ಜಾಣೆ

ಜಾಣೆ

ಜಾಣೆ..!!
ಇದು ನನ್ನ ಕನಸಿನ ಕೂಸು ಜಾಣೆಯೆಂಬ ಕವನ ಸಂಕಲನದ ಮೂಲಕ ಸಾಹಿತ್ಯಲೋಕಕ್ಕೆ ಕಾಲಿಡಲು ನಾನು ಈಗಷ್ಟೇ ತಯಾರಾಗಿ ನಿಂತಿರುವೆ ನಿಮ್ಮೆಲ್ಲರ ಮುಂದೆ.
ಸರಿಯಾಗಿ ಒಂದು ವರ್ಷ ಸಾಹಿತ್ಯಲೋಕದಲ್ಲಿ ಏನಾದರೂ ಸಾಧನೆ ಮಾಡಲೆ ಬೇಕೆಂಬ ಕನಸು ಕಂಡಿದ್ದೆ. ಅದು ನನಸಾಗಿದೆ ಎಂದು ನಾ ಹೇಳುವುದಿಲ್ಲ ಇದು ನನ್ನ ಪ್ರಥಮ ಹೆಜ್ಜೆ ಅದೆಷ್ಟೋ ಕನಸುಗಳು ನನ್ನ ಜೊತೆಯಾಗಿವೆ. ಅವುಗಳಿಗೆ ಜೀವ ತುಂಬಿ ನಿಮ್ಮ ಮುಂದಿಡುವ ಹೆಬ್ಬಯಕೆ ನನ್ನದು..
ಇನ್ನು ನನ್ನ ಈ ಪಯಣದ ಹಿಂದೆ ಅದೊಂದು ಶಕ್ತಿ ಇದೆ. ಸಾಮಾನ್ಯವಾಗಿ 18ರಿಂದ 20ರ ನಡುವಿನ ವಯಸ್ಸು ಚಿಟ್ಟೆಯಂತೆ ನಮ್ಮ ಕೈಗೆ ಸಿಗದೆ ಕಂಡ ಕಂಡ ಕಡೆ ಹಾರುತ್ತ ಸಾಗುತ್ತದೆ. ಒಂದೆ ವಿಷಯದ ಕಡೆ ಗಮನ ಕೊಡದೆ ಹಲವು ವಿಷಯಗಳಲ್ಲಿ ಮುಳುಗುತ್ತದೆ. ಉದಾಹರಣೆಗೆ ಪ್ರೀತಿ, ಮೋಜು ಮಸ್ತಿ, ಸಿನಿಮಾ, ಸುತ್ತಾಟ, ಈಗೆ ಅನೇಕ ವಿಷಯದ ಸುತ್ತ ಸುತ್ತುವಂತಹ ಸಮಯವದು. ಹೌದು
ಆದರೆ ನನ್ನ ಮನಸ್ಸು ಆಗಷ್ಟೆ ಜಗತ್ತಿನ ಸಂಬಂಧಗಳ ಮೇಲಿನ ನಂಬಿಕೆ ಕಳೆದುಕೊಂಡು ಒಂಟಿ ತನ ಬಯಸುತ್ತಿತ್ತು. ಗೆಳೆತನ, ಸಂಬಂಧಿಕರು, ಬಂಧುಬಳಗ ಇವರ ನಡುವಳಿಕೆಯಿಂದ ಹಾಗೂ ನನ್ನ ಅವರು ನಡೆಸಿಕೊಂಡ ರೀತಿಯಿಂದ ಮನಸ್ಸು ಬಹಳಷ್ಟು ಬೇಸರಕೊಂಡು ಯಾವ ಸಂಬಂಧವನ್ನು ನಂಬಿಕೆಯನ್ನು ಕಳೆದುಕೊಂಡಿತ್ತು.
ಅವರಿಂದ ದೂರ ಇರುವ ಮನಸ್ಸಾಗಿ ದೂರಾಗಿ ನನ್ನ ಕನಸುಗಳೆ ಹಿಂದೆ ಬಿದ್ದೆಯಾದರು.
ಅವರ ತೆಗಳಿಗೆ, ಅವಮಾನದ , ಈಗೆ ಹಲವು ರೀತಿಯಿಂದ ನನ್ನ ಮೇಲೆ ಪ್ರಹಾರಕ್ಕೆ ಮುಂದಾದರು
ನಾನು ಮತ್ತಷ್ಟು ಬಲಿಷ್ಠನಾದೆ ಈ ಪೊಳ್ಳು ಸಂಬಂಧ ನಂಬಿಕೆಗಳಿಗೆ ಅಂತ್ಯವಿಟ್ಟು ನನ್ನದೆ ಪ್ರಪಂಚದಲ್ಲಿ
ಮಗ್ನನಾದೆ ಹಲವು ಪುಸ್ತಕಗಳನ್ನು ತಂದು ಓದಲು ಶುರುಮಾಡಿದೆ.
