ಜಮಾನಾದ ಕಥೆಗಳು - ಅಳುವಿಗೆ ಕಾರಣ
ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರೆದುಕೊಂಡು ಬಂದರು; ಅದರಲ್ಲಿ ಒಬ್ಬ ಮುದುಕ ಮತ್ತೊಬ್ಬ ಹದಿಹರೆಯದ ಯುವಕ. ರಾಜನ ಸೇವಕರು ಅವರಿಬ್ಬರಿಗೂ ಒಂದೇ ತಟ್ಟೆಯಲ್ಲಿ ಊಟಬಡಿಸಿದರು. ಸ್ವಲ್ಪ ಹೊತ್ತಿಗೆ ಇಬ್ಬರೂ ಗೋಳೋ ಎಂದು ಅಳಲು ಷುರು ಮಾಡಿದರು. ಆಗ ರಾಜನಿಗೆ ಕುತೂಹಲ ಉಂಟಾಗಿ ಅವರ ಅಳುವಿಗೆ ಕಾರಣವೇನೆಂದು ಕೇಳಿದ. ಆಗ ಮುದುಕ ಹೇಳಿದ, "ಮಹಾಸ್ವಾಮಿ, ನಾನು ಹಲ್ಲಿಲ್ಲದ ಮುದುಕ ನಾನು ನಿಧಾನವಾಗಿ ಅನ್ನವನ್ನು ಜಗಿದು ಉಣ್ಣುತ್ತಿದ್ದರೆ, ಹಲ್ಲಿರುವ ಆ ಹುಡುಗ ಆಹಾರವನ್ನು ಚಕಚಕನೇ ಅಗಿದು ನನಗಿಂತ ಹೆಚ್ಚಿಗೆ ಆಹಾರವನ್ನು ತಿನ್ನುತ್ತಿದ್ದಾನೆ, ನನಗೆ ಹೆಚ್ಚು ಆಹಾರವನ್ನು ತಿನ್ನಲಾಗುತ್ತಿಲ್ಲವೆಂಬ ದುಃಖದಿಂದ ಅಳು ಬರುತ್ತಿದೆ". ಆಗ ರಾಜ ಆ ಯುವಕನನ್ನು ತನ್ನ ಅಳುವಿಗೆ ಕಾರಣವೇನೆಂದು ಕೇಳಿದ, ಆಗ ಆ ಯುವಕ ಉತ್ತರಿಸಿದ, "ಮಹಾಸ್ವಾಮಿ, ನಾನು ಹಲ್ಲಿನಿಂದ ನಿಧಾನವಾಗಿ ಆಹಾರವನ್ನು ಅಗಿದು ತಿನ್ನುತ್ತಿದ್ದರೆ, ಹಲ್ಲಿಲ್ಲದ ಆ ಮುದುಕ ಆಹಾರವನ್ನು ಸರಿಯಾಗಿ ಅಗಿಯದೇ ಗಬಗಬನೇ ನುಂಗಿ ನನಗಿಂತ ಹೆಚ್ಚು ಉಣ್ಣುತ್ತಿದ್ದಾನೆ ಅದಕ್ಕೇ ನಾನು ಆ ದುಃಖವನ್ನು ತಡೆದುಕೊಳ್ಳಲಾಗದೇ ಅಳುತ್ತಿದ್ದೇನೆ". ಇವರಿಬ್ಬರ ಮಾತನ್ನು ಕೇಳಿಸಿಕೊಂಡ ರಾಜನಿಗೆ ನಗಬೇಕೋ ಅಳಬೇಕೋ ತಿಳಿಯದೇ ಇಬ್ಬರಿಗೂ ಬೇರೆ ಬೇರೆ ತಟ್ಟೆಯಲ್ಲಿ ಅನ್ನವಿಡಿಸಿದನೆನ್ನಿ.
