ಜಯನಗರ ನಾಲ್ಕನೇ ಬ್ಲಾಕ್ ಸುತ್ತಾಟ..

ಜಯನಗರ ನಾಲ್ಕನೇ ಬ್ಲಾಕ್ ಸುತ್ತಾಟ..

ಚಿತ್ರ

ಪಿ ಯು ಸಿ ನಂತರ ಇಂಜಿನಿಯರಿಂಗ್ ಇತ್ಯಾದಿ ಕೋರ್ಸ್‌ಗೆ ಸೇರಲು ಸಿ ಇ ಟಿ ಪರೀಕ್ಷೆ ಇದ್ದ ಹಾಗೇ, MBBS ನಂತರ PGಗೆ ಸೇರಲು ಆಲ್ ಇಂಡಿಯಾ ಲೆವೆಲ್‌ನಲ್ಲಿ NEET exam ಈ ಬಾರಿ ಹೊಸದಾಗಿ ಪ್ರಾರಂಭಿಸಿದ್ದಾರೆ. ಆದರೆ ಪ್ರೈವೇಟ್ ಕಾಲೇಜಿನವರು ಕೋರ್ಟ್ ಮೆಟ್ಟಲು ಹತ್ತಿ ತಡೆಯಾಜ್ಞೆ ತಂದರು. ಇನ್ನೂ ಇತ್ಯರ್ಥವಾಗದಿರುವುದರಿಂದ ಕರ್ನಾಟಕ PG CET ಪರೀಕ್ಷೆ ಬೆಂಗಳೂರಲ್ಲಿ ಕಳೆದ ರವಿವಾರ ನಡೆಯಿತು. ಸಂಡೆ ನನಗೂ ರಜೆ ಇದ್ದುದರಿಂದ ಜಯನಗರ ೪ನೇ ಟಿ ಬ್ಲಾಕ್‌ನಲ್ಲಿರುವ ಕಾಲೇಜ್‌ಗೆ ಮಗಳನ್ನೂ, ಅವಳ ಗೆಳತಿಯನ್ನು ಸಮೀಪದ ಇನ್ನೊಂದು ಕಾಲೇಜ್‌ನಲ್ಲಿ ಪರೀಕ್ಷೆ ಬರೆಯಲು ಬಿಟ್ಟು ಇನ್ನು ೪ ಗಂಟೆ ಹೇಗೆ ಟೈಮ್ ಪಾಸ್ ಮಾಡುವುದು ಎಂದು ಯೋಚಿಸುತ್ತಿದ್ದೆ. ಲಾಲ್ ಬಾಗ್, ರಾಗಿಗುಡ್ಡ ಎಲ್ಲಾ ಸುತ್ತಿದ್ದರು ಜಯನಗರದ ಪರಿಚಯ ಅಷ್ಟು ಇರಲಿಲ್ಲ. ಮೊದಲಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಹೋದೆ. ಚೆನ್ನಾಗಿಯೇ ಇದೆ. ಅದನ್ನೇ ಒಡೆದು ಹೊಸದಾಗಿ ಕಟ್ಟಲು ಸರ್ಕಾರ ಹೊರಟಿತ್ತು.

ಅಲ್ಲಿಂದ ನಂತರ ಜಯನಗರ ೪ನೇ ಬ್ಲಾಕ್ ಬಸ್ ಸ್ಟಾಂಡ್ ‌ಗೆ ಹೋಗಿ ಅಲ್ಲಿ ಮಹಡಿಯಲ್ಲಿರುವ ಮಾಲ್‌ಗೆ ನುಗ್ಗಿದೆ. ಟೈಮ್ ಪಾಸ್ ಮಾಡಲು ಸುತ್ತುತ್ತಿರುವಾಗ ಈ "ಧಾರೆಪುಳಿ" ( http://en.wikipedia.org/wiki/Carambola )

ಕಾಣಸಿಕ್ಕಿತು. ಊರಲ್ಲಿ ಅದು ಮರದ ಬುಡದಲ್ಲಿ ಬಿದ್ದಿದ್ದರೂ ಮೂಸುವವರು ಇರಲಿಲ್ಲ-ಇಲ್ಲಿ ಅದಕ್ಕೆ ಸಿಂಗಾರವೇನು...೬೫ರೂ!!

ಮಾಲ್ನಿಂದ ಹೊರಬಂದಾಗ ಇನ್ನೂ ಒಂದು ಗಂಟೆ ಸಮಯ ಬಾಕಿ ಇತ್ತು. ಎದುರು ನೋಡಿದಾಗ ದೇವಸ್ಥಾನ ಕಾಣಿಸಿತು. ಸುಂದರ ದೇವಸ್ಥಾನ. ಜೈನ ತೀರ್ಥಂಕರರಲ್ಲಿ ಒಬ್ಬರಾದ ಧರ್ಮನಾಥರ ದೇಗುಲ. ಅಲ್ಲಿ ಲಕ್ಷ್ಮಿ, ಸರಸ್ವತಿ, ವರಾಹ ಮುಖದ ದೇವತೆ...ಹೀಗೆ ಅನೇಕ ದೇವತೆಗಳ ವಿಗ್ರಹಗಳಿದ್ದವು. ಎಲ್ಲೂ ಪೂಜೆ ಮಾಡುವವರು,ತೀರ್ಥ ಪ್ರಸಾದ ಕೊಡುವವರು ಇರಲಿಲ್ಲ. ಗರ್ಭಗುಡಿಯವರೆಗೂ ಹೋಗಿ ತೀರ್ಥಂಕರರ ಹಾಗೂ ಇತರ ವಿಗ್ರಹವನ್ನು ನಿರ್ಭಯವಾಗಿ ಮುಟ್ಟಿ ಪೂಜಿಸಿ ಬರಬಹುದು.

