ಜಮಾನಾದ ಜೋಕುಗಳು - ೨೧: ಮಹಾನ್ ಪ್ರೇಮಿ!

ಜಮಾನಾದ ಜೋಕುಗಳು - ೨೧: ಮಹಾನ್ ಪ್ರೇಮಿ!

 

ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಕೊಡಲೆಂದು ಗ್ರೀಟಿಂಗ್ ಕಾರ್ಡುಗಳ ಮಳಿಗೆಯೊಂದನ್ನು ಹೊಕ್ಕ. ಅಲ್ಲಿರುವ ಬಹುತೇಕ ಕಾರ್ಡುಗಳನ್ನೆಲ್ಲಾ ತಾಸುಗಟ್ಟಲೆ ತಿರುವಿ ಹಾಕಿದ. ಊ....ಹ್ಞೂ, ಯಾವುದೂ ಅವನ ಮನಸ್ಸಿಗೆ ಬರಲಿಲ್ಲ. ಇವನ ತಲ್ಲೀನತೆಯನ್ನು ಕಂಡು ಅಲ್ಲಿಯ ಸೇಲ್ಸ್ ಗರ್ಲಿಗೂ ಅನ್ನಿಸಿತು, ಆಹಾ! ಎಂಥಾ ಪ್ರೇಮಿ, ಕೇವಲ ಒಂದು ಕಾರ್ಡಿಗಾಗಿ ಎಷ್ಟೆಲ್ಲಾ ಹುಡುಕಾಡುತ್ತಿದ್ದಾನೆ. ಸರೆ ಅವಳೂ ಅವನೊಂದಿಗೆ ಹುಡುಕುತ್ತಾ ಕಡೆಗೊಂದು ಕಾರ್ಡನ್ನು ತೋರಿಸಿ, ನೋಡಿ ಇದು ನಿಮಗೆ ಮೆಚ್ಚುಗೆಯಾಗಬಹುದೆಂದಳು. 
ಅದರಲ್ಲಿ ದೊಡ್ಡ ಅಕ್ಷರಗಳಲ್ಲಿ ಹೀಗಿತ್ತು: "ನಾನು ಪ್ರೇಮಿಸುವ ಏಕೈಕ ಹುಡುಗಿಗೆ" 
"ಹ್ಞಾ......ಇದನ್ನೇ ನಾನು ಹುಡುಕುತ್ತಿದ್ದದ್ದು, ಒಂದು ಡಝನ್ ಕಾರ್ಡುಗಳನ್ನು ಕೊಡಿ!" ಎಂದನಾ ಪ್ರೇಮಿ.
 
Rating
No votes yet

Comments

Submitted by venkatb83 Mon, 02/18/2013 - 16:51

ಗುರುಗಳೇ-ಈ ಬರಹ ನೋಡಿ ಓದಿ ಆ ಸಿನೆಮ ನೋಡದೆ ಇರಬೇಡಿ...!!
ಆ ಎಲ್ಲ ನ್ಯೂನ್ಯತೆಗಳ ಹೊರತಾಗಿಯೂ ನೋಡಿ ಎಂಜಾಯ್ ಮಾಡಬಹುದಾದ ಸಿನೆಮ-ಆದ್ರೆ ಕೊನೆಯ ಅಕಾರ್ಯಚರಣೆ ಮಧ್ಯರಾತ್ರಿಯದ್ದರಿಂದ ಸನ್ನಿವೇಶಗಳು ಸ್ಪುಸ್ಥವಾಗಿ ಕಾಣಿಸವು....
ಬಿನ್ ಲಾಡೆನ್ ತನ್ನ ರೂಮಿಂದ ಆಚೆ ಬನದ ಕ್ಷಣದಲ್ಲೇ ಅವನನ್ನ ಸದ್ದಿಲ್ಲದೇ ಹೊಡೆದು(ಗನ್ನಲ್ಲಿ) ಸಾಯಿಸುವುದು-ಯಾಕೋ ಅಸಹಜ ಅನ್ಸತ್ತೆ...!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..

\।

Submitted by swara kamath Fri, 02/22/2013 - 12:25

ಬಂಡ್ರಿ ಯವರೆ ತಮ್ಮ ಈ ಜಮನಾದ ಜೋಕುಗಳ ಸರಣಿ ಮುಂದುವರೆಯಲಿ .ಮನಸ್ಸು ಕ್ಷಣಹೊತ್ತು ಮುದಗೊಳ್ಳುತ್ತೆ.ತಮ್ಮ ಎಂದಿನ ಬರೆವಣಿಗೆಗಳ ಮೂಲಕ ನಮ್ಮನ್ನು ಸದಾ ಉತ್ಸುಹಕತೆಯಿಂದಿಡಿ. ವಂದನೆಗಳು

Submitted by makara Sat, 02/23/2013 - 13:40

In reply to by swara kamath

ಜಮಾನಾದ ಜೋಕುಗಳನ್ನು ಓದಿ ನಲಿದು ನನ್ನನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು, ಕಾಮತ್ ಸರ್. ಖಂಡಿತಾ ಈ ಸರಣಿಯನ್ನು ಮತ್ತೆ ಮೊದಲಿನಂತೆ ಮುಂದುವರೆಸುತ್ತೇನೆ.