ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%B2%95%E0%B2%BF-%E0%B2%AC%E0%B2%82%E0%B2%A6%E0%B2%BE%E0%B2%97-%E0%B2%AD%E0%B2%BE%E0%B2%97-%E0%B3%A9/4-12-2012/39167

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨ ಲಿಂಕ್  ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%B2%95%E0%B2%BF-%E0%B2%AC%E0%B2%82%E0%B2%A6%E0%B2%BE%E0%B2%97-%E0%B2%AD%E0%B2%BE%E0%B2%97-%E0%B3%A8/3-12-2012/39152

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨ ಲಿಂಕ್  ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%B2%95%E0%B2%BF-%E0%B2%AC%E0%B2%82%E0%B2%A6%E0%B2%BE%E0%B2%97-%E0%B2%AD%E0%B2%BE%E0%B2%97-%E0%B3%A7/29-11-2012/39123

 

 

ಈ ಅನ್ನೋನ್ ಆ ಮೂವರಲ್ಲಿ ಯಾರು ಅಲ್ಲ ಅನ್ನೋದು ಗಟ್ಟಿಯಾದಮೇಲೆ ಮನಸ್ಸಿಗೆ ನಿರಾಳವಾಯಿತು. ಆ ಮೂವರ ಎದುರು ನಾನು ನಡೆದುಕೊಂಡ ರೀತಿ ಅಂದಿಗೆ ಆ ಸಂದರ್ಭಕ್ಕೆ ಸರಿಯಿರಬಹುದೇನೋ. ಆದರೆ ಮತ್ತೊಂದು ದೃಷ್ಟಿಕೋನದಿಂದ ಅದು ತಪ್ಪಾಗಿರಲೂ ಸಾಧ್ಯತೆಯಿತ್ತು. ಅವರುಗಳ ಬಗ್ಗೆ ಯಾವುದೇ ತಪ್ಪು ರೀತಿ ನಡೆದುಕೊಂಡಿಲ್ಲ ಅಂತ ನನಗೆ ನಾನು ಎಷ್ಟು ಬಾರಿ ಹೇಳಿಕೊಂಡರೂ ನನ್ನ ಮನಸ್ಸು ಅದನ್ನೊಪ್ಪುತ್ತಿರಲ್ಲಿಲ್ಲ. ಅವರುಗಳು ನನ್ನ ಮರೆತುಬಿಟ್ಟಿದ್ದರೆನೋ? ನಾನು ಮಾತ್ರ ಕೆಲವೊಂದು ಸಂದರ್ಭಗಳಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದೆ.

 

ಇನ್ನ ಅವಳು ಯಾರಾಗಿದ್ದರೆ ನನಗೇನು? ನನ್ನ ಎಚ್ಚರದಲ್ಲಿ ನಾನಿದ್ದರೆ ಸಾಕು. ಟೈಮ್ ಪಾಸಿಗೊಂದು ಸರಕು ಸಿಕ್ಕಿತು ಎಂದು ವಿಚಿತ್ರವಾದ ಖುಷಿಪಟ್ಟೆ. ಬೇರೆ ಯಾವುದೇ ಯೋಚನೆಗಳಿಲ್ಲದೆ ರಾತ್ರಿ ಕಣ್ಣು ತುಂಬಾ ನಿದ್ದೆ ಮಾಡಿದೆ. ಬೆಳಗ್ಗೆ ಆಫೀಸಿನಲ್ಲಿ ಮಾಡಿದ ಮೊದಲ ಕೆಲಸ ಅವಳ IDಯನ್ನ ಅನ್ ಬ್ಲಾಕ್ ಮಾಡಿದ್ದು. ಅಂದಿನಿಂದ ನನ್ನ ದಿನಚರಿಯಲ್ಲೇ ಬದಲಾಗಿಹೋಯಿತು.೧:೩೦ಕ್ಕೆ ಊಟಕ್ಕೆ ಹೋಗುತ್ತಿದ್ದ ನಾನು ಅವಳು ೨ಕ್ಕೆ ಆನ್ಲೈನ್ ಬರುವಳೆಂದು ೧ ಗಂಟೆಗೆನೆ ಊಟ ಮಾಡಲು ಶುರು ಮಾಡಿದೆ. ೨೦-೩೦ ನಿಮಿಷಗಳಿರುತ್ತಿದ್ದ ನಿದ್ದೆ ೧೦-೧೫ ನಿಮಿಷಗಳಿಗೆ ಸೀಮಿತವಾಯ್ತು. ಅವಳು ಹೇಳಿದಂತೆ ಪ್ರತಿದಿನ ಸರಿಯಾಗಿ ೨ ಗಂಟೆಗೆ ಚಾಟಿಗೆ ಬಂದು ಬಿಡುತ್ತಿದ್ದಳು ಹಾಗು ರಾತ್ರಿ ಒಂಬತ್ತರ ಮೇಲೆ ಕರೆ ಮಾಡುತ್ತಿದ್ದಳು. ಮೊದಲ ಕೆಲವು ದಿನಗಳ ಚಾಟು ಮತ್ತು ಕರೆಗಳ ಒಟ್ಟು ಸಾರಾಂಶ :