ದೇವಸ್ಥಾನದ ಮೇಲೆ ಹತ್ತಲು ಮೆಟ್ಟಲುಗಳಿವೆ. ಬಾಯಿಗೆ ಬಟ್ಟೆ ಕಟ್ಟಿ ಓಡಾಡುತ್ತಿದ್ದ ಜೈನ ಸನ್ಯಾಸಿಗಳಲ್ಲಿ ಮೇಲೆ ಹತ್ತಿ ನೋಡಬಹುದೋ ಎಂದು ವಿಚಾರಿಸಿದೆ. ಕಣ್ಣಲ್ಲೇ ಸಮ್ಮತಿಸಿದರು.

   

ಪರೀಕ್ಷೆ ಮುಗಿಯುವ ಸಮಯವಾದುದರಿಂದ ಇನ್ನೂ ಮೇಲೆ ಹತ್ತಲು ಹೋಗದೇ ಹಿಂದೆ ಬಂದೆನು.

-ಗಣೇಶ.

ಶ್ರೀ ಅವರು  ನನ್ನ ಮುದ್ದಿನ ಗಿಣಿಯ ಬಗ್ಗೆ ವಿಚಾರಿಸಿದ್ದರು. ಅದಕ್ಕಾಗಿ ಗಿಣಿಯ ಲೇಟೆಸ್ಟ್ ಪೋಸ್-

Rating
No votes yet

Comments

Submitted by kavinagaraj Thu, 03/07/2013 - 08:37

ಜಯನಗರ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿ 1979/1980ರಲ್ಲಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ ತರಬೇತಿ ಕೇಂದ್ರದಲ್ಲಿ ಎರಡು ತಿಂಗಳು ತರಬೇತಿ ಪಡೆದಿದ್ದೆ. ಕಳೆದ ವರ್ಷ ಈ ಕಾಂಪ್ಲೆಕ್ಸಿಗೆ ಬೆಂಕಿ ಬಿದ್ದಾಗ ನೋಡಿದ್ದರೆ ನಿಮ್ಮ ಕ್ಯಾಮೆರಾ ಕಣ್ಣಿಗೆ ಸಾಕಷ್ಟು ಆಹಾರ ಸಿಕ್ಕಿರುತ್ತಿತ್ತು. ನೀವು ಹೇಳಿದ ದೇವಸ್ಥಾನದ ಮುಂದೆ ಹಲವಾರು ಸಲ ಹಾದು ಹೋಗಿದ್ದೇನೆ. ಒಳಗೆ ಹೋಗಿಲ್ಲ. ಆಕರ್ಷಕವಾದ ದೇವಸ್ಥಾನದ ಕಟ್ಟಡ ಗಮನವನ್ನಂತೂ ಸೆಳೆಯುತ್ತದೆ.

Submitted by ಗಣೇಶ Sat, 03/09/2013 - 00:29

In reply to by kavinagaraj

ಧನ್ಯವಾದ ಕವಿನಾಗರಾಜರಿಗೆ. ೭೯-೮೦ರ ಸಮಯದಲ್ಲಿ ಮಂದಿರ ಕಟ್ಟುತ್ತಾ ಇದ್ದರು ಕಾಣುತ್ತದೆ. ಎರಡು ತಿಂಗಳ ತರಬೇತಿ ದ.ಕನ್ನಡದ ಕುಗ್ರಾಮಗಳ(ನೀವು ಕೆಲಸದಲ್ಲಿದ್ದ) ಗ್ರಾಮೀಣಾಭಿವೃದ್ಧಿಗೆ ನೆರವಾಗಿರಬಹುದೇ..

Submitted by kavinagaraj Sat, 03/09/2013 - 08:17

In reply to by ಗಣೇಶ

ನಾನು ಬರೆಯುವಾಗ ದೇವಸ್ಥಾನದ ಮುಂದೆ ಹಾದು ಹೋಗಿದ್ದು ಇತ್ತೀಚಿನ ದಿನಗಳಲ್ಲಿ ಎಂದು ಸೇರಿಸಬೇಕಿತ್ತು. ಕಾಂಪ್ಲೆಕ್ಸಿನ ನೆನಪಿನಲ್ಲಿ ತರಬೇತಿಯ ವಿಷಯವನ್ನೂ ಬರೆದಿದ್ದೆ. ಕುಗ್ರಾಮಗಳ ಅಭಿವೃದ್ಧಿಗೆ ಮುಖ್ಯವಾಗಿ ಬೇಕಾಗಿರುವುದು ಮನಸ್ಸು, ತರಬೇತಿ ಸಹಾಯಕವಾಗಿ ಬರುತ್ತದೆ ಅಷ್ಟೆ. ಯಾವುದೇ ತರಬೇತಿಯ ಉದ್ದೇಶವೂ ಒಳ್ಳೆಯದೇ. ಅದರ ಸದುಪಯೋಗ ಪಡೆದಿರುವೆನೆಂದು ಅಂದುಕೊಂಡಿರುವೆ. ಧನ್ಯವಾದ, ಗಣೇಶರೇ.

