ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ....
ನಾನು ಬೋಳುಮರ ನಿಂತಿದ್ದೇನೆ ಬರಿದಾಗಿ
ಆಗಸಕೆ ಮುಖಮಾಡಿ ಬೆತ್ತಲೆಯಾಗಿ
ಸವೆಸಿದ ವಸಂತಗಳ ಸಾಕ್ಷಿಯಾಗಿ .....
ಬರಡಾಗಿ, ಬೆಂಡಾಗಿ, ಬಸವಳಿದು
ಕವಿಯ ಕಲ್ಪನೆಗೆ ಸ್ಪೂರ್ತಿಯಾಗದ
ಕಲಾವಿದನ ಕುಂಚದಲ್ಲಿ ಬಣ್ಣ ಮುಡಿಸದ
ಪಕ್ಷಿಸಂಕುಲಕ್ಕೆ ನೆಲೆಯಾಗದ ದುರ್ದೈವಿಯಾಗಿ ....
ಅಕ್ಕರೆಯ ಮಾತಿಲ್ಲ ,
ಸಕ್ಕರೆಯ ನಗುವಿಲ್ಲ
ಹಕ್ಕಿಗಳ ಚಿಲಿಪಿಲಿಯಿಲ್ಲ
ಹಸಿರ ಉಸಿರೇ ಇಲ್ಲ ....
ಜೀವಕಳೆಯ ನಿರೀಕ್ಷೆಯಲ್ಲಿದ್ದೇನೆ
ಮತ್ತೊಮ್ಮೆ ಮಗದೊಮ್ಮೆ ಬರುವ ವಸಂತನಿಗಾಗಿ
ಕಾಯುತ್ತಿರುತ್ತೇನೆ ಹಸಿರ ಉಸಿರಿಗೆ,ಇನಿದನಿಗೆ ನಿರಂತರ......
ಕಮಲಬೆಲಗೂರ್
Comments
ಉ: ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ.: ಭರವಸೆಯೇ ಬೆಳಕು..???
In reply to ಉ: ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ.: ಭರವಸೆಯೇ ಬೆಳಕು..??? by venkatb83
ಉ: ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ.: ಭರವಸೆಯೇ ಬೆಳಕು..???