ಅವರೆಲ್ಲಾ ಅದೆಷ್ಟು ಅವಮಾನ ಮಾಡಿದರು ನೋವೂಂಟು ಮಾಡಿದರು ಅಂದ್ರೆ ಈ ಜೀವನವೆ ಬೇಡೆಂದು ಕೂಳಿತು ಬಿಟ್ಟಿದ್ದೆ.
ಇಷ್ಟೆಲ್ಲ ಆದರು ನಾನು ಕುಗ್ಗದೆ ಏನಾದರೂ ಮಾಡಲೆ ಬೇಕು ನಾಳೆ ಈ ಜೀವನದಲ್ಲಿ ಎಂದು ಕೊಳ್ಳಲು ಕಾರಣ ಅವಳು...!!
ಯಾರವಳು‌...!!
ಜಾಣೆ..
ಹೌದು ಸತ್ಯ ನಾನು ಈ ಅವಮಾನದ ಬಲೆಯಲ್ಲಿ ಬಿದ್ದು ನಡುಗುವಾಗ ನನ್ನ ಜೊತೆಯಾಗಿದ್ದು ನನ್ನ ಜಾಣೆ ಸೋತಾಗ ನಾಳೆ ಗೆಲುವು ನಿನ್ನದೆ.
ಈ ಮೋಸ ಅವಮಾನ ತೆಗಳಿಗೆ ಇಲ್ಲದೆ ಯಾರು ಕೂಡ ಮುಂದೆ ಬರಲು ಅಸಾಧ್ಯವೆಂಬ ಧೈರ್ಯದ ಮಾತುಗಳು ನನ್ನಲ್ಲಿ ಸ್ಪೂರ್ತಿಯನ್ನು ಊಂಟುಮಾಡಿತ್ತು. ತೆಗಳಿದವರ ಮುಂದೆ ನೀ ಎದ್ದು ನಿಲ್ಲಬೇಕಿದೆ ಅವಮಾನದ ಊಡುಗೊರೆ ನೀಡಿದವರಿಗೆ ನೀ ಅವರಷ್ಟೇ ಪ್ರೀತಿಯಿಂದ ನೀ ಗೆದ್ದ ವಿಷಯ ತಿಳಿಸಬೇಕಿದೆ. ಸಾಧನೆಯ ಸಾಧಿಯಲ್ಲಿ ನಾ ಎಂದು ನಿನ್ನ ಹಿಂದೆ ನಿಂತು ಕಾಯುವೆ ಮುಂದೆ ನಡೆದು ಬಿಡು ಸೋತಾಗ ಮತ್ತೊಮ್ಮೆ ಪ್ರಯತ್ನ ಮಾಡೋಣ, ಗೆದ್ದಾಗ ಮತ್ತಷ್ಟು ಸಂತೋಷದಿಂದ ಇಬ್ಬರು ಗೆಲುವಿನಲ್ಲಿ ಕುಣಿದು ಬಿಡೋಣ ಎಂದು ಉರಿದುಂಬಿಸಿದ್ದಳು.
ಅವಳು ಬರಿ ಗೆಳೆತಿಯಾಗದೆ ತಾಯಿಯಾದಳು
ತಪ್ಪು ಮಾಡಿದಾಗ ಬೈದಳು. ಸರಿಯಾದಾಗ ಬೆನ್ನತಟ್ಟಿದಳು. ಅವರಿವರ ಮಾತುಗಳಿಗೆ ತಲೆಯಾಡಿಸದಂತೆ ನೀ ಮುಂದೆ ಹೋಗು ಎಂಬ ಸಂದೇಶವನ್ನು ರವಾನಿಸಿದವಳು.
ಪ್ರೀತಿಯೆಂಬ ಸಂಬಂಧಕ್ಕೆ ಹೊಸ ಅರ್ಥವನ್ನು ಕಲ್ಪಿಸಿದವಳು. ಬರ್ ಬರುತ್ತಾ ನನ್ನ ಆವರಿಸಿಕೊಂಡು ಸಾಧನೆಯ ಹಾದಿಯಲ್ಲಿ ಜೊತೆಯಾಗಿ ನಡೆಸಿಕೊಂಡು ಹೊರಟವಳು
ಅವಳ ಹುಚ್ಚು ಭರವಸೆ ಅವಳ ಶುದ್ಧ ಪ್ರೀತಿ ಅವಳ ಧೈರ್ಯ ಇವತ್ತು ಜಾಣೆಯೆಂಬ ಪುಸ್ತಕವನ್ನು
ಹೊಸ ಬರುವಂತೆ ಮಾಡಿದೆ.