Submitted by makara Thu, 03/07/2013 - 10:11

ಒಳ್ಳೆಯ ಮಾಹಿತಿ ಹಾಗೂ ಚಿತ್ರಗಳುಳ್ಳ ಬರಹಕ್ಕೆ ಧನ್ಯವಾದಗಳು ಗಣೇಶರೆ. (SA G NESH). ನಿಮ್ಮ ಮಗಳು PG -CET ಗೆ ಹಾಜರಾಗಿರುವ ಕ್ಲ್ಯೂ ಹಿಡಿದು ಸಪ್ತಗಿರಿಯವರು ನಿಮ್ಮ ಭೇಟೆಗೆ ಹೊಸ ಸ್ಕೆಚ್ ಹಾಕಲಿದ್ದಾರೆ; ಹುಷಾರಾಗಿರಿ ಅವರ ಕಣ್ಣಿಗೇನಾದರೂ ಬಿದ್ದೀರಾ! ಹಾಗೆಯೇ ನಿಮ್ಮ ಧಾರಾಪುಳಿಯ ಕೊಂಡಿಯಿಂದ ಅದರ ಬಗ್ಗೆ ಹೆಚ್ಚು ಅವಕಾಶ ದೊರೆಯಿತು.

Submitted by venkatb83 Thu, 03/07/2013 - 15:55

In reply to by makara

sa g nash ??

"ಚೆನ್ನಾಗಿಯೇ ಇದೆ. ಅದನ್ನೇ ಒಡೆದು ಹೊಸದಾಗಿ ಕಟ್ಟಲು ಸರ್ಕಾರ ಹೊರಟಿತ್ತು."

>>>ಇದು ಮೊದ್ಲದ್ದಲ್ಲ..ಮೊದಲಿನಿಂದಲೂ ಚೆನ್ನಾಗಿರೋದು ಒಡೆದು ಕಟ್ಟೋದು ಕಾಸು ಮಾಡೋದು ಇದ್ದದ್ದೇ...!!
ಜೇಬು ತುಂಬಿಸಿಕೊಳ್ಳಲು ಇದೂ ಒಂದು ಮಾರ್ಗ...!! ವಾಮ ಮಾರ್ಗ ಯಾವ್ ಅಮಾರ್ಗ ಅನದ್ರೂ ಸರಿಯೇ...!!
ಗಣೇಶ್ ಅಣ್ಣ -ಈಗ್ಗೆ ಸುಮಾರು ೪-೫ ದಿನಗಳಿಂದ ಜಯನಗರದ ಕಡೆ ನಾ ಮತ್ತು ನಮ್ ಹುಡುಗಿ ಅವಳ ಸಂದರ್ಶನಕ್ಕಾಗಿ (ಮೊದಲು ಲಿಖಿತ ಪರೀಕ್ಷೆ-ನಂತರ-ಮತ್ತೊಂದು ಸಂದರ್ಶನಕ್ಕೆ) ಜಯನಗರದ ೪ನೆ ಮತ್ತು ೮ನೆ ಬ್ಲಾಕಿಗೆ ಬಂದಿದ್ದೆವು..
ನಾ ಜಯನಗರಕ್ಕೆ ಕೊನೆಯದಾಗಿ ಈ ಹಿಂದೆ ಬಂದಿದ್ದು -ಸುಮಾರು ೩-೪ ವರ್ಷಗಳ ಹಿಂದೆ(ಆಗ ಹಾರ್ಡ್ವೇರ್ ನೆಟ್ವರ್ಕಿಂಗ್ ಜಾಬ್ ಮಾಡ್ತಾ -ಬಸವನ ಗುಡಿ ಜಯನಗರದ ಹಲವು ಗಲ್ಲಿಗಳಲಿ ಬ್ಲಾಕುಗಳಲ್ಲಿ ತೀ ವಿ ಎಸ್ ಹಾಕಿಕೊಂಡು ಟೀವಿಯಿಂದ ಹೋಗ ಹೋಗಿ ಟ್ರಾಫಿಕ್ ಪೋಲೀಸರ ಕೈಗೆ ಸಿಕ್ಕಿ ಸ್ವಲ್ಪದರಲ್ಲಿ ಬಚಾವ್ ಆಗಿದ್ದೆ.-ಲೈಸೆನ್ಸ್ ಇರ್ಲಿಲ್ಲ ಈಗಲೂ ಇಲ್ಲ..!!) ಆಮೇಲೆ ಆ ಕಡೆ ಬಂದಿರಲಿಲ್ಲ ,ಈಗ ಬಂದಾಗ ಮೆಟ್ರೋ ಕೆಲಸ ಬಹುತೇಕ ಮುಗ್ಯುವ ಹಂತದಲ್ಲಿರುವುದು ನೋಡಿ ಖುಷಿ ಆಯ್ತು.. ನನಗೆ ಮೊದಲಿಂದಲೂ ಮಲ್ಲೇಶ್ವರ(ನಿಮ್ಮ ಭಾಷೆಯಲ್ಲಿ)ಮತ್ತು ಜಯನಗರ ಬಸವನ ಗುಡಿ ಭಲೇ ಇಷ್ಟ ಅದ್ಕೆ ಕಾರಣ ಅಲ್ಲಿನ ಸ್ವಚ್ಛತೆ- ಮತ್ತು ವಿಶಾಲ ರಸ್ತೆಗಳು-ಗಿಡ ಮರ ಒಳ್ಳೊಳ್ಳೆ ಜನ.. ದೊರೆಯುವ ಎಲ್ಲ ಸೌಲಬ್ಯಗಳು.-ಸಿನೆಮ ಮಂದಿರ- ತಿಂಡಿ ತಿನಿಸುಗಳ ಒಳ್ಳೊಳ್ಳೆ ಹೋಟೆಲ್ ಪಾರ್ಕು ದೇವಸ್ಥಾನಗಳು ಇತ್ಯಾದಿ....

