ಜಮಾನಾದ ಜೋಕುಗಳು ೨೫: ಗುಂಡನ ಇಂಗ್ಲೀಷ್ ಕಲಿಕೆ
ನಮ್ಮ ಗುಂಡನಿಗೆ ಇಂಗ್ಲೀಷ್ ಕಲಿತು ಇಂಗ್ಲೀಷ್ನಲ್ಲೇ ಮಾತಾಡಬೇಕೆಂಬ ವ್ಯಾಮೋಹ. ಸರಿ ಕಾನ್ವೆಂಟ್ ಹುಡುಗರ ಹತ್ತಿರ ಹೋಗಿ ತನಗೂ ಇಂಗ್ಲೀಷ್ ಕಲಿಸಿಕೊಡಿರೆಂದು ಅಲವತ್ತುಕೊಂಡ. ಆ ಹುಡುಗರು ಇವನ ಆತುರತೆಯನ್ನು ನೋಡಿ ಮೂರು ಶಬ್ದಗಳನ್ನು ಹೇಳಿಕೊಟ್ಟರು: "Yes, No, Alright". ಇಷ್ಟು ಕಲಿತ ಗುಂಡನಿಗೆ ಸ್ವರ್ಗ ಮೂರೇ ಗೇಣು ಉಳಿಯಿತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲಿ ತನ್ನ ಸಾಮಾನು ಕಳೆದುಕೊಂಡ ವಿಲಾಯತಿ ಒಬ್ಬ ಇವನನ್ನು ಕೇಳಿದ, "Sir, did you find my suitcase?" ಗುಂಡ ತಕ್ಷಣವೇ ಉತ್ತರಿಸಿದ "Yes". ಆಗ ಆ ವಿಲಾಯತಿಯವ ಇವನನ್ನು ಮರು ಪ್ರಶ್ನಿಸಿದ, "Will you give it back?" ಆಗ ಗುಂಡ, "No". " If you don't give back my baggage I will inform the police" ಎಂದ ಆ ಕೆಂಪು ಮೋರೆಯ ವಿಲಾಯತಿ. "Alright" ತಡಮಾಡದೆ ಉತ್ತರಿಸಿದ ನಮ್ಮ ಗುಂಡ. ಇನ್ನು ಬಿಟ್ಟಾನೆಯೆ ಆ ವಿಲಾಯತಿ ಇವನನ್ನು ಕರೆದುಕೊಂಡು ಹತ್ತಿರದ ಪೋಲೀಸ್ ಠಾಣೆಗೆ ಒಪ್ಪಿಸಿದ. ಪೋಲಿಸರು ಕೂಡ ಅವನನ್ನು ಅದೇ ಪ್ರಶ್ನೆ ಕೇಳಿದರು, "Did you find his suit-case?" "Yes" ಅಂದ ಗುಂಡ. "Will you give it back" ಪೋಲೀಸರ ಮರು ಪ್ರಶ್ನೆ. "No" ಉತ್ತರ ಸಿದ್ದವಿತ್ತು. "If you don't give it you will be punished" ಎಂದರು ಪೋಲಿಸರು. "Alright" ಥಟ್ಟನೆ ಬಂತು ಗುಂಡನ ಉತ್ತರ. ಇನ್ನು ಬಿಟ್ಟಾರೆಯೆ ಪೋಲಿಸರು, suit-caseಅನ್ನು ಹಿಂತಿರುಗಿಸೆಂದು ಅವನಿಗೆ ಲಾಠಿ ರುಚಿ ತೋರಿಸಹತ್ತಿದರು. ಆಗ ಒದೆ ತಿನ್ನಲಾರದೆ, ಗುಂಡ ಬಾಯ್ಬಾಯ್ ಬಡಕೊಂಡು ಕಸ್ತೂರಿ ಕನ್ನಡದಲ್ಲಿ ವಿಷಯವನ್ನು ತಿಳಿಸಿದಾಗಲೇ ಪೋಲೀಸರಿಗೆ ವಸ್ತುಸ್ಥಿತಿಯ ಅರಿವಾಗಿ ಗುಂಡನನ್ನು ಬಿಟ್ಟರೆನ್ನಿ. ಆಗಿನಿಂದ ಕನ್ನಡಾಂಬೆಗೆ ಜೈ ಎನ್ನುವುದನ್ನು ರೂಢಿ ಮಾಡಿಕೊಂಡ ನಮ್ಮ ಗುಂಡ.