ನನ್ನ ಜೀವನದ ಒಂದು ಭಾಗವೆ ನನ್ನ ಮುದ್ದು ಜಾಣೆ ಅವಳಿಲ್ಲದೆ ಈ ಪುಸ್ತಕವು ಇಲ್ಲ..
ಜಾಣೆ ಪುಸ್ತಕದ ಬಗ್ಗೆ ಈ ಪುಸ್ತಕವು ಒಂದಷ್ಟು ವಿಭಿನ್ನ ಪ್ರಯೋಗ ಎಂದರೆ ತಪ್ಪಿಲ್ಲ ಕವನ ಎಂದ ಕೂಡಲೆ ಕುವೆಂಪು, ಬೇಂದ್ರೆಯಂತಹ ಮಹಾನ್ ಕವಿಗಳು ನೆನಪಾಗುವುದರಲ್ಲಿ ಒಂದು ಮಾತಿಲ್ಲ.
ಆದರೆ ಅವರ ಕವನಗಳನ್ನು ಸಾಮಾನ್ಯಜನರು ಅರ್ಥೈಸಿಕೊಂಡು ಓದಿದ್ದು ಬಹಳ ಕಡಿಮೆ.
ಅದಕ್ಕೆ ಈ ಜಾಣೆ ಎಂಬ ಪುಸ್ತಕದಲ್ಲಿ ಪ್ರೀತಿಯೆಂಬ ಒಂದು ವಿಷಯವನ್ನು ತೆಗೆದುಕೊಂಡು ಆಡು ಭಾಷೆಯಲ್ಲಿಯೆ ರಚಿಸಿದ ಹಾಸ್ಯ ಇನಿಗವನಗಳು ಇದು ಒಂದು ರೀತಿಯ ಹೊಸ ಬರಹರ ಶೈಲಿ
ಸಾಮಾನ್ಯರು ಓದಿ ಅರ್ಥೈಸಿಕೊಳ್ಳುವಂತಹದ್ದು
ಹಾಗೂ ಹಾಸ್ಯ ಶೇಕಡ 70ರಷ್ಟು ಹಾಸ್ಯವನ್ನು ಹೊತ್ತು ನಿಂತಿದೆ. ಓದುಗನಿಗೆ ಇದೊಂದು ಹೊಸ ಅನುಭವ ನೀಡುವುದರಲ್ಲಿ ಯಾವುದೆ ಅನುಮಾನವಿಲ್ಲ...
ಗಿರಿಮನೆ ಶ್ಯಾಮರಾವ್ ಅವರ ಮುನ್ನುಡಿ
ಖುಷಿಕೃಷ್ಣ ಅವರ ಬೆನ್ನುಡಿ
ಅರ್ಜುನ್ ಗೌಡ ದೇವಾಲದಕೆರೆಯವರ ಆಶಯ ನುಡಿ..
ಈಗೇ ಹಲವು ಸಾಧಕರ ಮಾತುಗಳೊಂದಿಗೆ ಆರಂಭ ಆಗುವ ಈ ಪುಸ್ತಕ ಒಂದು ವಿಭಿನ್ನ ರೀತಿ ಅನುಭವ ನೀಡುವುದರಲ್ಲಿ ಅನುಮಾನವೇ ಬೇಡ.
ಒಂದೊಮ್ಮೆ ಓದಿ ನಿಮ್ಮ ಅಭಿಪ್ರಾಯ ತಿಳಿ
ಇನ್ನೇನು ಸಧ್ಯದಲ್ಲಿ ಜಾಣೆ ನಿಮ್ಮೆಲ್ಲರನ್ನು ಭೇಟಿಯಾಗಲು ಬರ್ತಿದ್ದಾಳೆ..
ನೀವು ಬನ್ನಿ ನನ್ನ ಜೊತೆಯಾಗಿ...
ಶುಭವಾಗಲಿ
ಪುಸ್ತಕಕ್ಕಾಗಿ 7795005636( ಸಂಜಯ್ ದೇವಾಂಗ) ವಾಟ್ಸ್ ಆಪ್
 

Rating
No votes yet