ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಲೇ ಹೊಟ್ಟೆನೋವು ಕಣೇ ಎಂದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕೋ ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು ನೂರಕ್ಕೆ ನೂರು ಬರಲೇಬೇಕು. ತಲೆಗೂ ಅಷ್ಟೇ ಯಾವಾಗಲು ಹೊಟ್ಟೇದೆ ಯೋಚನೆ. ಯಾಕೋ ಆದರು ಸ್ವಲ್ಪ ಅವಳು ಹೇಳಿರುವದನ್ನು ಅರಗಿಸಿಕೊಳ್ಳಲು ಆಗಲಿಲ್ಲಾ ಏಕಂದ್ರೆ ನಮ್ಮ ಅಪ್ಪ ಹೇಳ್ತಿದ್ರು ನಿನ್ನ ತಲೇಲಿ ಸಗಣಿ ಗೊಬ್ರನೆ ಇರೋದು ಅಂತ. ಈಗ ಶುರುವಾಯಿತು ನೋಡಿ ಗೊಬ್ರನ ಇಲ್ಲ ಹೊಟ್ಟೆನ ಅಂತ. ಸ್ವಲ್ಪ ತಲೆ ಕೆರೆದುಕೊಂಡೆ, ತಲೇಲಿ ಇರುವ ಹೊಟ್ಟು ಸ್ವಲ್ಪ ಕೆಳಗೆಡೆ ಬಿತ್ತು ಮಾತ್ರ. ಉತ್ತರ ಮಾತ್ರ ತನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿ ಮೂಕವಾಗಿ ಕುಳಿತುಬಿಟ್ಟಿತ್ತು....

ಕಡೆಗೆ ಒಬ್ಬ ತಲೆಯ ಡಾಕ್ಟರಗೆ ತೋರಿಸಿ ಬಿಡೋಣವೆಂದು ಯೋಚಿಸಿ, ಶನಿವಾರ ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಹೊರಡೋಣ ಎನ್ನುವಾಗ, ನನ್ನ ಮಡದಿ ರೀ ಎಲ್ಲಿಗೆ ಹೋಗುತ್ತಾ ಇದ್ದೀರ ಎಂದು ಕೇಳಿ ಬಿಟ್ಟಳು . ಮತ್ತೆ ಅಪಶಕುನವೆಂದು ಸ್ವಲ್ಪ ಹೊತ್ತು ಕುಳಿತು, ಆಮೇಲೆ ಹೊರಡಲು ಅನುವಾದೆ. ಅಷ್ಟರಲ್ಲಿ ಮತ್ತೆ ಮಡದಿ ಸ್ವಲ್ಪ ಹರಪು ಆದ ಮೇಲೆ ಹೋಗಿ ಎಂದಳು. ನನಗೆ ಅರ್ಥ ಆಗಲಿಲ್ಲ. ಏನು? ಎಂದೆ. ಬಿಸಿಲುಬಂದ ಮೇಲೆ ಹೋಗಿ ಎಂದಳು. ಮತ್ತೆ ಅಗಲೆ ಏನೋ? ಅಂದೇ ಎಂದು ಕೇಳಿದೆ. ಆದ ಆಡುಭಾಷೆ ಎಂದಳು. ನನಗೆ ತಿಳಿಯುವ ಹಾಗೆ ಹೇಳಬೇಕು ತಾನೇ ಎಂದೆ. ನಿಮ್ಮ ಕುರಿ ತಲೆಗೆ ಆಡು ಭಾಷೆ ಎಲ್ಲಿ ಹೊಳಿಬೇಕು ಎಂದು ಹೇಳಿ ನಗುತ್ತಾ ಅಡುಗೆ ಮನೆಗೆ ಹೊರಟು ಹೋದಳು.