Comments
ಇದು ಜಮಾನಾದ ಜೋಕಾದ್ದರಿಂದ
ಇದು ಜಮಾನಾದ ಜೋಕಾದ್ದರಿಂದ ಸರಿಯಾಗಿದೆ. ಈಗ ಕನ್ನಡ ಮಾತಾಡಿದರೆ ಅರ್ಥವಾಗುವುದಿಲ್ಲ. ಏಕೆಂದರೆ ಗುಂಡ ಅಲ್ಲ ಎಲ್ಲಾ ಭಂಡರೂ ಅವಿದ್ಯಾವಂತರಾದರೂ ಇಂಗ್ಲಿಷಿನಲ್ಲೆ ಮಾತನಾಡೋದು! :))
In reply to ಇದು ಜಮಾನಾದ ಜೋಕಾದ್ದರಿಂದ by kavinagaraj
ನಿಮ್ಮ ಮಾತು ನಿಜ ಕವಿಗಳೆ, ಈಗ
ನಿಮ್ಮ ಮಾತು ನಿಜ ಕವಿಗಳೆ, ಈಗ ಯಾರಾದರೂ ಕನ್ನಡದಲ್ಲಿ ಮಾತನಾಡಿದರೆ ಅದು ಜೋಕಾಗುತ್ತದೆನ್ನುವುದು ಸುಳ್ಳಲ್ಲ :)
ಅಯ್ಯೋ ಪಾಪ ಗುಂಡ....!!!
ಅಯ್ಯೋ ಪಾಪ ಗುಂಡ....!!!
ಅಲ್ಲಾ ಜೀ- ಈ ಗುಂಡನಿಗೆ ಇದು ಗೊತಿರಲಿಲ್ಲ ಅನ್ಸುತ್ತೆ...
ಏನಾದರೂ ಪೂರ್ತಿ ಗೊತ್ತಿರಬೆಕುಇಲ್ಲ ಏನೂ ಗೊತ್ತಿರಬಾರದು..
ಅರ್ಧ ಮರ್ದ ಗೊತಿರೋದು ಅಪಾಯಕಾರೀ ಅಂತ..!
ಈಗಲೋ ಕೆಲವು ಜನ ಅರ್ದರ್ದ ಕನ್ನಡ ಅಂಗ ಮಿಶ್ರಿತ ಭಾಷೆಯನ್ನೂ ಕಷ್ಟ ಪಟ್ ಆಡೋದು ನೋದ್ದಿದಾಗ ನಗೆ ಬರುವುದು...ಆದರೆ...!!
ನಾ ಅಂತೂ ಎಲ್ಲೇ ಹೋದರು ಬಂದರೂ ನಿಂತರೂ ಕುಂತರೂ ಎದ್ದರೂ ಬಿದ್ದರೂ ಕನ್ನಡವನ್ನೇ ಮಾತಾಡೋದು...ಎಂ ಜಿ ರೋಡಲ್ಲೇ ಕನ್ನಡ ಕಹಳೆ ಮೊಳಗಿಸಿದವರು ನಾವ್...
ಸಿರಿಗನ್ನಡಂ ಗೆಲ್ಗೆ ಬಾಳ್ಗೆ ...
ಶುಭವಾಗಲಿ..