Comments
ನಿಜ ಶ್ರ್ರೀಧರ್ ರವರೆ ಮನುಷ್ಯನಿಗೆ
ನಿಜ ಶ್ರ್ರೀಧರ್ ರವರೆ ಮನುಷ್ಯನಿಗೆ ಏನಿದ್ದರು ಏನಿಲ್ಲದಿದ್ದರು ಅಷ್ಟೆ ಸದಾ ಅತೃಪ್ತಿ
ಬಹಳ ದಿನಗಳ ನಂತರದ ತಮ್ಮ ಬರಹ ನೋಡಿದೆ ಖುಷಿ ಆಯ್ತು
In reply to ನಿಜ ಶ್ರ್ರೀಧರ್ ರವರೆ ಮನುಷ್ಯನಿಗೆ by partha1059
ಬಹಳ ದಿನಗಳ ನಂತರ ಸಂಪದದಲ್ಲಿ
ಬಹಳ ದಿನಗಳ ನಂತರ ಸಂಪದದಲ್ಲಿ ಬರಹವನ್ನು ಸೇರಿಸಿದ್ದಕ್ಕೆ ನನಗೂ ಸಹ ನಿಮ್ಮಷ್ಟೇ ಆನಂದವಾಗುತ್ತಿದೆ ಪಾರ್ಥರೆ. ಡಿಸೆಂಬರ್ ತಿಂಗಳಿನಿಂದ ಹಿಡಿದು ಮೊನ್ನೆಯವರೆಗೆ ಬಹಳಷ್ಟು ಕಾರ್ಯಕ್ರಮಗಳು ಒಂದರ ನಂತರ ಒಂದು ಬಿಡುವಿಲ್ಲದೆ ಬಂದವು. ಹಾಗಾಗಿ ಸಂಪದ ಓದುವುದಿರಲಿ ಇಂಟರ್ ನೆಟ್ ಅನ್ನೇ ಬಳಸುವುದು ಅಪರೂಪವಾಗಿ ಹೋಗಿತ್ತು. ಕೇವಲ ಮೇಲ್ ಗಳನ್ನು ಓದುವುದಕ್ಕಷ್ಟೇ ಬಹುತೇಕ ಪರಿಮಿತವಾಗಿ ಬಿಟ್ಟಿತ್ತು. ಇದರ ನಡುವೆಯೂ ಸಂಪದದ ಹಿರಿಯ ಮಿತ್ರರಾಗಿರುವ ಕೃಷ್ಣ ಕುಲಕರ್ಣಿಯವರು ಒಂದೆರಡು ಇಂಗ್ಲೀಷ್ ಬರಹಗಳನ್ನು ಅನುವಾದ ಮಾಡುವ ಅವಕಾಶವನ್ನು ನನಗೆ ಒದಗಿಸಿಕೊಟ್ಟರು. ಅವುಗಳಲ್ಲಿ ಒಂದು ಕ್ಯಾಡಿಲಾ ಕಂಪನಿಯ ಸಂಸ್ಥಾಪಕರಾದ ಐ.ಏ. ಮೋದಿಯವರ ಕುರಿತ ಲೇಖನವು ಒಂದಾದರೆ ಮತ್ತೊಂದು ೧೯ರಿಂದ ೨೩ರವರೆಗೆ, ನಾಳೆಯಿಂದ ಐದು ದಿನಗಳವರೆಗೆ ನಡೆಯುವ ಹಿಂದೂ ಸಂಘ ಸಂಸ್ಥೆಗಳ ಸಮ್ಮೇಳನದ ಹಿನ್ನಲೆಯ ಕುರಿತಾದ ಲೇಖನವಿದೆ. ಅದನ್ನು ಸಂಪದದಲ್ಲಿ ಪ್ರಕಟಿಸಲು ಅವರ ಅನುಮತಿಗಾಗಿ ಕಾಯುತ್ತಿದ್ದೇನೆ, ಪರವಾನಿಗಿ ಸಿಕ್ಕ ಕೂಡಲೇ ಪ್ರಕಟಿಸುತ್ತೇನೆ.
ಇಷ್ಟು ದಿವಸ ಸಂಪದವನ್ನು ಬಹುವಾಗಿ ಮಿಸ್ ಮಾಡಿಕೊಂಡೆ, ಈಗ ಮತ್ತೆ ಸಂಪದದಲ್ಲಿ ಸಕ್ರಿಯನಾಗುತ್ತೇನೆ. ನಿಮ್ಮ ಸುಳಿ ನಾಟಕದ ಬಗ್ಗೆಯೂ ಲೇಖನವನ್ನು ನಿರೀಕ್ಷಿಸುತ್ತೇನೆ. ನೀವು ಗಣೇಶರಿಗೆ ಬರೆದಿರುವ ಪ್ರತಿಕ್ರಿಯೆಯಿಂದ ನಾಟಕ ಬಹಳ ಯಶಸ್ವಿಯಾಯಿತೆಂದು ತಿಳಿದು ಸಂತೋಷವಾಗುತ್ತಿದೆ. ಅದಕ್ಕೆ ಅಭಿನಂದನೆಗಳು ಪಾರ್ಥರೆ.
In reply to ಬಹಳ ದಿನಗಳ ನಂತರ ಸಂಪದದಲ್ಲಿ by makara
ಜೀ-ಹಲವು ದಿನಗಳ ನಂತರ ನಿಮ್ಮ
ಜೀ-ಹಲವು ದಿನಗಳ ನಂತರ ನಿಮ್ಮ ಬರಹಗಳ ಪ್ರವಾಹವೇ ಬರುತ್ತಿದೆ..ಖುಷಿ ಆಯ್ತು..
ಬಿಡುವಿಲ್ಲದ ದಿನ ಚರಿ ಮಧ್ಯೆ ಸಂಪದ ಇಲ್ಲದೆ-ಇಲ್ಲದ ಹೊತ್ತು ಕಳೆಯೋದು ಕಸ್ಟ /....