 

ಅನ್ನೋನ್ : ಹಾಯ್

ನಾನು : ಯಾರಿದು?

ಅನ್ನೋನ್ : ನಾನು

ನಾನು : ನಿಮ್ ತಾತ

ಅನ್ನೋನ್ : ನಿಮ್ ಅಜ್ಜಿ

ನಾನು : ಸರಿ.. ಸ್ಟಾಪ್ ಇಟ್ .. ಟೆಲ್ ಮಿ ಹೂ ಆರ್ ಯು?

ಅನ್ನೋನ್ : ಐಯಾಮ್ ಸ್ವಾತಿ

ನಾನು : ವಿಚ್ ಸ್ವಾತಿ?

ಅನ್ನೋನ್ : ಸ್ವಾತಿ ಹೋಟೆಲ್

ನಾನು : ಅಲ್ಲೇ ಹೋಗಿ ಇಡ್ಲಿ ವಡೆ ತಿಂದು ಮನೆಗ್ ಹೋಗಿ ಮಲ್ಕೋ :P ಈಗ ನಾನ್ ಹೋಗಬೇಕು.. ಬೈ

ಅನ್ನೋನ್ : ವೈ ಡಾ ? ಜಸ್ಟ್ ಕಿಡ್ಡಿಂಗ್... ಸಿಟ್ ಅಂಡ್ ಚಾಟ್ ಫಾರ್ ಸಂ ಟೈಮ್

ನಾನು : ಡೋಂಟ್ ಯು ಹ್ಯಾವ್ ಎನಿ ಅದರ್ ಬೆಟರ್ ವರ್ಕ್ ?

ಅನ್ನೋನ್ : ನೋ.. ನನಗೇನು ಕೆಲಸ ಇಲ್ಲ..

ನಾನು : ಒಹ್ .. ಹಾಗಿದ್ರೆ ನಮ್ ಮನೇಲಿ ಬಹಳ ಕೆಲಸ ಇದೆ.. ಬಂದು ಮಾಡಿಕೊಡು. ಸುಮ್ನೆ ಕೂತಿರದು ದೇಹಕ್ಕೆ ಒಳ್ಳೇದಲ್ಲ.

ಅನ್ನೋನ್ : ನಮ್ ಮನೇಲಿ ಮಾಲಿ ಕೆಲಸ ಖಾಲಿ ಇದೆ ಬಾ ..

ನಾನು : ಒಹ್ ಹೌದಾ?? ಫ್ರೀ ಇದ್ದಾಗ ಬರ್ತೀನಿ ಬಿಡು.. ಎಷ್ಟ್ ಕೊಡ್ತಿಯ ಸಂಬಳ?

ಅನ್ನೋನ್ : ನೋ .. ಟೆಲ್ ಮಿ ವೇರ್ ಆರ್ ಯು ಫ್ರಂ?

ನಾನು : ಟೆಲ್ ಮಿ ಹು ಆರ್ ಯು?

ಅನ್ನೋನ್ :ಯುವರ್ ಫ್ರೆಂಡ್ ಡಾ...

ನಾನು : ಬಟ್ ನನಗೆ ನೀನ್ಯಾರೋ ಗೊತ್ತಿಲ್ಲ ...

ಅನ್ನೋನ್ : then try to know na..

ನಾನು : ಅದರ ಅವಶ್ಯಕತೆ ನನಗಿಲ್ಲ ..

ಅನ್ನೋನ್ : ವೈ? am i so bad?

ನಾನು : ಯಾರಿಗ್ ಗೊತ್ತು

ಅನ್ನೋನ್ : god knows

ನಾನು : then send friend request to god :P

ಅನ್ನೋನ್ : what request?

ನಾನು : ಗೊತ್ತಿಲ್ಲದೇ ಇರುವವರ ಹತ್ತಿರ ಚಾಟ್ ಮಾಡೋಷ್ಟು ಪುರುಸೊತ್ತು ನನಗಿಲ್ಲ... ನೀನ್ಯಾರೆಂದು ಹೇಳು ಇಲ್ಲ ಅಂದ್ರೆ get lost.