\।/
In reply to ಅಯ್ಯೋ ಪಾಪ ಗುಂಡ....!!! by venkatb83
ಸಪ್ತಗಿರಿಯವರೇ ನಿಮ್ಮ
ಸಪ್ತಗಿರಿಯವರೇ ನಿಮ್ಮ ಪ್ರತಿಕ್ರಿಯೆಯಿಂದ ನನಗೆ ಮತ್ತೊಂದು ಜೋಕ್ ನೆನಪಾಯಿತು. ಇದೂ ಸಹ ಜಮಾನಾದ್ದೇ! ಒಮ್ಮೆ ಕನ್ನಡ ಬಾರದ ತೆಲುಗಿನವನೊಬ್ಬ ಬೆಂಗಳೂರಿಗೆ ಬಂದನಂತೆ ಅವನು ಹೋಗಬೇಕಾದ ನಂಬರಿನ ಬಸ್ಸನ್ನು ಮತ್ತು ಜಾಗವನ್ನು ಅವನ ಅತಿಥೇಯರು ತಿಳಿಸಿದ್ದರಿಂದ ಅವನು ಮೆಜೆಸ್ಟಿಕ್ಕಿಗೆ ಬಂದು ಬಸ್ಸು ಹತ್ತಿದನಂತೆ. ಅವನಿಗೆ ಯಾರಾದರೂ ಕನ್ನಡದಲ್ಲಿ ಏನನ್ನಾದರೂ ಕೇಳಿದರೆ ಗೊತ್ತಿಲ್ಲಾ ಅಂತ ಹೇಳಿ ಸುಮ್ಮನಾಗಿ ಬಿಡು ಎಂದು ಹೇಳಿಕಳುಹಿಸಿದ್ದರಂತೆ. ಇವನು ಬಸ್ಸು ಹತ್ತುವ ಆತುರದಲ್ಲಿ ಬಸ್ಸನ್ನು ಮುಂದಿನಿಂದ ಹತ್ತಿ ಬಿಟ್ಟನಂತೆ, ಆಗ ಕಂಡಕ್ಟರ್ ಮಹಾಶಯ, ಸ್ವಾಮಿ ನೀವೇನ್ ಗಂಡುಸ್ರೋ ಇಲ್ಲಾ ಹೆಂಗುಸ್ರೋ ಎಂದು ಕೇಳಿದನಂತೆ? ಆಗ ಈ ತೆಲುಗಿನವ ಗೊತ್ತಿಲ್ರೀ ಎಂದು ಸೀರಿಯಸ್ಸಾಗಿ ಹೇಳಿದಾಗ ಬಸ್ಸಿನಲ್ಲಿ ನಗೆ ಬುಗ್ಗೆ ಎದ್ದದ್ದು ಸುಳ್ಳಲ್ಲ.
In reply to ಸಪ್ತಗಿರಿಯವರೇ ನಿಮ್ಮ by makara
;())))))))))))))
;())))))))))))))
ಯಪ್ಪಾ ಶಿವ್ನೇ ...!
ಎಂಥೆಂತ ಜನ ಅವ್ರಲ್ಲಪ್ಪ...!!
ನಿಮ್ಮ ಬುಟ್ಟಿಯಲ್ಲಿ ಬೇಜಾನ್ ನಗೆ ಪದಾರ್ಥ ಇರುವ ಹಾಗಿವೆ..!!
>>>ಈಗ ನಾ ನೋಡಿದ ಹುಡುಗಿ ಮಂಗಳೂರಿಯನ್ -ಉಡುಪಿಯವಳು -ಅವರ ಮಾತೃ ಭಾಷೆ ತುಳು-ಮಂಗಳೂರವ್ರನ್ನ ಮದ್ವೆ ಆಗಲೇಬೇಕೆಂಬ ಹಠಕ್ಕೆ ಬಿದ್ದು ಬೇಜಾನ್ ಹುಡುಕಾಡಿ ಕೊನೆಗೆ ಇವಳು ಸಿಕ್ಕಳು-ಆಗ ಎದುರಾದದ್ದು ಭಾಷೆ-ವೇಷ ಭೂಷಣ -ಸಂಸ್ಕೃತಿ ಹಬ್ಬ ಹರಿದಿನಗಳ ವ್ಯತ್ಯಾಸದ ಸಮಸ್ಯೆ-ನಾ ಮೊದಲೇ ರೆಡಿ ಆಗಿ ನೆಟ್ನಲ್ಲಿ ಹುಡುಕಾಡಿ ಹಲವು ತುಳು ಕೊಂಕಣಿ ಕಲಿಯುವ ವಿಷಯಗಳನ್ನು ಡೌನ್ಲೋಡ್ ಮಾಡಿದ್ದೆ,ಆದ್ರೆ ಕೆಲವನ್ನು ಮಾತಾಡುವಾಗಲೂ ಅದು ಅವರ ನೈಜ ಉಚ್ಚಾರಣೆಯಂತೆ ಇರದೇ ಬರದೆ ಒಂಥರಾ ನಿರ್ಜೀವ ನಿರ್ಭಾವ ಭಾವನೆ ಬರುತ್ತಿತ್ತು-ಅದ್ಕೆ ನಾನು ಪೂರ್ತಿ ಕಲಿಯುವವರೆಗೆ ತುಳು ಮಾತಾಡೋಲ್ಲ ಎಂದಿರುವೆ-ಈಗ ಮನೆಯಲ್ಲಿ ತುಳು ಕಲಿಯುತ್ತಿರುವೆ..!!