ಜಯನಗರದಲ್ಲಿ ನನ್ನನು ಯಾವಾಗಲೂ ಕಂಗೆದಿಸೋದು ಅಲ್ಲಿನ ಅಸಂಖ್ಯಾತ ಬ್ಲಾಕುಗಳು...! ಈ ಹಿಡ್ನೆ ಕೆಲಸ ಮಾಡುವಾಗ ಗಾಡಿಗೆ ಫುಲ್ ಟ್ಯಾಂಕ್ ತುಂಬಿಕೊಂಡು ಸುತ್ತಿದ ಬಾಕುಗಳಲ್ಲೇ ಮತ್ತೆ ಮತ್ತೆ ಸುತ್ತಿ ಕಂಗೆಟ್ಟಿದ್ದು ಇದೆ..!!
ಪೆಟ್ರೋಲ್ ಹೇಗೆ ಅಸ್ತು ಬೇಗ ಅಸ್ತು ಖಾಲಿ ಆಗುತ್ತೆ ಅಂತ ನಂ ಕಂಪನಿ ಅವರು ತಲೆ ಕೆಡಿಸಿಕೊಂಡದ್ದು ಇದೆ....!!
ಮೊನ್ನೆಯೂ ಹಾಗೆ ಆಯಿತು ೪ನೆ ಬ್ಲಾಕಿಗೆ ಹೋಗುವ ಬಸ್ಸು ಹತ್ತಿ -ಅಶೋಕ ಸ್ಥಂಬ ನಂತರದ ಬಸ್ ಸ್ತಾಪಲಿ ಇಳಿದು ಅಲ್ಲಿಂದ ೮ನೆ ಬ್ಲಾಕಿಗೆ ನಟರಾಜ ಸರ್ವೀಸ್ ಮಾಡಿದ್ದು ಆಯ್ತು..!
ಆಮೇಲೆ ಅಲ್ಲಿ ಸಿಗುವ ೩-೪ ಅಡಿಗ ಹೋಟೆಲಿನಲ್ಲಿ (ವಾಸುದೇವ ನಾಡಿಗ್ ಅವರ ಹೋಟೆಲುಗಳು) ಬದನೆ ರೈಸ್ ಮತ್ತು ಅಕ್ಕಿ ರೊಟ್ಟಿ ತಿಂದು ಹೊಟ್ಟೆ ತಂಪು ಮಾಡಿಕೊಂಡೆವು...!!
ನಮ್ ಹುಡುಗಿ ದೇವಸ್ಥಾನಕ್ಕೆ ಹೋಗೋಣ ಎಂದರೂ -ಇನ್ನೊಮ್ಮೆ ಎಂದು ವಾಪಾಸ್ಸು ಬಂದೆವು -ಹಾಗೆನಾರ ಹೋಗಿದ್ದಾರೆ ನಿಮ್ಮನ್ನು ಅಲ್ಲೆಲ್ಲಾದರೂ ನೋಡುವ ಸಂಭವ ಇತ್ತೇನೋ...!!
ಜಯನಗರ ಕಾಂಪ್ಲೆಕ್ಸ್ ಮುಂದೆಯೇ ಹಲವು ಬಾರಿ ಅಡ್ಡಾಡಿದೆವು ನಂತರ ಬನಶಂಕರಿ ಟೀ ಟೀ ಎಂ ಎಸ್ ಗೆ ಬಂದು ಬಸ್ ಹತ್ತಿ ಮೆಜೆಸ್ಟಿಕ್ಗೆ ಬಂದೆವು...

ಸಚಿತ್ರ ಸಂಸ್ಖಿಪ್ತ ಬರಹ ಸೂಪರ್.. ನೀವ್ ಪೊಟ್ಟಣದ ಆ ತಿಂಡಿ ಬಗ್ಗೆ ಬರೆದಿದ್ದಿರಲ್ಲ-ಅದನು ನಾನು ನೋಡಿರುವೆ-ನೀವ್ ಹೇಳಿದ್ದು ನಿಜ ಅದು ಮರದ ಬುಡದಲ್ಲಿ ನಮ್ಮ ಮುಂದೆಯೇ ಬಿದ್ದರೂ ಅದು ನಾವ್ ಮೂಸಿ ನೋಡಲ್ಲ-ಆದರೆ ಮಾಲುಗಳಲ್ಲಿ ಪೊಟ್ಟಣಗಳಲ್ಲಿ ನೋಡಿ ನಾಲಗೆಯಲ್ಲಿ ನೀರೂರಿ ದುಬಾರಿ ಕಾಸು ಕೊಟ್ಟು ಕೊಳ್ಳುವೆವು ...!!;(

@ ಜೀ,ಗಣೇಶ್ ಅಣ್ಣ ಅವರ ಹೆಸರು ದಿನ ನಿತ್ಯ ಅಲ್ಲಲ್ಲಿ ಹಲವು ಬಾರಿ ನೋಡುವೆ(ಗಣೇಶ ದರ್ಶನ್-ಗಣೇಶ ಮಂದಿರ-ಗಣೇಶ್ ನಿಲಯ ಇತ್ಯಾದಿ)..ಆಗೆಲ್ಲ ಇವರದೇ ನೆನಪು ಬರೋದು...!
ಆಕಸ್ಮಿಕ-ಅನಿರೀಕ್ಷಿತ-ಅಚಾನಕ್-ಆಶಾವಾದ-ನಂಬಿಕೆ ಇತ್ಯಾದಿ ಬಗ್ಗೆ ನನಗೆ ನಂಬಿಕೆ ಇದೆ...ಸೋ ಗಣೇಶ್ ಅಣ್ಣ ಮತ್ತು ನಾ ಎಂದಾದರೂ ಅಚಾನಕ್ ಆಗಿ ಸಿಕ್ಕರೂ ಸಿಗಬಹ್ದು...ಆದ್ರೆ ಸಮಸ್ಯೆ ಎಂದರೆ ಅವರು ನನ್ನ ನೋಡಿ ಗುರುತು ಹಿಡಿದು -ಆದರೆ ನಾ ಅವ್ರಣನ್ ಗುರುತು ಹಿಡಿಯದೆ ಹೋದರೆ....!! ಅದೇ ಮೇಜರ್ ಪ್ರಾಬ್ಲಮ್ಮು...
ಯಾರ್ಗೆಳನ ನಮ್ ಪ್ರಾಬ್ಲಮ್ಮು??
ಶುಭವಗಾಲಿ..