ಅನ್ನೋನ್: I will be a very good friend for you.

ನಾನು : fine.. Be a good friend. Bye.

..........

 

ಅನ್ನೋನ್ : ಹಾಯ್.. ವಾಟ್ ಡೂಯಿಂಗ್? ಯು ಲುಕ್ ವೆರಿ ಸ್ಮಾರ್ಟ್ ಇನ್ ಬ್ಲೂ ಕಲರ್

ನಾನು : ಒಹ್ .. ಇಸ್ ಇಟ್? ಥ್ಯಾಂಕ್ಸ್ ಅ ಟನ್

ಅನ್ನೋನ್ : ವೆಲ್ಕಮ್ ಅ ಲಾಟ್ಸ್

ನಾನು : ಏನು? ಫ್ರೀ ನಾ ಇವತ್ತು?

ಅನ್ನೋನ್ : ಹು ಕಣೋ. ನೀನು ಬ್ಯುಸಿ ನಾ?

ನಾನು : ಹೇ.. ನಿನ್ನ ಪ್ರೀವ್ ಕಂಪ್ ಹೆಸರೇನು? [ ಈಗಿನದು ಕೇಳಿದರೆ ಸುಳ್ಳು ಹೇಳುವ ಸಾಧ್ಯತೆ ಜಾಸ್ತಿಯೆಂದು ಸ್ವಲ್ಪ ಬುದ್ದಿವಂತಿಕೆಯಿಂದ ಹಾಗೆ ಕೇಳಿದೆ]

ಅನ್ನೋನ್ : ವಾಟ್?

ನಾನು : ಪ್ರೀವಿಯಸ್ ಕಂಪನಿ?

ಅನ್ನೋನ್ : Mediscript & C Bay

ನಾನು : ಓಕೆ.

ಅನ್ನೋನ್ : ವೈ? ಟೈಪಿಂಗ್ ಕಲಿಯೋ..

ನಾನು : ಆಯಿತು ಕಲಿತೀನಿ.. ನೀನೆ ಹೇಳ್ಕೊಡು.

ಅನ್ನೋನ್ : Shore

.....................

ಅನ್ನೋನ್ : ಬ್ಯುಸಿ ನ?

ನಾನು : ಇಲ್ಲ .. ನಿನ್ನ ಇಂಗ್ಲಿಷ್ ನೋಡಿ ತಲೆ ತಿರುಗಿ ಬಂತು. [Sure  ಗೆ Shore ]

ಅನ್ನೋನ್ : ಯಾಕೆ?

ನಾನು : ಯಾವಾಗ ಮೀಟ್ ಮಾಡ್ತಿಯ?

ಅನ್ನೋನ್ : ನೀನೆ ಹೇಳು

ನಾನು : ಈಗ

ಅನ್ನೋನ್ : ದೆನ್ ಕಂ ಸೂನ್

ನಾನು : ಸೂನ್ ಯಾಕೆ?

ಅನ್ನೋನ್ : ಸುಮ್ಮನೆ

ನಾನು : ಯಮ ಭಟರು ಕಾಯ್ತಿದಾರ ನಿನ್ನ ಕರ್ಕೊಂಡು ಹೋಗಕ್ಕೆ? :P

ಅನ್ನೋನ್ : ಓಕೆ.. ಹಾಗಾದ್ರೆ ನೀನು ನನಗೆ ಸೆಂಡ್ ಆಫ್ ಕೊಡೋಕೆ ಬರ್ತೀಯ?

ನಾನು : ನನ್ನ ನೋಡಿದಮೇಲೆ  ನಿಂಗೆ ಸೆಂಡ್ ಆಫೇ

ಅನ್ನೋನ್ : ಯಾಕೆ? ಸೆಂಡ್ ಆಫ್ ಮಾಡೋಕೆ ಇಷ್ಟಾನ ?

....................

ಅನ್ನೋನ್: ಒನ್ ಮೆಸೇಜ್ ಟೈಪ್ ಮಾಡೋಕೆ ಇಷ್ಟು ಹೊತ್ತಾ?

ನಾನು : ಏನ್ ಮಾಡೋದು.. ತುಂಬಾ ಸ್ಲೋ ನಾನು.

ಅನ್ನೋನ್ : ಎಲ್ಲದರಲ್ಲೂ ಸ್ಲೋ ನಾ,,,,,

ನಾನು : ಇಲ್ಲ..