ಕೆಲವೊಮ್ಮೆ ನಾ ಆಡೋ ಕನ್ನಡ ಶಬ್ಧಗಳು ತುಳುವಿನಲ್ಲಿ ಬೇರೇನೋ ಅರ್ಥ ಹೊಂದಿದ್ದು ಅದು ಕೇಳಿದ ನನ್ನ ಹುಡುಗಿ ಬಿದ್ಬಿದ್ ನಕ್ಕಿದ್ದು ಉಂಟು...!!
ಅದ್ಕೆ ಏನಾರ ಪೂರ್ತಿ ಗೊತ್ತಿದ್ದರೆನೆ ಒಳ್ಳೇದು ಎನ್ನೋದು ನಂ ಅಭಿಪ್ರಾಯ..!!
ಶುಭವಾಗಲಿ..
\।
In reply to ;()))))))))))))) by venkatb83
ಸಪ್ತಗಿರಿಯವರೇ,
ಸಪ್ತಗಿರಿಯವರೇ,
ಒಂದೇ ಭಾಷೆಯಲ್ಲಿ ಒಂದೊಂದು ಕಡೆ ಒಂದೊಂದು ಅರ್ಥ ಇರುತ್ತದೆ ಇದರ ಬಗ್ಗೆ ಪ್ರತಿಕ್ರಿಯೆಯೊಂದರಲ್ಲಿ ಬರೆದಿದ್ದೆ. ಗುಲ್ಬರ್ಗಾ ಕಡೆ ಸರಿ ಹೋಗೋದು ಅಂದ್ರೆ ಸತ್ತು ಹೋಗೋದು ಅಂತಾ ಅರ್ಥ. ಒಮ್ಮೆ ಹಳೇ ಮೈಸೂರಿನ ಡಾಕ್ಟರೊಬ್ಬ ಗುಲ್ಬರ್ಗಾದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದ. ಆಗ ಜ್ವರ ಬಂದ ಹುಡುಗನೊಬ್ಬನನ್ನು ನೋಡಿ ನೀವೇನೂ ಕಾಳಜಿ ಮಾಡಬೇಡಿ, ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸರಿಹೋಗ್ತಾನೆ ಎಂದನಂತೆ. ಆಗ ಆ ತಾಯಿಯ ಪರಿಸ್ಥಿತಿ ಏನಾಗಿರ ಬೇಡ. ಒಂದೇ ಭಾಷೆಯಲ್ಲಿ ಪ್ರಾದೇಶಿಕವಾಗಿ ಒಂದೇ ಶಬ್ದಗಳು ಹಲವಾರು ಅರ್ಥವನ್ನು ಪಡೆಯುವಾಗ ಮತ್ತೊಂದು ಭಾಷೆಯಲ್ಲಿ ಕೆಲವು ಶಬ್ದಗಳು ಕೆಟ್ಟ/ತಮಾಷೆಯ ಅರ್ಥ ಕೊಡುವುದು ಅಸಹಜವೇನಿಲ್ಲ ಬಿಡಿ. ಆಲ್ ದ ಬೆಸ್ಟ್ ಫಾರ್ ಎ ಸಕ್ಸಸ್‌ಫಲ್ ಲವ್ ಸ್ಟೋರಿ.
