ಜರ್ದಾರಿ-ಒಬಾಮಾ ಸಂವಾದ!!!

ಜರ್ದಾರಿ-ಒಬಾಮಾ ಸಂವಾದ!!!

ಜರ್ದಾರಿ: ಒಸಾಮ-ಬಿನ್-ಲಾಡೆನ್ ಜೀವಂತವಾಗಿಲ್ಲ
ಒಬಾಮಾ: ನಾವು ಇದನ್ನು ನಂಬೋಲ್ಲ

ಜರ್ದಾರಿ: ನಿಜವಾಗಿಯೂ ಆತ ಜೀವಂತವಾಗಿಲ್ಲ
ಒಬಾಮಾ: ನಿಜವಾಗಿಯೂ ನಾವು ಇದನ್ನು ನಂಬೋಲ್ಲ

ಜರ್ದಾರಿ: ಒಸಾಮ ಸತ್ತು ತಿಂಗಳುಗಳೇ ಆಗಿವೆ
ಒಬಾಮಾ: ಒಸಾಮ ಸತ್ತ ಸುದ್ದಿ ನಮಗೆ ದೊರೆತೇ ಇಲ್ಲ

ಜರ್ದಾರಿ: ಒಸಮಾ ಸಾವಿನ ಸುದ್ದಿ ನಿಜಕ್ಕೂ ನಂಬಲರ್ಹ
ಒಬಾಮಾ: ನೀವ್ಯಾರೂ ನಂಬಲರ್ಹರಲ್ಲ, ಆ ಸುದ್ದಿಯೂ ಕೂಡ

ಜರ್ದಾರಿ: ನಮ್ಮನ್ನು ನಂಬಬೇಡಿ, ಆದರೆ ಈ ಸುದ್ದಿಯ ಮೂಲವನ್ನಾದರೂ ನಂಬಿ
ಒಬಾಮಾ: ಹೇಗೆ ನಂಬಬಹುದು ಆ ಸುದ್ದಿಯ ಮೂಲದ ಬಗ್ಗೆ ನಮಗೆ ಗೊತ್ತೇ ಇಲ್ಲ

ಜರ್ದಾರಿ: ನಮಗೆ ಗೊತ್ತಿದೆ ಆ ನಂಬಲರ್ಹ ಮೂಲ ಯಾವುದೆಂದು. ದಯವಿಟ್ಟು ನಂಬಿ.
ಒಬಾಮಾ: ಹೇಗೆ ನಂಬಬಹುದು ಸ್ವಾಮೀ, ಯಾವುದದು ಅಷ್ಟು ನಂಬಿಕೆಯ ಮೂಲ?

ಜರ್ದಾರಿ: ಹೀಗೆಯೇ ಬನ್ನಿ, ಅಲ್ಲಿ ಒಳಕೋಣೆಯಲ್ಲಿ ಇದ್ದಾನೆ, ಈ ಸುದ್ದಿಯ ನಂಬಲರ್ಹ ಮೂಲ
ಒಬಾಮಾ: ಯಾರವನು ನಿಮ್ಮ ಒಳಕೋಣೆಯಲ್ಲಿ ಕುಳಿತಿರುವವನು, ಅಷ್ಟು ನಂಬಿಕೆಯ ವ್ಯಕ್ತಿ?

ಜರ್ದಾರಿ: ನೀವು ಅವನ ಮಾತನ್ನಲ್ಲದೆ ಇನ್ಯಾರ ಮಾತನ್ನೂ ನಂಬೋಲ್ಲ ಅಂತ ಗೊತ್ತು. ಹೋಗಿ ಅಲ್ಲಿದ್ದಾನೆ ನೋಡಿ ಒಸಾಮಾ-ಬಿನ್-ಲಾಡೆನ್. ಅವನೇ ಹೇಳ್ಸಿರೋದು ನನ್ನಿಂದ ಇದನ್ನೆಲ್ಲಾ...
:-)

Rating
No votes yet

Comments