ಅನ್ನೋನ್ : ಓಕೆ.

....................

ಅನ್ನೋನ್ : ಆರ್ ಯು ದೇರ್?

ನಾನು : ವೆರಿ ಮಚ್ ಹಿಯರ್

ಅನ್ನೋನ್ : ದೆನ್ ವೈ ಸೊ ಲೇಟ್?

ನಾನು : ನಿನ್ ಹೆಸರು ಏನು?

ಅನ್ನೋನ್ : ಪ್ರಿಯ

ನಾನು : ಸುಳ್ಳು

ಅನ್ನೋನ್ : ನಿನಗೆ ಗೊತ್ತಿದ್ರೆ ನೀನೇ ಹೇಳು.

ನಾನು : ಟೈಮ್ ಬಂದಾಗ ಹೇಳ್ತೀನಿ.

ಅನ್ನೋನ್ : ಯಾವ ಟೈಮ್? ಯಮನ ಜೊತೆ ಕಳಿಸೋ ಟೈಮ????

ನಾನು : ಐಯಾಮ್ ಶ್ಯೂರ್.. ಯುವರ್ ರಿಯಲ್ ನೇಮ್ ಇಸ್ ನಾಟ್ ಪ್ರಿಯ.

ಅನ್ನೋನ್ : ದೆನ್ ಟೆಲ್ ಮೈ ನೇಮ್

ನಾನು : ಪಿಶಾಚಿ :P

ಅನ್ನೋನ್ : ಪಿಶಾಚಿನ? ಥ್ಯಾಂಕ್ಯು 

ನಾನು : ಹೌದು... ಕಾಣಿಸದೆ ಇರೋರಿಗೆ ನಾವು ಪಿಶಾಚಿ ಅಂತಾನೆ ಕರಿಯೋದು.

ಅನ್ನೋನ್ : ನನ್ನ ಫ್ರೆಂಡ್ ನೀನು ಪಿಶಾಚಿನೆ.

ನಾನು : ನಿನ್ನ ಫ್ರೆಂಡ್ ಅಂತ ಯಾರು ಹೇಳಿದ್ದು.. ಮಂಕು ಗೂಬೆ :P

ಅನ್ನೋನ್ : ಅಯ್ಯೋ ಗೂಬೆ ಹಾಗಾದ್ರೆ ನೀನು ಯಾರೋ?

ನಾನು : ನಿನ್ ಮೊಖಕ್ಕೆ ಬೆರಣಿ ತೊಟ್ಟ :P  ನಿನ್ ಫ್ರೆಂಡ್ ಅಂತು ಅಲ್ಲ :P

ಅನ್ನೋನ್ : ನಿಂಗೆ ಕರಿ ನಾಗರ ಹಾವು ಕಚ್ಚಾ

ನಾನು : ನನ್ನ ಕೈಮೇಲೆ ಗರುಡ ಮಚ್ಚೆ ಇದೆ.. ನೋ ನಾಗರ ಕ್ಯಾನ್ ಡು ಎನಿ ಥಿಂಗ್ ಫಾರ್ ಮಿ :P

ಅನ್ನೋನ್ : ಫಷ್ಟು ಸರಿಯಾಗಿ ನೋಡ್ಕೋ.. ಅದು ಗರುಡ ಮಚ್ಚೆ ಅಲ್ಲ.. ಗೂಬೆ ಮಚ್ಚೆ.

ನಾನು : ಯಾವುದಾದರೂ ನನಗೇನೂ ಮಾಡೋಕೆ ಆಗಲ್ಲ .

ಅನ್ನೋನ್ : ನಿನಗೆ ಸದ್ಯದಲ್ಲೇ H1N1 ಬರುತ್ತೆ.

ನಾನು : ನಾನ್ ಏನ್ ನಿನ್ ತರ ಹಂದಿ ತಿನ್ನಲ್ಲ :P ನಿಂಗ್ ಈಗಾಗ್ಲೇ H1N1 ಬಂದಿದೆ. ಹೋಗಿ ಚೆಕ್ ಮಾಡುಸ್ಕೋ :P

ಅನ್ನೋನ್ : ಇಲ್ಲ ಕಣೋ ಗೂಬೆ.. ಬಂದಿರೋದು ನಿಂಗೆ.. ಅದಿಕ್ಕೆ ಗೊತ್ತಾಗ್ತಿಲ್ಲ ... ನಿನಗೆ ಹಾವು ಕಚ್ಚಲ್ಲ ಆಲ್ವಾ? ಅದಿಕ್ಕೆ ಹುಚ್ಚು ನಾಯಿ ಕಚ್ಚಲಿ .....