ಇಲ್ಲಿ ಬರುವ ಹಲವು ಬರಹಗಳಿಗೆ ನೀವು ಗಣೇಶ್ ಅಣ್ಣ-ಗುರುಗಳು ಮತ್ತಿತರ ಹಿರಿಯರು ಓದಿ ಪ್ರತಿಕ್ರಿಯಿಸಿದರೆ ಆ ಬರಹಗಳಿಗೆ ಒಂದು ಮೌಲ್ಯ ಬರುವುದು ಎಂದು ನಾ ವಯುಕ್ತಿಕವಾಗಿ ಹೇಳಬಲ್ಲೆ....
ನಿಮ್ಮೀ ಬರಹ-ನನಗೆ ಅದೇ ಹಿಂದಿನ ಕಥೆ-ಅವನಿಗೆ ಕೊಟ್ಟ ಬಹುಮಾನದ ಎರಡು ಪಟ್ಟು ನನಗೆ ಕೊಡಿ ಎಂದು ಕಣ್ಣು ಕಳೆದುಕೊಂಡವರ-ಬಾರುಕೋಲು ಏಟು ತಿಂದವರ ನೆನಪು ಆಯ್ತು.!
ಇದಕೆ ಇರ್ಬೇಕು ಹಲ್ಲಿದ್ದವನಿಗೆ ಕಡಲೆ ಚಿಂತೆ-ಕಡಲೆ ಇರ್ವವನಿಗೆ ಹಲ್ಲಿನ ಚಿಂತೆ...!
ಆದರೆ ಇಲ್ಲಿ ಇಬ್ಬರಿಗೆ ಏನೆಲ್ಲಾ ಕೊಟ್ಟರೋ ಪರರ ಸ್ವತ್ತಿನ ತುತ್ತಿನ ಮೇಲೆ ಕಣ್ಣು...ವಕ್ರ ದೃಷ್ಟಿ...!
ಶುಭವಾಗಲಿ..
\।
In reply to ಜೀ-ಹಲವು ದಿನಗಳ ನಂತರ ನಿಮ್ಮ by venkatb83
ಮನುಷ್ಯನ ಸ್ವಭಾವವೇ ಹಾಗಲ್ಲವೇ?
ಮನುಷ್ಯನ ಸ್ವಭಾವವೇ ಹಾಗಲ್ಲವೇ? ತನಗೆ ಏನು ಲಾಭ ಆಗುತ್ತಿದೆ ಎನ್ನುವುದಕ್ಕಿಂತ ಇನ್ನೊಬ್ಬನಿಗೆ ಏಷ್ಟು ಲಾಭ ಆಗುತ್ತಿದೆ ಎಂದು ನೋಡಿಕೊಂಡು ಹೊಟ್ಟೆಕಿಚ್ಚು ಬೀಳುವವರೇ ಜಾಸ್ತಿ. ಎಲ್ಲರ ಬರಹಗಳನ್ನು ಓದಿ ಅದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯಿಸುವ ನಿಮಗೆ ಧನ್ಯವಾದಗಳು, ಸಪ್ತಗಿರಿಗಳೇ. ಇತ್ತೀಚೆಗೆ ನಿಮ್ಮ ಬಹಳಷ್ಟು ಬರಹಗಳನ್ನು ನಾನು ಓದಲಾಗಲಿಲ್ಲ; ಆದರೆ ಓದಿದವುಗಳೆಲ್ಲವೂ ಸೂಪರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿಕ್ರಿಯೆಯೊಂದರಲ್ಲಿ ಹೇಳಿರುವಂತೆ ನಿಮ್ಮ ಲೈಫ್ ಆಫ್ ಪೈ ಓದಿದ ಮೇಲೆಯೇ ನಾನು ಸಕುಟುಂಬ ಸಮೇತ ಆ ಸಿನಿಮಾವನ್ನು ನೋಡಲು ಮನಸ್ಸು ಮಾಡಿದ್ದು. ಇತ್ತೀಚೆಗೆ ನಿಮ್ಮ ಮಾಡರ್ನ್ ಟೈಮ್ಸ್ ಮತ್ತು ನಿಂಜಾ ಅಸ್ಯಾಸಿನ್ ಮೇಲಿನ ಬರಹ ಓದಿದೆ. ಅವುಗಳನ್ನು ನೆಟ್ನಲ್ಲಿಯಾದರೂ ನೋಡುತ್ತೇನೆ.
ಪ್ರಿಯ ಶ್ರೀಧರ್, ಸೊಗಸಾದ ನೀತಿ
ಪ್ರಿಯ ಶ್ರೀಧರ್, ಸೊಗಸಾದ ನೀತಿ ಬಿಂಬಿಸಿದ ಚುಟುಕು!
In reply to ಪ್ರಿಯ ಶ್ರೀಧರ್, ಸೊಗಸಾದ ನೀತಿ by kavinagaraj
ಧನ್ಯವಾದಗಳು, ಕವಿಗಳೆ.
ಧನ್ಯವಾದಗಳು, ಕವಿಗಳೆ.