ಕಡೆಗೆ ಧೈರ್ಯ ಮಾಡಿ ಹೊರಟು ನಿಂತೆ, ಅಷ್ಟರಲ್ಲಿ ನನ್ನ ಹೊಟ್ಟೆಯ ಕರೆ ಬಂದೆ ಬಿಟ್ಟಿತ್ತು. ಮತ್ತೆ ಎಲ್ಲವನ್ನು ಮುಗಿಸಿ ನನ್ನ Kinetic ಸ್ಟಾರ್ಟ್ ಮಾಡಿದೆ. ಡಾಕ್ಟರ ಬಳಿ ಹೋಗಿ ನನ್ನ ಎಲ್ಲಾ ದುಃಖವನ್ನು ತೋಡಿಕೊಂಡೆ. ಡಾಕ್ಟರ ಹೇಳಿದರು ನಿಜವಾಗಿಯೂ ಇದು ನನ್ನ ಕೇಸ್ ಅಲ್ಲ. ನೀನು ಹೊಟ್ಟೆಯ ಡಾಕ್ಟರ ಬಳಿ ಹೋಗು ಎಂದು ಕಳಿಹಿಸಿದರು. ಮತ್ತೆ ಬಂದ ದಾರಿಗೆ ಸುಂಕವಿಲ್ಲ ಅಂತ Kinetic ಏರಿ ಹೊಟ್ಟೆಯ ಡಾಕ್ಟರ ತಲುಪಿದೆ. ಅವರು ತಪಾಸಣೆ ಮಾಡಿ ೫ ಮಾತ್ರೆ ಬರದು ಕೊಟ್ಟರು, ಡಯಟಿಂಗ್ ಮತ್ತು ವ್ಯಾಯಾಮ ಮಾಡಲು ಹೇಳಿದರು. ಒಂದು ವಾರದ ನಂತರ ಬಂದು ಭೇಟಿಯಾಗಿ ಅಂತ ಹೇಳಿದರು.

ನಡಯಿತು ನನ್ನ ಹೊಟ್ಟೆ ನೋವನ್ನು ಹೊಡೆದೋಡಿಸುವ ಮಹಾ ಸಮರ. ಸಮರವೇನೋ ನಡೀತಾನೆ ಇತ್ತು ಆದರೆ ಹೊಟ್ಟೆನೋವು ಮಾತ್ರ ಕಮ್ಮಿ ಆಗಲಿಲ್ಲ. ಒಂದು ವಾರದ ನಂತರ ಹೋಗಿ ಮತ್ತೆ ಭೇಟಿಯಾಗಿ ಬಂದೆ. ಡಾಕ್ಟರ್ ಎಂಡೊಸ್ಕೊಪೀ ಮಾಡಿಸುತ್ತೇನೆ ಮುಂದಿನ ವಾರ ಬನ್ನಿ ಎಂದರು. ಮತ್ತೊಂದು ವಾರ ಬಿಟ್ಟು ಡಾಕ್ಟರ್ ಬಳಿ ಹೋದೆ. ಡಾಕ್ಟರ್ ದೊಡ್ಡ ಪೈಪ್ ತೆಗೆದುಕೊಂಡು ಗಂಟಲಲ್ಲಿ ಸಿಕ್ಕಿಸಲು ಹೋದರು. ಸರ್, ಇಷ್ಟು ದೊಡ್ಡದ್ದು ಎಂದೆ. ನಾನು ಆ ಚಿಕ್ಕ ಪೈಪ್ ಎಂದು ಕೊಂಡಿದ್ದೆ ಎಂದು ಚಿಕ್ಕ ಪೈಪ್ ತೋರಿಸಿದೆ. ಅದಕ್ಕೆ ಅವರು ನಗುತ್ತಾ ಅದು ಚಿಕ್ಕ ಮಕ್ಕಳಿಗೆ ಎಂದು ಗಂಟಲಲ್ಲಿ ತುರುಕಿದರು.