ಈಜು ಕಲಿಯೋವರೆಗೂ ನೀರಿಗೆ ಇಳಿಯೋಲ್ಲ, ಇಳಿಯೋವರೆಗೂ ಈಜು ಬರೋಲ್ಲ. ಆದ್ದರಿಂದ ನಿಮ್ಮ ತುಳು ಭಾಷಾ ಕಲಿಕೆಯನ್ನು ಮುಂದುವರೆಸಿ. ತಪ್ಪಿದ್ದರೆ ಹೇಳಿಕೊಡಲು ಹೇಗಿದ್ದರೂ ಗಣೇಶ್..ಜಿ ಇದ್ದಾರಲ್ಲ. :))
In reply to ಸಪ್ತಗಿರಿಯವರೇ, by makara
alright! ji, ಮೊದಲಿಗೆ ನಿಮ್ಮ
alright! ji, ಮೊದಲಿಗೆ ನಿಮ್ಮ ಯಸ್-ನೋ ಜೋಕಿಗೆ+ಇತರ ಜೋಕಿಗೆ ಧನ್ಯವಾದಗಳು. ಇನ್ನು ಸಪ್ತಗಿರಿ- ತುಳು ಭಾಷೆ ಬಹಳ ಸುಲಭ. ಮೊದಲು "ಮಾರಾಯರೆ" ಅನ್ನಲು ಕಲಿಯಿರಿ. ಎಲ್ಲದಕ್ಕೂ ಅದನ್ನು ಸೇರಿಸಿ. ಎಂತದು ಮಾರಾಯ್ರೆ, ಅಲ್ಲಾ ಮಾರಾಯ್ರೆ, ಎಂಚಿನ ಮಾ..ಹೇಳುತ್ತಾ ಹೋಗಿ..ನಿಮ್ಮಾಕೆಯ ಜತೆ ಮಾತನಾಡುವಾಗ "ಮಾರಾಯ್ತಿ" ಅನ್ನಿ. -ಇಂದ ಮಾರಾಯ್ತಿ, ತೂಲ ಮಾರಾಯ್ತಿ, ಒರ ಬಲ ಮಾರಾಯ್ತಿ, ನನಲ ಪಿದಾಡ್ಡ್ ಆತಿಜ್ಯಾ ಮಾರಾಯ್ತಿ....; ಮುಂದಿನ ಪಾಠ ಇದನ್ನು ಸರಿಯಾಗಿ ಆಕೆ ಬಳಿ ಒಪ್ಪಿಸಿ ಸರ್ಟಿಫಿಕೆಟ್ ತೆಗೆದುಕೊಂಡ ಮೇಲೆ ಮುಂದುವರೆಸುವೆ..
In reply to alright! ji, ಮೊದಲಿಗೆ ನಿಮ್ಮ by ಗಣೇಶ
http://www.languages...
http://www.languageshome.com/English-Tulu.htm
http://www.raveeshkumar.com/2009/05/learn-tulu-online-commonly-used-phrases.html
http://mangalore4u.blogspot.in/2010/09/learn-tulu-online.html
http://www.ourkarnataka.com/learn_thulu/thulu38_eng.htm
http://www.raveeshkumar.com/2010/06/sentence-formation-in-tulu-language.html?utm_source=feedburner&utm_medium=feed&utm_campaign=Feed%3A+raveeshkumar+%28Ee+Prapancha%29
http://www.raveeshkumar.com/2009/05/learn-tulu-online-commonly-used-phrases.html?utm_source=feedburner&utm_medium=feed&utm_campaign=Feed%3A+raveeshkumar+%28Ee+Prapancha%29
http://www.tuluworld.org/webpage/aboutus.html
ಗಣೇಶ್ ಅಣ್ಣ -
ಆ ಮೇಲಿನ ಲಿಂಕುಗಳ ಮೂಲಕ ನಾನು ತುಳು ಕಲಿಯಲು ಯತ್ನಿಸುತ್ತಿರುವುದು. ಹಾಗೆ ನೋಡಿದರೆ ಲಿಪಿ ಇಲ್ಲದ ಆ ಭಾಷೆ ಬರೆಯಲು ಆಗೊಲ್ಲವಲ್ಲ ಎಂದು ಬೇಜಾರು..ಆದರೆ ಮಾತಾಡು ಯತ್ನಿಸುವೆ..
ತುಳು ಭಾಷೇಲಿ ನೀವ್ ಆಗಾಗ ನೀಡುವ ಪ್ರತಿಕ್ರಿಯೆ ಗಮನಿಸಿದ್ದ ನನಗೆ ನನ್ನ ಹುಡುಗಿ ನೋಡಿದ ಒಪ್ಪಿದ ಮೇಲೆ -ತುಳು ಕಲಿಸಲು ಅವಳು ಮತ್ತು ನೀವ್ ಇರುವಿರಲ್ಲ ಎನಿಸಿತು...
