳ-ಗುಂಡಿಗಳು ನಮ್ಮ ನಮ್ಮನ್ನು ನಿಧಾನಗತಿಯಲ್ಲಿ ಚಲಿಸಲು ಸೂಚಿಸುತ್ತಿರುತ್ತವೆ.
೬. ಇನ್ನು ಸಂಜೆ ಹೊತ್ತಿನಲ್ಲಿ "ಹೆಡ್ ಲೈಟ್(HEAD LIGHT) ಇಂಡಿಕೇಟರ್(INDICATOR)" ಆನ್ ಮಾಡದೆ ಚಲಿಸುವವರನ್ನು ಈಗಲೂ ನೀವು ನೋಡಬಹುದು.
೭. ಕೆಲವೊಮ್ಮೆ AMBULANCE ವಾಹನ ಬರುತ್ತಿದ್ದರು ಅದಕ್ಕೆ ಜಾಗ ಬಿಡುವ ಬದಲು OVER TAKE ಹೊಡೆಯುವ ಸಾಹಸಿಗಳು ಇದ್ದಾರೆ.
೮.ವಾಹನಗಳು ಚಲಿಸುವ ವಿರುದ್ದ ದಿಕ್ಕಿನಲ್ಲಿ ಅಂದರೆ ONE WAY ನಲ್ಲಿ ಬರುವ ಕೆಲವು ವಾಹನ ಸವಾರರ ಮನಸ್ತಿತಿಗೆ ಕಾರಣ ದುಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಮತ್ತು ಸಮಯದ ಅಭಾವ ಇರಬಹುದು.
೯. ಇದರ ಜೊತೆಗೆ ಅಲ್ಲಲ್ಲಿ ಅಡ್ಡಾದಿಡ್ಡಿ ಓಡಾಡುವ ನಮ್ಮ ಬೀದಿ ಶ್ವಾನಗಳನ್ನು ನಾವು ಮರೆಯುವಂತಿಲ್ಲ.
೧೦. ನಮ್ಮ ರಸ್ತೆಯನ್ನು ಅತಿಕ್ರಮಿಸಿರುವ ಕಸದ ತೊಟ್ಟಿಗಳು ವಾಹನ ಸವಾರರಿಗೆ/ಪಾದಚಾರಿಗಳಿಗೆ ಅನ್ಯ ಮಾರ್ಗಗಳನ್ನು ಹುಡುಕುವಂತೆ ಪ್ರಚೋದಿಸುತ್ತಿರುತ್ತವೆ.

ಈ ಮೇಲಿನ ಹಲವು ಪ್ರಸಂಗಗಳಲ್ಲಿ ನಾವು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಪಾತ್ರಧಾರಿಯಾಗಿ ಅಥವ ಪ್ರೇಕ್ಷಕನಾಗಿರುತ್ತೇವೆ ಮತ್ತು ಕೆಲವೊಂದು ಸಂದರ್ಭಗಳಲ್ಲಿ ತೊಂದರೆಯನ್ನು ಕೂಡ ಅನುಭವಿಸಿರುತ್ತೇವೆ.
    
ಈ ಬ್ಲಾಗ್ ನ ಮೂಲ ಉದ್ದೇಶ "ನಮ್ಮ ಸುರಕ್ಷೆ" ಹಾಗು ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಅಪಘಾತ ತಡೆಯಲು ಒಂದು ಸಣ್ಣ ಪ್ರಯತ್ನ.  

ಎಲ್ಲರೂ ಸುರಕ್ಷಾ ನಿಯಮ ಪಾಲಿಸಿ ಇದು ನಮ್ಮ ನಗರ.

Rating
No votes yet