ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ
ಮುಸ್ಲಿಂ ರುದ್ರಭೂಮಿಯಲ್ಲಿ ಉಗ್ರರ ಹೆಣಗಳಿಗೆ ಜಾಗವಿಲ್ಲ. ೩-೪ ದಿನದ ಹಿಂದೆ ಸಣ್ಣದಾಗಿ ಕಾಣಿಸಿಕೊಂಡ ಈ ಸುದ್ದಿ ಬಹುಶಃ ಎಲ್ಲ ಪತ್ರಿಕೆಗಳಲ್ಲೂ ಸ್ಥಾನ ಪಡೆದಿತ್ತು.
ಏನಾಗಿದೆ ನಮ್ಮ ಮುಸ್ಲಿಂ ಸ್ನೇಹಿತರಿಗೆ? ಸತ್ತ ದೇಹದ ಮೇಲೇಕೆ ನಿಮ್ಮ ಆಕ್ರೋಶ. ಹಳ್ಳಿಗಳಲ್ಲಿ ಒಂದು ಮಾತಿದೆ ಸತ್ತ ಹಾವನ್ನು ಹೊಡೆಯುವವ ಎಂದು. ಇದು ಯಾವ ಪುರುಷಾರ್ಥಕ್ಕೆ. ನಿಮ್ಮ ನಿಜವಾದ ಪೌರುಷ ತೋರಿಸಬೇಕಿರುವುದು ಉಗ್ರರ ಹೆಣಗಳಿಗಲ್ಲ ಉಗ್ರರಿಗೆ. ಉಗ್ರರ ಹೆಣಗಳಿಗೆ ಸ್ಮಶಾನದಲ್ಲಿ ಜಾಗ ಕೊಡದಿದ್ದರೆ ಉಗ್ರರೆಲ್ಲ ಮುಸಲ್ಮಾನರಲ್ಲವೆಂದು ಸಾಬೀತಾಗುತ್ತದೆಯೆ? ಅಥವ ಅವರನ್ನು ಮುಸ್ಲಿಂ ರುದ್ರಭೂಮಿಯಲ್ಲಿ ಮಣ್ಣು ಮಾಡಿದಾಕ್ಷಣ ಇಲ್ಲಿರುವ ಮುಸಲ್ಮಾನರೆಲ್ಲ ಉಗ್ರರಾಗಿಬಿಡುತಾರೆಯೆ? ಧರ್ಮವೆನ್ನುವುದು ಮನಸ್ಸಿನ ಒಂದು ನಂಬಿಕೆ, ಸತ್ತವನಿಗೆಲ್ಲಿಯ ಮನಸ್ಸು, ಮನಸ್ಸೆ ಇಲ್ಲದವನಿಗೆ ಧರ್ಮವೆಲ್ಲಿ? ಇರಲಿ ಬಿಡಿ ಆ ದೇಹಗಳನ್ನು ಹಿಂದೂ ರುದ್ರಭೂಮಿಯಲ್ಲೆ ಸಂಸ್ಕರಿಸಲಿ ಆಗ ಅವರೆಲ್ಲ ಹಿಂದೂಗಳಾಗಿ ನಮ್ಮ ಬುದ್ದಿಜೀವಿಗಳು ಅದನ್ನು ಹಿಂದೂ ಉಗ್ರವಾದ ಎಂದು ಧಾರಾಳವಾಗಿ ಕ(ಕೆ)ರೆದು ಕೊಳ್ಳಲಿ.