ನೀವ್ ಮಂಗಳೂರು ಮೂಲದವರೇ?
>>> ನನಗೆ ಯಾಕೋ ಭಾಷೆ ಅನಿವಾರ್ಯ ಅಲ್ಲ ಅನಿಸುತ್ತಿದೆ.. ಹಾಗೆ ಅನ್ನಿಸಿದ್ದು ಸೈನ್ ಲ್ಯಾಂಗ್ವೇಜ್ ಮಾತಾಡುವವರನ್ನ ಮತ್ತು ಮೂಕ ಕಿವುಡರನ್ನು ನೋಡಿದಾಗಕೇವಲ ಸಂಜ್ಞೆ ಮತ್ತು ಸ್ಪರ್ಶದ ಮೂಲಕ ಅವರು ಮಾತಾಡುವರಲ್ಲ ...!!
ಈಗಲೂ ನಾ ಮಾತಾಡುವುದು ನಮ್ ಹುಡುಗಿಗೆ ಅರ್ಥ ಆಗೋಕೆ ಲೇಟ ಆಗುತ್ತೆ...ಆದರೆ ಅವಳ ತುಳು ಮಿಶ್ರಿತ ಕನ್ನಡ ನನಗೆ ಅರ್ಥ ಆಗುತ್ತೆ...
ಈಗೀಗ ಅವಳು ತುಳು-ತುಳು ಕನ್ನಡ ಮರೆತವಳಂತೆ ನಮ್ಮ ಭಾಷೆಯಲ್ಲಿ ಮಾತಾಡುವಳು-ಉತ್ತರ ಕರ್ನಾಟಕ ಕನ್ನಡ ಭಾಷೆಯಲ್ಲಿ...ನಗೆ ಉಕ್ಕುಕ್ಕಿ ಬರುವುದು...ಒಂಥರಾ ಮಜವಾಗಿದೆ..!
ಪ್ರತಿಕ್ರಿಯೆಗೆ ಮತ್ತು ಮೊದಲ ತುಳು ಕ್ಲಾಸಿಗೆ ನನ್ನಿ
ಶುಭವಾಗಲಿ..
\।/
ಹ ಹ ಚೆನ್ನಾಗಿದೆ ,ಕನ್ನಡಾಂಬೆಗೆ
ಹ ಹ ಚೆನ್ನಾಗಿದೆ ,ಕನ್ನಡಾಂಬೆಗೆ ಜೈ
In reply to ಹ ಹ ಚೆನ್ನಾಗಿದೆ ,ಕನ್ನಡಾಂಬೆಗೆ by Vinutha B K
ಮೆಚ್ಚುಗೆಯ ಪ್ರತಿಕ್ರಿಯೆಗೆ
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ವಿನುತಾ ಅವರೆ.
ನಾನು ಕೆಲವು ದಿನಗಳ ಹಿಂದೆ
ನಾನು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದಾಗ ಮಗನ ಮನೆಯಲ್ಲಿ ಉಳಿದುಕೊಂಡಿದ್ದೆ. ಮಾರತ್ ಹಳ್ಳಿಯ ACES ಲೆಔಟ್ನಲ್ಲಿರುವ ಪಾರ್ಕಿಗೆ ಸಂಜೆಯವೇಳೆ ವಿಹಾರಕ್ಕೆ ಹೋದಾಗ ಕನ್ನಡದಲ್ಲಿ ಮಾತನಾಡುವವರನ್ನು ನೋಡಿದ್ದು 10 ದಿನದಲ್ಲಿ ಕೇವಲ ಬೆರಳೆಣಿಕೆಯಷ್ಟರಬಹುದು.ಚಿಕ್ಕ ಮಕ್ಕಳಿಂದ ಹಿಡಿದು ಯುವಕ ಯುವತಿಯರೆಲ್ಲಾ ಮಾತನಾಡುವುದು ಇಂಗ್ಲಿಷ್ ನಲ್ಲೆ. ಹಿರಿಯ ನಾಗರೀಕರು ಅಲ್ಲಲ್ಲಿ ಕಳಿತು ಮಾತನಾಡುತ್ತಾ ಇದ್ದದ್ದು ತಮಿಳು,ತೆಲಗು ಹಿಂದಿ ಅಥವಾ ಇಂಗ್ಲಿಷ್ನಲ್ಲಿ!.ನಾನು ಸುಮ್ಮನೆ ಕಳಿತು ಕೊಂಡು ಕೇಳುವವನಾಗಿದ್ದೆ.ಕನ್ನಡ ಭಾಷೆಯಲ್ಲಿ ಯಾರಾದರು ನನ್ನ ಕುರಿತು ವಿಚಾರಿಸಿದರೆ ನನಗಾಗುವ ಸಂತೋಷ ಅವರ್ಣನೀಯ.ಬಂಡ್ರಿಯವರೆ ತಮ್ಮ ಈ ಹಳೆಯ ಜೋಕಿನ ಸರಣಿ ಚನ್ನಾಗಿ ಬರುತ್ತಿದೆ. ವಂದನೆಗಳು