ಕಡೆಗೆ ಎಲ್ಲಾ ಪರೀಕ್ಷೆ ಮುಗಿದ ಮೇಲೆ, ರೀ ನಿಮ್ಮ ಕಡೆ ಒಂದೆರಡು ಲಕ್ಷ ಇದೆ ತಾನೇ ಎಂದರು. ಸರ್ ಎಂದೆ. ನಿಮಗೆ ಆಪರೇಶನ್ ಮಾಡಬೇಕು ಕಣ್ರೀ ಎಂದರು . ನಾನು ಗಾಬರಿ . ಏನು ಇಲ್ಲ ಕಣ್ರೀ ಸುಮ್ಮನೇ ತಮಾಷೆ ಮಾಡಿದೆ. ನಿಮಗೆ ಏನು ಆಗಿಲ್ಲ ಸುಮ್ಮನೇ ನಿಮ್ಮ ತಲೇಲಿ ಹಾಗೆ ಅನ್ನಿಸುತ್ತೆ ಅಷ್ಟೇ ಎಂದರು. ನನ್ನ ಹೆಂಡತಿ ಹೇಳಿದ ಮಾತು ನೆನಪು ಆಯಿತು. ಮೊದಲೇ ಇಷ್ಟೇ ಎಂದು ಗೊತ್ತಿದ್ದರೆ ಸುಮ್ಮನೇ ಇಲ್ಲಿ ಬರುತ್ತಿರಲಿಲ್ಲ ಎಂದುಕೊಂಡೆ. ಡಾಕ್ಟರ್ ಮತ್ತೆ ಒಂದು ವರ್ಷದವರೆಗೆ ಈ ಮಾತ್ರೆ ತೆಗೆದು ಕೊಳ್ಳಿ ಎಂದು ಹೇಳಿ ಕಳುಹಿಸಿದರು.

ಒಂದು ವರ್ಷ ಮಾತ್ರೆ ನುಂಗಿ ನುಂಗಿ ಹೊಟ್ಟೆಲೆ ಮಾತ್ರೆಗಳ ಫ್ಯಾಕ್ಟರಿನೆ ಹುಟ್ಟಿಕೊಂಡಿದೆ. ಇದನ್ನ ಹೇಗಾದರೂ ಮಾಡಿ ಕಂಡು ಹಿಡಿಯಲೇಬೇಕೆಂದು ಪಣ ತೊಟ್ಟು ಯೋಚಿಸ್ದಾಗ ಗೊತ್ತಾಯಿತು. ೪ ವರ್ಷಗಳ ಹಿಂದೆ ಹೊಟ್ಟೆನೋವನ್ದ್ರೆನೆ ಗೊತ್ತಿಲ್ದಿರೋ ನನಗೆ ಇದು ಹೇಗೆ ಬಂತು ಅಂತ. ಆಗ ನನ್ನನ್ನ ನಾನು ಯಾವುದಾದರು ಕೆಲಸದಲ್ಲಿ ತೊಡಗಿಸ್ಕೊಂಡು ಸ್ವಲ್ಪ ಬ್ಯುಸಿ ಇರ್ತಿದ್ದೆ. ಈಗ ಸ್ವಲ್ಪ ಆಲಸಿ ಆಗಿದ್ದೇನೆ ಅನ್ನಿಸುತ್ತೆ. ಅದಕ್ಕೆ ಹೊಟ್ಟೆ ತಲೆಲ್ಲಿ ಮನೆ ಮಾಡಿದೆ. ಆಗ ನೆನಪಾಗಿದ್ದು (Idle mind is devils workshop) ಅಂತ. ನನ್ನ ಮಟ್ಟಿಗೆ Devil ಅಂದ್ರೆ ಹೊಟ್ಟೇನೆ ಇರಬೇಕು.ಅದಕ್ಕೆ ನನ್ನನ್ನ ನಾನು ಬ್ಯುಸಿಯಾಗಿಟ್ಟು ಕೊಂಡಿದ್ದೇನೆ. ಈಗ ನಾನು ಎದೆ ತಟ್ಟಿ ನನ್ನ ಹೆಂಡತಿಗೆ ಹೇಳಬಹದು. ನನಗೆ ಹೊಟ್ಟೆನೋವಿಲ್ಲ ಅಂತ ಎದೆ ನೋವು ಬರದಿರಲೆಂದು ಆಶಿಸುತ್ತೇನೆ. ...

Rating
Average: 5 (1 vote)

Comments