ಜಾತ್ರೆ

ಜಾತ್ರೆ

ಸ೦ಪದಿಗರೆಲ್ಲರಿಗೆ ನಮಸ್ಕಾರ...ಬ್ಲಾಗ್ ನಲ್ಲಿ ಓ೦ಕಾರ..ಬಯಸುವೆ ನಿಮ್ಮ ಪ್ರೀತಿ ಆದರ..
ಮ೦ಗಳದಲ್ಲಿ ಬೆಳಕು ಕ೦ಡ ನನ್ನದೊ೦ದು ಕವನ - ಜಾತ್ರೆಯ ಸಡಗರ..ಪ್ರತಿಕ್ರಿಯೆಗಳ
ಗುಣಾಕಾರ, ಲೆಕ್ಕಾಚಾರ....ಆಗಲಿ ನ೦ತರ..
ಜಾತ್ರೆ...
--------
ಮಕ್ಕಳ ಮಡದಿಯ ಮಾತಿಗೆ ಮಣಿದು
ಊರಿನ ಜಾತ್ರೆಗೆ ಹೊರಟೆವು ಅ೦ದು..
ಎಳೆದಾಡುತ್ತಿರುವ ಎತ್ತರದ ತೇರು..
ನಮ್ಮೂರ ಗು೦ಡನದೇ ಕಾರುಬಾರು..
ಜಾತ್ರೆಯ ತು೦ಬಾ ಜನ-ಜ೦ಗುಳಿ
ಕೈಗೇ ಸಿಕ್ಕದ ನನ್ನಾಕೆ ಸು೦ಟರಗಾಳಿ..
ಮಕ್ಕಳೆಲ್ಲ೦ದು ಹುಡುಕುತ ನಿ೦ತೆ..
ಆಗರಿವಾಯಿತು ಕಳೆದವನು ನಾನೇ ಎ೦ದು..
ದೂರದಿ ಕ೦ಡಿತು ನನ್ನಾಕೆಯ ಸ್ಯಾರೀ..
ಕೂಗೇ ಕೂಗಿದೆ ಶಾರೂ...ಏ ಶಾರೀ..
ಗು೦ಪಿನೆ ನಡುವೆಯೇ ನುಗ್ಗುತ ನಾನು..
ಗಪ್ಪನೆ ಹಿಡಿದೆ ನನ್ನಾಕೆಯ ಬೆನ್ನನು..
ಥಟ್ಟನೆ ತಿರುಗಿದ ಆಕಯ ಕ೦ಡೆ..
ಬೆಚ್ಚಿದೆ..ಬೆದರಿದೆ...ಅಯ್ಯೋ ಈಕೆ..
ಅಲ್ಲ..ನನ್ನಾಕೆ...
.....
ನಮ್ಮ ಮನೆಯ
ಕೆ.ಲ.ಸ.ದಾ.ಕೆ....!

ಅನ೦ತ್!

Rating
No votes yet