ಜನುಮ ಜನುಮಗಿಬಂಧ
ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಳಿಸುವಾನಂದ
ಇರಲಿ ಜನುಮ ಜನುಮಗಿಬಂಧ
ಮಾತಿನ ಉಯ್ಯಾಳೆಯಲಿ
ತೂಗಿ ತೇಲಿಸುವವಳಿವಳು
ಮಾತೆಯ ಮಮತೆ ತೋರಿ
ನನ್ನ ಮನವ ಗೆದ್ದವಳು
ಓರೆ ನೋಟಗಳಲ್ಲಿ
ಎಲ್ಲ ತಿಳಿಸುವವಳಿವಳು
ಪ್ರೀತಿಯ ಹುಬಾಣವ ಬಿಟ್ಟು
ನನ್ನ ಒಲವ ಸೆರೆಹಿಡಿದವಳು
ಭಿನ್ನ ಭಿನ್ನದ ತಿಂಡಿ
ಮನೆಯ ಮಂದಿಗೆ ಬಡಿಸಿ
ಮಕ್ಕಳಿಗೆ ಸಕ್ಕರೆಯ ಸಿಹಿಯುಣಿಸಿ
ನನ್ನಾಕೆ ಎಲ್ಲರಲಿ ಒಂದಾದವಳು
ವಾರ ವಾರದ ಪೂಜೆಗೆ
ಮಾತೆ ಬಯಸಿದ ಗುಡಿಗೆ
ಜೊತೆಯಾಗಿ ನನ್ನವಳು
ಅಮ್ಮನ ಮಗುವೆಂದು ಭಾವಿಸುವಳು
ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಳಿಸುವಾನಂದ
ಇರಲಿ ಜನುಮ ಜನುಮಗಿಬಂಧ
****
( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )
Rating
Comments
ಉ: ಜನುಮ ಜನುಮಗಿಬಂಧ
In reply to ಉ: ಜನುಮ ಜನುಮಗಿಬಂಧ by ASHMYA
ಉ: ಜನುಮ ಜನುಮಗಿಬಂಧ
In reply to ಉ: ಜನುಮ ಜನುಮಗಿಬಂಧ by shekarsss
ಉ: ಜನುಮ ಜನುಮಗಿಬಂಧ
In reply to ಉ: ಜನುಮ ಜನುಮಗಿಬಂಧ by shekarsss
ಉ: ಜನುಮ ಜನುಮಗಿಬಂಧ
In reply to ಉ: ಜನುಮ ಜನುಮಗಿಬಂಧ by poornimas
ಉ: ಜನುಮ ಜನುಮಗಿಬಂಧ
ಉ: ಜನುಮ ಜನುಮಗಿಬಂಧ