\।/

Submitted by venkatb83 Thu, 03/07/2013 - 16:00

In reply to by venkatb83

ಅದು ಶುಭವಾಗಲಿ ಆಗಬೇಕಿತ್ತು...!!
ನಮ್ಮದು ಹಾರ್ಡ್ ಕೀ ಬೋರ್ಡ್-ಅವಸರವಸರದಲ್ಲಿ ಓದುವಾಗ ಪ್ರತಿಕ್ರಿಯಿಸುವಾಗ ಬರಹ ಬರೆಯುವಾಗ-ಬರ್ದದ್ದು ಸರ್ಯಾಗಿ ಗಮನಿಸಲು ಆಗದೆ ಈ ರೀತಿಯ ಅಭಾಸ ಆಗೋದಿದೆ..!
ಅಭಾಸಕ್ಕೆ ಕ್ಷಮೆ ಇರಲಿ.!!

ಗಣೇಶ್ ಅಣ್ಣ ಅದ್ಯಾವ್ದು ನಿಮ್ಮ ಆ ಗಿಣಿ...?
ಈ ಹಿಂದೆ ಅದರ ಬಗ್ಗೆ ಬರಃಹ ಬರೆದಿರುವಿರ ?ನನಗೆ ಆ ತರಹದ್ದು ಓದಿದ ನೆನಪು..

ಅಂದ್ ಹಾಗೆ ಪಕ್ಷಿಗಳಲಿ ಗಿಳಿಯೇ ಥಟ್ಟನೆ ಮನ ಸೆಳೆವದು-ಪ್ರಿಯ ಪಕ್ಷಿ...
ನನಗೆ ಮೊದಲಿನಿಂದಲೂ ಗಿಳಿ-ಮೊಲ-ಪಾರಿವಾಳ ಸಾಕುವ ಬಗ್ಗೆ ಯೋಚನೆ-ಆದರೆ ಹಾಗೆ ಸಾಕಿದ ಗಿಳಿ -ಪಾರಿವಾಳ ಅದೆಸ್ತೋ ದಿನಗಳ ನ್ನತರದ ಒಡನಾಟದ ನಂತರವೂ ಮಾಲೀಕರ ಮನೆ ಬಿಟ್ಟು ಆಚೆ ಹಾರಿ ಹೋಗಿ ಮರಳಿ ಬರದಿರುವುದು ಕೇಳಿ ನೋಡಿ -ಆಮೇಲೆ ಅವುಗಳ ಅಗಲಿಕೆ ತಾಳಲು ಕಷ್ಟ ಅಂತ ಸುಮ್ಮನಿರುವೆ...

ನಿಮ್ಮ ಗಿಳಿ ಸಿಕ್ಕ ಬಗೆ-ಅದು ನಿಮ್ಮೊಡನೆ ಒಡನಾಟದಲ್ ಇರುವ ಬಗೆ ಬಗ್ಗೆ ಒಂದು ಬರಹ ನಾ ನಿರೀಕ್ಷಿಸುವೆ...
ಶುಭವಾಗಲಿ..

\।

Submitted by ಗಣೇಶ Sat, 03/09/2013 - 00:49

In reply to by venkatb83

ಸಪ್ತಗಿರಿವಾಸಿ, ನಾನು ಶುಭವಾಗಲಿ ಎಂದೇ ಓದಿದ್ದೆ.. ಯಾರಲ್ಲೂ ಅವರ ಸಾಕುಪ್ರಾಣಿಯ ಬಗ್ಗೆ ವಿಚಾರಿಸಬಾರದು. ಮತ್ತೆ ಅವರು ನಿಲ್ಲಿಸುವುದೇ ಇಲ್ಲ. ನಾನು ಪ್ರಾರಂಭದಲ್ಲಿ ನನ್ನ ಪ್ರೊಫೈಲ್ ಚಿತ್ರವಾಗಿ ನನ್ನ ಗಿಳಿಯ ಚಿತ್ರವೇ ಹಾಕಿದ್ದು. ಹಾಗೆ ನನ್ನ ಸಂಪದದ ಹಳೇ ಮಿತ್ರರಿಗೆ ಗಿಳಿ ನೆನಪು. ಗಿಳಿ ಬಗ್ಗೆ ತುಂಬಾ ಬರೆಯಲಿದೆ. ’ದೇವರು ಬಲಿಪ್ರಿಯ" ಎಂಬ ಬ್ಲಾಗ್ ಬರೆಯಲೂ ಗಿಳಿಯೇ ಕಾರಣ. ಇನ್ನೊಮ್ಮೆ ಬರೆಯುವೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಜತೆಗಾತಿಯೊಂದಿಗೆ ಪ್ರೀತಿ ಜಾಸ್ತಿಯಾಗಲಿ. ನೀವು ಇನ್ನು ಕೆಲವೇ ತಿಂಗಳಲ್ಲಿ ಮದುವೆಯಾಗಲಿರುವವರು. ನಾನು ಇನ್ನು ಒಂದು ತಿಂಗಳಿಗೆ ವಿವಾಹದ ೨೫ ವರ್ಷಮುಗಿಸಲಿರುವವ!