ಇಲ್ಲಿನ ಜನರ ಸಹಾಯವಿಲ್ಲದೆ ಯಾವ ಉಗ್ರಗಾಮಿ ಕೂಡ ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ. ನಿಮ್ಮ ದಿಟ್ಟತನ ಅಲ್ಲಿ ಪ್ರದರ್ಶಿಸಿ. ಪಾಕಿ ಉಗ್ರಗಾಮಿಗಳೆ ಭಾರತದ ನೆಲಕ್ಕೆ ಮತ್ತು ಮುಸಲ್ಮಾನ್ ಮನಕ್ಕೆ ನಿಮಗೆ ಪ್ರವೇಶವಿಲ್ಲ ಎಂದು ದಿಟ್ಟ ಉತ್ತರ ಹೇಳಿ. ನಾವು ಮುಸ್ಲಿಮರು ಆದರೆ ಭಾರತೀಯ ಎಂದು ವಿಜಾಪುರದಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದವರಿಗೆ ಉತ್ತರಿಸಿ. ಅದ್ಯಾವ ಉಗ್ರಗಾಮಿ ನಮ್ಮ ಮೇಲೆ ದಾಳಿ ಮಾಡುತ್ತಾನೆ ನೋಡೋಣ. ನಿಮ್ಮ ಮತವನ್ನೆ(vote) ನಂಬಿ ಭಯೋತ್ಪಾದಕನೊಬ್ಬನನ್ನು ರಕ್ಷಿಸುತ್ತಿರುವ ಪಕ್ಷವೊಂದಕ್ಕೆ ನೇರವಾಗಿ ಹೇಳಿ ಭಯೋತ್ಪಾದಕನಿಗೆ ಧರ್ಮವಿಲ್ಲ. ನಮ್ಮ ಧರ್ಮಕ್ಕೂ ಅವನಿಗೂ ಸಂಭಂದವಿಲ್ಲ. ಇಸ್ಲಾಮಿನ ಜೊತೆ ಅವನನ್ನು ತಳುಕುಹಾಕುವುದರಿಂದ ಅವನಿಗೆ ಅಂಟಿರುವ ಕಳಂತ ಇಸ್ಲಾಮಿಗೂ ತಟ್ಟುವ ಭಯವಿರುತ್ತದೆ ಎಂದು ಎದೆ ತಟ್ಟಿ ಹೇಳಿ. ಭಯೋತ್ಪಾದಕನೊಬ್ಬನನ್ನು ನೇಣಿಗೇರಿಸುವುದರಿಂದ ಒಂದು ಸಮುದಾಯಕ್ಕೆ ನೋವಾಗುತ್ತದೆಂದು ಭಾವಿಸುವುದು ಇಡೀ ಸಮುದಾಯವನ್ನು ಭಯೋತ್ಪಾದಕ ಎಂಬ ಹಣೆ ಪಟ್ಟಿಕಟ್ಟಿದಂತೆ ಅಲ್ಲವೆ? ದಿಟ್ಟತನದಿಂದ ನಿಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿ (ಕ್ಷಮಿಸಿ ಪ್ರದರ್ಶಿಸಬೇಕಿಲ್ಲ ಅನುಸರಿಸಿ) ಹೇಳಿ ಭಯೋತ್ಪಾದಕನನ್ನು ರಕ್ಷಿಸುವ ಪಕ್ಷಕ್ಕೆ ನಮ್ಮ ಮತ ನೀಡುವುದಿಲ್ಲವೆಂದು.
ಸ್ವಾಮಿ ಮುಸಲ್ಮಾನ್ ಬಂಧುಗಳೆ ನೀವೀಗ ಜಾಗ ಕೊಡುವುದಿಲ್ಲ ಎಂದು ಹೇಳಬೇಕಿರುವುದು ಸ್ಮಶಾನದಲ್ಲಲ್ಲ, ಬದಲಿಗೆ ನಿಮ್ಮ ಮನಗಳಲ್ಲಿ, ಮನೆಗಳಲ್ಲಿ
Comments
ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ
ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ
ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ
In reply to ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ by ಅರವಿಂದ್
ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ
In reply to ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ by ಅರವಿಂದ್
ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ
In reply to ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ by prasca
ಉ: ಜಾಗವಿಲ್ಲ ಎಂದು ಹೇಳಬೇಕಿರುವುದು ಮನ, ಮನೆಗಳಲ್ಲಿ