In reply to ನಾನು ಕೆಲವು ದಿನಗಳ ಹಿಂದೆ by swara kamath
ನಿಮ್ಮ ಮಾತು ನೂರಕ್ಕೆ ನೂರು ನಿಜ
ನಿಮ್ಮ ಮಾತು ನೂರಕ್ಕೆ ನೂರು ನಿಜ ಕಾಮತ್ ಸರ್. ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡವನ್ನು ಬಿಟ್ಟು ಬೇರೆಲ್ಲಾ ಭಾಷೆ ಮಾತನಾಡುತ್ತಾರೆ. ಇತರೇ ಭಾಷೆಯವರೂ ಸಹ ಕನ್ನಡವನ್ನು ಬಿಟ್ಟು ಕೇವಲ ತಮ್ಮ ಮಾತೃ ಭಾಷೆಯನ್ನೋ ಇಲ್ಲಾ ಅನಿವಾರ್ಯವಾದಾಗ ಇಂಗ್ಲೀಷನ್ನು ಮಾತನಾಡುತ್ತಾರೆ. ಕನ್ನಡಿಗರು ಎಲ್ಲಿಯವರೆಗೆ ತಮ್ಮ ಭಾಷೆಯ ಬಗ್ಗೆ ಗೌರವ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಪರಿಸ್ಥಿತಿ ಮುಂದುವರೆಯುತ್ತದೆ. ಈ ಮಾತನ್ನು ಹಲವಾರು ಹಿರಿಯರು ಐವತ್ತು ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದರೂ ಸಹ ನಮ್ಮ ಕನ್ನಡಿಗರಿಗೆ ಬುದ್ಧಿ ಬರುವುದೇ ಇಲ್ಲಾ :(( ಅದಕ್ಕೇ ಒಮ್ಮೆ ದಿವಂಗತರಾಗಿರುವ ಹಿರಿಯ ನಟ ಉದಯ ಕುಮಾರ್ ಬೇಜಾರಿನಿಂದ ಹೇಳಿದ್ದು, "ಗೊಮ್ಮಟೇಶ್ವರನಿಗೆ ಚಡ್ಡಿ ಹೊಲಿಸೋದು ಒಂದೇ, ಕನ್ನಡಿಗರಿಗೆ ಬುದ್ಧಿ ಹೇಳೋದೂ ಒಂದೇ" ಎಂದು.
In reply to ನಿಮ್ಮ ಮಾತು ನೂರಕ್ಕೆ ನೂರು ನಿಜ by makara
"ಗೊಮ್ಮಟೇಶ್ವರನಿಗೆ ಚಡ್ಡಿ
"ಗೊಮ್ಮಟೇಶ್ವರನಿಗೆ ಚಡ್ಡಿ ಹೊಲಿಸೋದು ಒಂದೇ, ಕನ್ನಡಿಗರಿಗೆ ಬುದ್ಧಿ ಹೇಳೋದೂ ಒಂದೇ" .. ಗೊಮ್ಮಟೇಶ್ವರನಿಗೆ ಚಡ್ಡಿ ಹೊಲಿಸಿ ಹಾಕಿದ್ರೆ ಅವನು ಗೊಮ್ಮಟೇಶ್ವರ ಹೇಗೆ ಅಗ್ತಾನೆ ಶ್ರೀಧರ್ ಜಿ.
ರಾಮೋ