Submitted by venkatb83 Sat, 03/09/2013 - 19:03

In reply to by ಗಣೇಶ

ಗಣೇಶ್ ಅಣ್ಣ ;())) ಬಹುಶ ಅದ್ಕಿನ್ನು ದಂಡಿ(ಬೇಜಾನ್-ಉ ಕ ಭಾಷೆಯಲ್ಲಿ ) ಸಮಯವಿದೆ..!!
ಈಗ ಪರಸ್ಪರ ಅರಿಯುವ ಸಮಯ....!!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..

\।

Submitted by ಗಣೇಶ Sat, 03/09/2013 - 00:33

In reply to by makara

:) :) ಶ್ರೀಧರ್‌ಜಿ, ಈಗ ಸಪ್ತಗಿರಿವಾಸಿಯ ಎದುರಿಗೆ ನಿಂತು "ನಾನು ಗಣೇಶ" ಎಂದರೂ,"ಸೈಡಿಗೆ ಹೋಗ್ರೀ, ಇಂದಾ ಮಾರಾಯ್ತಿ ಉಂತ್‌ಯಾ,.." ಎಂದು ಓಡುವನು.:)

Submitted by partha1059 Thu, 03/07/2013 - 10:32

ಗಣೇಶರೆ
ಈ ಜಯನಗರ‌ ನಾಲ್ಕನೆ ಬ್ಲಾಕ್ ನನಗೆ ಸುಮಾರು ಮುವತ್ತು ವರುಶಗಳಿ0ಗಲು ಪರಿಚಿತವೇನೊ. ಅಲ್ಲಿ ಪುಟ್ಟಣ್ಣ ಚಿತ್ರಮ0ದಿರವು ಇತ್ತು, ಅಲ್ಲಿ ಸಾಕಷ್ಟು ಸಿನಿಮಾ ನೋಡಿದ‌ ನೆನಪು. ಎದುರಿನ‌ ಬಸ್ ಸ್ಟಾ0ಡ್ ಹಾಗು ಮಾಲು ಈಗ‌ ಒ೦ದೆರಡು ವರುಷಗಳಾಯಿತೇನೊ. ಈಗ‌ ಹತ್ತು ಹನ್ನೆರಡು ವರುಷಗಳಿ0ದ‌ ನಾಲ್ಕನೆ ಬ್ಲಾಕ್ ಹಾಗು ಜೈನ‌ ಮ0ದಿರದ‌ ಎದುರಿಗೆ ನಿತ್ಯ ಸ0ಚಾರ‌ ನನ್ನದ್ದು .....ಆದರೂ.....ಗಣೇಶ‌ ದ್ಱುಷ್ಟಿಯೆ ಬೇರೆ. ಬಿಡಿ....

Submitted by Shreekar Thu, 03/07/2013 - 20:27

ಗಣೇಶಣ್ಣಾ,

ನಿಮ್ಮ ಕುಮಾರಿ ಮೊನ್ನೆ ಮೊನ್ನೆಯಷ್ಟೇ ಎಮ್ ಬಿ ಬಿ ಎಸ್ ಸೇರಿದ ಹಾಗೆ ನಿಮ್ಮ ಬ್ಲಾಗ್‌ ಓದಿದ ನೆನಪು.

ಈಗ ಎಂಡಿ ಸೇರುವಷ್ಟು ಬೆಳೆದದ್ದು ಕೇಳಿ ಸಂತಸವಾಯಿತು.

ನಮ್ಮ ಸೋದರಿಪುತ್ರಿ ಪುಟ್ಟಿಯೂ ಇದೇ ಪರಿಸ್ತಿತಿಯಲ್ಲಿ, ಸೀಟು - ಸಿಗುವುದೋ ಇಲ್ಲವೋ ಎಂಬ ಚಿಂತೆಯಲ್ಲಿ !

ಪುಟ್ಟಿಗೆ ಸಿಕ್ಕ ಎರಡು ಪುಕ್ಕಟೆ ಸಲಹೆಗಳು:-
AFMC

ಯಾ
ವಿದೇಶೀ ಎಂಡಿ. -- ಚೀನಾದಲ್ಲಿ ನಾಲ್ಕೈದು ಸಾವಿರ ಡಾಲರ್ ಅಷ್ಟೇ ಶುಲ್ಕವಂತೆ! ಜೀವನವೆಚ್ಚವೂ ಭಾರತಕ್ಕಿಂತ ಎಷ್ಟೋ ಕಡಿಮೆಯಂತೆ!
http://chinaenglishmedium.com/

