ಜನ್ಮಾಂತರ
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಜನ್ಮಾಂತರದ್ದೇ ಸುದ್ದಿ. ಯಾವುದೇ ಖಾಸಗಿ ದೂರದರ್ಶನ ಚಾನೆಲ್ ನೋಡಿದರೂ ಜನ್ಮಾಂತರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳ ಸುರಿಮಳೆ. ಹೀಗೆ ಹೇಳಿದಾಕ್ಷಣ ನಾನು ಇದರ ಬಗ್ಗೆ ತಾತ್ಸಾರಗೊಂಡಿದ್ದೇನೆಂದು ಅಲ್ಲ.
ಹಿಂದೆ ಏನಾಗಿದ್ದೇ ಏನಾಗಿರಲಿಲ್ಲ. ಇದರಬಗ್ಗೆ ನನಗೇ ಗೊತ್ತಿಲ್ಲ. ಆದರೂ ನಾನು ಕಂಡ ಸತ್ಯ ವನ್ನು ಹೀಗೆ ಹೇಳುತ್ತಿದ್ದೇನೆ. ಮೊದಲ ರೂಪದಲ್ಲಿ ಯಾರೂ ಗಮನಿಸಲಿಲ್ಲ. ನಂತರ ಎಲ್ಲರ ಗಮನ ಸೆಳದು ಮುದ ನೀಡುವ ರೂಪ, ನಂತರ ಗಮನಿಸಿದವರಿಗೆ ಮಾತ್ರಾ ಕುತೂಹಲ ಮೂಡಿಸುವ ರೂಪ ಹೀಗೆ ಜನ್ಮಾಂತರ ತಳೆದ ಹೂವಿನ ಬಗ್ಗೆ ಹೇಳುತ್ತಿದ್ದೇನೆ.
ಇದು ನಮ್ಮೂರಿನಲ್ಲಿ ಬೀಳು ಜಾಗಗಳಲ್ಲಿ ಹುಟ್ಟಿಕೊಂಡು ಬೆಳೆಯುವ ಕಂಟಿಯ ಹೂವು. ಮೊಗ್ಗಾದಾಗಲೂ ಯಾರೂ ಗಮನಿಸುವುದಿಲ್ಲ. ಗಿಡದ ತುಂಬಾ ಹೂವಾಗಿ ಜಗವ ಸಿಂಗರಿಸಿ, ನಂತರ ಅಳಿದ ಮೇಲೆ ಯಾರ ಗಮನಕ್ಕೂ ಬಾರದೆಇದ್ದರೂ ನನ್ನ ಗಮನ ಸೆಳೆದು, ಮಣ್ಣಲ್ಲಿ ಮಣ್ಣಾಗುವ ಗಿಡದ ಹೂವಿನ ಮೂರು ಜನ್ಮಾಂತರ (ರೂಪಾಂತರ) ವನ್ನು ನಾನು ಕಣ್ಣಾರೆ ಕಂಡಿದ್ದರಿಂದ ನಂಬಲೇ ಬೇಕಾದ ಸತ್ಯ. ನೀವು ನಂಬಲಿಕ್ಕಾಗಿ ಈ ಚಿತ್ರ ಲೇಖನ
Comments
ಉ: ಜನ್ಮಾಂತರ