ಜಿಮೇಲ್ ಸೆಕ್ಯೂರಿಟಿ
ಗೂಗಲ್ ನ ಹೊಸ ಯೋಜನೆ ಏನು ಗೊತ್ತೇ? ಈಗಾಗಲೇ ಜಿಮೇಲ್ ನಲ್ಲಿ ಸೆಕ್ಯೂರಿಟಿ ಸಲುವಾಗಿ ನಾವು ಬಳಸಿದ ಐ ಪಿ ಯನ್ನು ನೋಡಬಹುದು.ಆದರೆ ಇದರಲ್ಲಿ ಒಂದೇ ಲೋಕಲ್ ನೆಟ್ ವರ್ಕ್ ನಲ್ಲಿದ್ದರೆ ಗೇಟ್ವೇ ತೋರಿಸುತ್ತದೆ ಹೊರತು ನಮ್ಮ ಐ ಪಿ ಯನ್ನಲ್ಲ. "2-Step Verification"ಜಿಮೇಲ್ ನಲ್ಲಿ ಮಾಡೋದಂತೆ.ಉಚಿತ ಮೇಲ್ ಯೋಜನೆಯನ್ನು ಭದ್ರಗೊಳಿಸುವ ನಿಟ್ಟಿನಿಂದ ಈ ಕೆಲಸಕ್ಕೆ ಮುಂದಾಗಿದೆ ಗೂಗಲ್.ಸದ್ಯಕ್ಕೆ ಇದೊಂದು ಪ್ರಯತ್ನ ಮಾತ್ರ. ಈಗಿನ "2-Step Verification" ಏನೆಂದರೆ ಜಿಮೇಲ್ ನ ಅಕೌಂಟ್ ಸೆಟ್ಟಿ ಂಗ್ಸ್ ನ ಸೆಕ್ಯುರಿಟಿ ನಲ್ಲಿ ಪಾಸ್ವರ್ಡ್ ನ ಜೊತೆಗೆ "2-Step Verification" ಗೆ ಕೂಡ ಒಂದು ಸೌಲಭ್ಯ ಕಲ್ಪಿಸಲಾಗಿದೆ.ನಿಮ್ಮ ಜಿಮೇಲ್ ನಲ್ಲಿ ಲಾಗಿನ್ ಆದ ಕೂಡಲೆ ನಿಮಗೆ ಗೂಗಲ್ ನಿಂದ ಒಂದು ಕರೆ ಬರುತ್ತದೆ ಅಥವಾ ನಿಮಗೆ ಎಸ್ ಎಮ್ ಎಸ್ ಮೂಲಕ ಒಂದು ಕೋಡ್ ಅನ್ನು ಕಳುಹಿಸಲಾಗುತ್ತದೆ.ಈ ಸಂಖ್ಯೆಯನ್ನು ನಿಮ್ಮ ಪಾಸ್ ವರ್ಡ್ ನ ಜೊತೆಗೆ ಇನ್ನೊಂದು ಟ್ಯಾಬ್ ನಲ್ಲಿ ಬರೆದರೆ ಮಾತ್ರ ನಿಮ್ಮ ಅಕೌಂಟ್ ನಲ್ಲಿ ನೀವು ನೋಡಬಹುದು.ಸದ್ಯಕ್ಕೆ ಆನ್ಡ್ರೊಯ್ಡ್ ,ಐ ಫೋನ್ ಹಾಗೂ ಬ್ಲಾಕ್ ಬೆರ್ರಿ ಮೊಬೈಲ್ ಗಳಿಗೆ ಮಾತ್ರ ಈ ಸೇವೆ ಕಲ್ಪಿಸಲಾಗಿದೆ.ಹಾಗಾದರೆ ಇನ್ನು ಮುಂದೆ ನಿಮ್ಮ ಮೇಲ್ ನೋಡಬೇಕಾದರೆ ನಿಮ್ಮಲ್ಲಿ ಮೊಬೈಲ್ ಕೂಡ ಬೇಕಾಗುತ್ತದೆ .ಇದರಿಂದ ನಿಮ್ಮ ಮೇಲ್ ನಂತೂ ಹ್ಯಾಕರ್ ಗಳಿಂದ ದೂರವಿಡುವ ಪ್ರಯತ್ನ ಗೂಗಲ್ ನವರಿಂದ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಒತ್ತಿ . http://googleblog.blogspot.com/2011/02/advanced-sign-in-security-for-your.html