Submitted by Shreekar Thu, 03/07/2013 - 20:45

In reply to by Shreekar

ಒಂದಲ್ಲ ಎರಡು ಎಂಡಿ ಗಳಿಸಿದ ಕತೆ

ಗಣೇಶಣ್ಣ
ನಮ್ಮ ನಿಮ್ಮ ಮಕ್ಕಳು ಒಂದು ಎಂಡಿ ಸೀಟಿಗೇ ಇಷ್ಟೊಂದು ಕಷ್ಟಪಡುತ್ತಿದ್ದರೆ, ನಮ್ಮ ಬಂಧುಗಳೊಬ್ಬರು ಎರಡು ಎಂಡಿ ಗಳಿಸಿದ ಕತೆ ಇಲ್ಲಿದೆ.
ಶ್ರೀ ಕೋ.ಲ.ಕಾ. ಅವರು ತಮ್ಮ ಯೋಗ್ಯತೆಯ ಮೇಲಿಂದಲೇ ಎಂಬಿಬಿಎಸ್ ಮುಗಿಸಿ ಸರಕಾರೀ ಸೇವೆಗೆ ಸೇರಿ ಅರಿವಳಿಕೆ ಶಾಸ್ತ್ರದಲ್ಲಿ ಎಂಡಿ ಮಾಡಿ ಸಂತ ಜಾನರ ವೈದ್ಯಕೀಯ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದರು. ಮೇಲಿಂದಮೇಲೆ ರಾತ್ರಿಕರೆಗಳು ಬರುವುದು ಸೇರದೆಹೋಗಿ ಕೆಲಸ ಬಿಟ್ಟುಬಿಟ್ಟು ಮಾಡಿದ್ದೇನು ಗೊತ್ತೇ?
ಸರಕಾರೀ ಮೆಡಿಕಲ್ ಕಾಲೇಜಿನಲ್ಲಿ ಫಾರ್ಮಕಾಲಜಿಯಲ್ಲಿ ಇನ್ನೊಂದು ಎಂಡಿ ಮಾಡಿ ಅಲ್ಲೇ ಅಧ್ಯಾಪನ ವ್ರತ್ತಿಗೆ ಸೇರಿದ್ದು. ) :-)
ಅವರ ಜೀವನ ದ್ರಷ್ಟಿಯೇ ಬೇರೆ -- ಬನ್ನೇರುಘಟ್ಟದ ಮನೆಯಿಂದ ಬೆಂ. ಮೆ. ಕಾಲೇಜಿಗೆ 17 ಕಿ.ಮಿ. ಸೈಕಲ್ ಮೇಲೆ ಹೋಗುತ್ತಾರೆ !

Submitted by ಗಣೇಶ Fri, 03/08/2013 - 00:13

In reply to by Shreekar

>>>ಒಂದು ಎಂಡಿ ಸೀಟಿಗೇ ಇಷ್ಟೊಂದು ಕಷ್ಟಪಡುತ್ತಿದ್ದರೆ-------ಶ್ರೀಕರ್‌ಜಿ, NEETಗೆ ಫೀಸ್ ಕಟ್ಟಲು MGRoadನ ಆಕ್ಸಿಸ್ ಬ್ಯಾಂಕ್‌ಗೆ ೩ ತಿಂಗಳ ಮೊದಲು ಹೋಗಿದ್ದಾಗ ಕ್ಯೂ ನೋಡಬೇಕಿತ್ತು. ಹಿಂದಿನ ದಿನ ಅದಕ್ಕೂ ಜಾಸ್ತಿ ಜನ ಬೆಳ್ಳಂಬೆಳಗ್ಗೆ ಬಂದು ಕಾದಿದ್ದರಂತೆ. ಪಿಜಿ ಪರೀಕ್ಷೆಗಾಗಿ ವರ್ಷವಿಡೀ ಟ್ಯೂಷನ್+ಓದು.. ಪುಸ್ತಕ ಹಿಡಿದು ಓದುತ್ತಲೇ ಕ್ಯೂ ನಿಂತಿದ್ದವರು ಅನೇಕ! ತುಂಬಾ ಕಷ್ಟ ಪಡುತ್ತಾರೆ.; ...>>>ಬನ್ನೇರುಘಟ್ಟದ ಮನೆಯಿಂದ ಬೆಂ. ಮೆ. ಕಾಲೇಜಿಗೆ 17 ಕಿ.ಮಿ. ಸೈಕಲ್ ಮೇಲೆ ಹೋಗುತ್ತಾರೆ !---
ಕೋ.ಲ.ಕಾ.ಅವರು ಮಹಾನ್. ಈ ಕಾಲದಲ್ಲಿ ಕಾಲೇಜಿಗೆ ಸೇರುವಾಗಲೇ ಬೈಕ್ ಡಿಮಾಂಡ್ ಮಾಡುವ(ಅದೂ ಸೆಕೆಂಡ್ ಹ್ಯಾಂಡ್ ಆಗದು) ಮಕ್ಕಳಿಗೆ ತೋರಿಸಬೇಕು.

Submitted by ಗಣೇಶ Fri, 03/08/2013 - 00:41

In reply to by Shreekar

ಶ್ರೀಕರ್‌ಜಿ, ಮೊನ್ನೆ ಮೊನ್ನೆಯಷ್ಟೇ ಸ್ಕೂಲ್‌ಗೆ ಸೇರಿಸಿದ್ದು...! ಅಲ್ಲಾ ಈ ಹೆಣ್ಣು ಮಕ್ಕಳು ಬಹಳ ಬೇಗ ಬೆಳೆಯುತ್ತಾರೆ..ಒಂದು ಹಿಂದಿ ಸಿನೆಮಾ "ಐಸಿ ಭೀ ಕ್ಯಾ ಜಲ್ದೀ ಹೈ" (ಸಿನಿಮಾ ನಟ ಸಚಿನ್ ಅಭಿನಯದ್ದಿರಬೇಕು) ಯಲ್ಲಿ ಮಗಳು ಬೆಳೆಯುತ್ತಾ ಹೋದಹಾಗೆ ತಂದೆಗೆ ಇನ್ನೂ ಆಕೆ ಮಗುವಿನ ತರಹವೇ...ಅದೇ ಅವಸ್ಥೆ ನನ್ನದು. ಈಗ ಎಂಡಿ ಸೇರುವಷ್ಟು ಬೆಳೆದಿದ್ದಾಳೆ!; ಆಸು ಹೆಗ್ಡೆಯವರು ಅವರ ಮಗಳು MBBS ಸೇರಿದಾಗ ಬರೆದ ಕವನಕ್ಕೆ ಪ್ರತಿಕ್ರಿಯೆಯಾಗಿ ನನ್ನ ಮಗಳನ್ನೂ ಸೇರಿಸಿದ ಬಗ್ಗೆ ಬರೆದಿದ್ದೆ. ಚೀನಾ ಪಾಕ್ ಇಂಗ್ಲೇಂಡ್‌ನಲ್ಲಿ ಫ್ರೀ ಪಿಜಿ ಸೀಟು ಕೊಡುತ್ತಾರೆಂದರೂ ಬೇಡ.. ನಮ್ಮ ಕನ್ನಡ ನಾಡಲ್ಲಿ ಸಿಕ್ಕಿದರೆ ಖುಷಿ. ನಿಮ್ಮ ಸೋದರಿಪುತ್ರಿಗೂ ಪಿಜಿ ಸೀಟು ಈ ವರ್ಷವೇ ಸಿಗಲಿ ಎಂದು ಹಾರೈಸುವ-ಗಣೇಶ.--- (ಸಮಯ ಆಗಲೇ ೧೨.೩೦ ಕಳೆದಿರುವುದರಿಂದ ಉಳಿದ ಮಿತ್ರರ ಪ್ರತಿಕ್ರಿಯೆಗೆ,... ಹಾಗೂ ಅನೇಕ ಲೇಖನಗಳನ್ನು ಓದಲು ಬಾಕಿ ಇದೆ...ಎಲ್ಲಕ್ಕೂ ನಾಳೆ... ಅಲ್ಲ ಇಂದು ರಾತ್ರಿ ಪ್ರತಿಕ್ರಿಯೆ ಬರೆಯುವೆ. )