ನಾನು : ರೇಬೀಸ್ ಕಂಡು ಹಿಡಿದ್ದದ್ದೆ ನಾನು... ಸೂರ್ಯನಿಗೇ ಟಾರ್ಚಾ? ರೈಟ್ ಹೇಳಮ್ಮ :P

ಅನ್ನೋನ್ : ಕೋಳಿಗೆ ಮೊಟ್ಟೆ ನಾ? ಹೇಳಪ್ಪ

ನಾನು : ನಿಮ್ ಅಪ್ಪ ಹೇಳುದ್ರಾ? :P

ಅನ್ನೋನ್ : ಏನಂತ?

ನಾನು : ಕೋಳಿಗೆ ಮೊಟ್ಟೆ ನಾ? ಅಂತ :P

ಅನ್ನೋನ್ : ಸೂರ್ಯನಿಗೇ ಟಾರ್ಚಾ? ಅಂತ ನಿಮ್ಮಮ್ಮ ಹೇಳುದ್ರಾ?

ನಾನು : ಹೇಳಿ ಎರಡು ಯುಗ ಕಳಿತು :P ನಿಂಗ್ ಎಲ್ ಕೇಳ್ಸತ್ತೆ? ಹೋಗಿ ಚೆಕ್ ಅಪ್ ಮಾಡುಸ್ಕೋ.. ಸರಿಯಾಗಿ ಕೇಳಿಸದಿರುವುದು ಒಂದು H1N1 ಸಿಮ್ ಟಂ :P

                                                                                             ಮುಂದುವರೆಯುವುದು ......

Rating
No votes yet

Comments

Submitted by ಮಮತಾ ಕಾಪು Thu, 12/06/2012 - 10:34

ಅನ್ನೋನ್ ಕಾಲ್ ಸಂಭಾಷಣೆಯನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಅವರಾಗಿಯೇ ನಮ್ಮ ನಂಬರಿಗೆ ಕರೆ ಮಾಡಿ ಅವರ ಪರಿಚಯ ಮಾಡಿಕೊಳ್ಳುವ ಬದಲು ನಮ್ಮನ್ನೇ ಯಾರು ಎಂದು ಪ್ರಶ್ನಿಸಿದರೆ.. ನಿಮ್ಮಜ್ಜಿ ಅನ್ನುವ ಪದದ ಬಳಕೆ ನಮ್ಮಲ್ಲೂ ಇದೆ ಸುದೀಂದ್ರ ಅವರೆ ಧನ್ಯವಾದಗಳು ವಾಸ್ತವಿಕ ಬರಹಕ್ಕಾಗಿ...ಕೆಲವು ಸಂಭಾಷಣೆಗಳಂತೂ ನಗು ತರಿಸುತ್ತಿವೆ.

Submitted by spr03bt Thu, 12/06/2012 - 11:28

ನಗು ತರಿಸುವ೦ತಿದೆ ನಿಮ್ಮ ಬರಹ.. ಮೊಬೈಲ್ ಮತ್ತು ಇ೦ಟರ್ನೆಟ್ ಬ೦ದ ಮೇಲೆ ಈ ರೀತಿ ಚಾಟ್ ಗಳು ತು೦ಬಾ ಸಾಮಾನ್ಯ. ನಿಮ್ಮ ಬರಹ ಓದಿ ನಾನು ಕೆಲವೊ೦ದು ಅನ್ನೊನ್ ವ್ಯಕ್ತಿಗಳ ಜೊತೆ ಮಾತಾಡಿದ್ದು ನೆನಪಿಗೆ ಬ೦ದು ನಗು ಬ೦ತು.

Submitted by spr03bt Thu, 12/06/2012 - 13:05

In reply to by ಸುಧೀ೦ದ್ರ

ಹ ಹ, ಅ೦ತೂ ನನ್ನ ಹೆಸರು ತಿಳಿಯಿತು ನಿಮಗೆ. ಸ೦ಪದಿಗರೆಲ್ಲರೂ ಒ೦ದೆಡೆ ಸೇರುವ ಸ೦ಪದ ಸಾಹಿತ್ಯ ಸಮ್ಮಿಲನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಿಮಗ ಸ೦ಪದದಲ್ಲಿನ ಲೇಖನ ಗಮನಕ್ಕೆ ಬ೦ದಿರದಿರಬಹುದು ಅದಕ್ಕೇ ಇಲ್ಲೆ ಕೇಳುತ್ತಿರುವೆ.