Submitted by venkatb83 Sat, 03/09/2013 - 19:07

In reply to by ಗಣೇಶ

"ಈ ಹೆಣ್ಣು ಮಕ್ಕಳು ಬಹಳ ಬೇಗ ಬೆಳೆಯುತ್ತಾರೆ."

ಶ್ರೀಕರ್ ಜೀ ಆ ರೀತಿ ನನಗೆ ಅನಿಸಿದ್ದಿದೆ...ಮತ್ತದು ನಿಜ ಕೂಡ...ಮೊನ್ನೆ ಮೊನ್ನೆ ಜನಿಸಿ
ನನ್ನೆದುರು ಬೆಳೆದವರು ಈಗ ಮದ್ವೆಯಾಗಿ ೨-೩ ಮಕ್ಕಳ ತಾಯಿ ಆಗಿರುವರು -ನನ್ನ ಸಹಪಾಟಿಗಳು(ಸೀನಿಯರ್ ಜ್ಯೂನಿಯರ್ ಸಹಾ ) ಬಹುತೇಕ ಜನ ಮದ್ವೆ ಆಗಿ ಆಯ್ತು..ಈಗ ಆ ಗುಂಪಲಿ ನಾನೊಬ್ಬನೇ ಉಳಿದಿರೋದು-ಜಂಟಿ ಆಗದೆ...!! ಒಂಟಿಯಾಗಿ....!!

ಶುಭವಾಗಲಿ..

\।

Submitted by Shreekar Wed, 03/13/2013 - 20:09

In reply to by venkatb83

@ ಪ್ರಾಸಪ್ರಿಯ ಸಪ್ತಗಿರಿವಾಸಿ

"..ಈಗ ಆ ಗುಂಪಲಿ ನಾನೊಬ್ಬನೇ ಉಳಿದಿರೋದು-ಜಂಟಿ ಆಗದೆ...!! ಒಂಟಿಯಾಗಿ..."

ಜೀವನದ ಉದ್ದೇಶವೇ ತಳಿಯನ್ನು ಮುಂದುವರಿಸಿಕೊಂಡು ಹೋಗುವುದು.

ಸಾಧ್ಯವಾದಷ್ಟು ಬೇಗ ಸಂತತಿ ಮುಂದುವರಿಸುವ ಶುಭ ಕಾರ್ಯ ಮಾಡುವಂತವರಾಗಿ.

ಶುಭಸ್ಯ ಶೀಘ್ರಂ !

“Consider the fact that for 3.8 billion years, a period of time older than the Earth's mountains and rivers and oceans, every one of your forebears on both sides has been attractive enough to find a mate, healthy enough to reproduce, and sufficiently blessed by fate and circumstances to live long enough to do so. Not one of your pertinent ancestors was squashed, devoured, drowned, starved, stranded, stuck fast, untimely wounded, or otherwise deflected from its life's quest of delivering a tiny charge of genetic material to the right partner at the right moment in order to perpetuate the only possible sequence of hereditary combinations that could result -- eventually, astoundingly, and all too briefly -- in you.”
(Bill Bryson in A Short History of Nearly Everything)

“Consider the fact that for 3.8 billion years, a period of time older than the Earth's mountains and rivers and oceans, every one of your forebears on both sides has been attractive enough to find a mate, healthy enough to reproduce, and sufficiently blessed by fate and circumstances to live long enough to do so. Not one of your pertinent ancestors was squashed, devoured, drowned, starved, stranded, stuck fast, untimely wounded, or otherwise deflected from its life's quest of delivering a tiny charge of genetic material to the right partner at the right moment in order to perpetuate the only possible sequence of hereditary combinations that could result -- eventually, astoundingly, and all too briefly -- in you.”

Submitted by venkatb83 Sat, 03/16/2013 - 21:14

In reply to by Shreekar

"" ಜೀವನದ ಉದ್ದೇಶವೇ ತಳಿಯನ್ನು ಮುಂದುವರಿಸಿಕೊಂಡು ಹೋಗುವುದು. ಸಾಧ್ಯವಾದಷ್ಟು ಬೇಗ ಸಂತತಿ ಮುಂದುವರಿಸುವ ಶುಭ ಕಾರ್ಯ ಮಾಡುವಂತವರಾಗಿ. ಶುಭಸ್ಯ ಶೀಘ್ರಂ !"

;())))

ಹ್ ಹಾಆಆ///!!

\|