ಜೀವನದ ಇತಿಹಾಸ ಪುಟ ಪುಟಗಳಲ್ಲಿ
ಜೀವನದ ಇತಿಹಾಸ ಪುಟ ಪುಟಗಳಲ್ಲಿ
ಜೀವನದ ಇತಿಹಾಸ ಪುಟ ಪುಟಗಳಲ್ಲಿ -
ಸುಕ್ಕು ಗಟ್ಟಿದ ಮುಖದ
ನೆರೆದೆರೆಯು ನಿರಿಗೆಗಳೇ ?
ಅಲ್ಲಲ್ಲ ಜೀವನದ ಮೈಲಿಗಲ್ಲುಗಳು
ಸೊಕ್ಕಿ ಮೆರೆದಟ್ಟಹಾಸಗಳ
ಮಿಕ್ಕಿ ಮೀರಿದ ನೆನಪುಗಳು
ಪ್ರಾಯ ತಗ್ಗಲು ಕಾದು ಗೀರೆ ಮುಳ್ಳುಗಳು
ಸತತ ನಡೆಸಿದ ಹೋರಾಟ
ಕ್ಷಣ ಕ್ಷಣಕೂ ಗೆಲುವ ಬಯಕೆ
ಸೋತ ಸೋಲಿನ ಮರೆವು
ಆಯ ತಪ್ಪಿನ ಕೆಲಸ ಎಂಬ ಸಮಾಧಾನ
ಭ್ರೂಣ ದಿಂದಲೇ ತೊಡಗಿ
ಮಸಣ ಸೇರುವ ತನಕ
ನನದೆಂಬ ಗಳಿಕೆಯಲಿ ಮಗ್ನನಾಗಿ
ನನದೆನ್ನುವೊಡೆ ಮುನ್ನ
ನಾನೆಂಬುದೇನೆಂದು
ಅರಿಯದಲೇ ಸಾಗಿತ್ತು ಬಂಡಿಯಾಗಿ
- ಜೀವನದ ಇತಿಹಾಸ ಪುಟ ಪುಟಗಳಲ್ಲಿ
ಒಂದೊಂದು ಪುಟಗಳು
ಒಂದೊಂದು ನೆನಪುಗಳು
ಒಂದಾದ ಮೇಲೊಂದು
ಮಸುಕು ಮುಸುಕುಗಳು
ದಿನಗಳೆದ ಬದುಕಿನಲಿ
ಘಟನೆಗಳ ಸಾಲುಗಳು
ತಾನಾಗಿ ಕಥೆಗಳನು ರೂಪಿಸುವುದು
ಘಟನೆಗಳ ಸಂಘಟನೆ ತನ್ನೊಳೆಷ್ಟಿಹುದೆಂಬ
ಸಂಗತಿಯೇ ಜೀವನದ ಇತಿಹಾಸವು
ಕಂಡ ನಾಳೆಗಳೆಷ್ಟೋ ನಾಳೆಯದು ಹೊಸತು
ನಾಳೆಯೇನಾಗುವುದೋ ಎಂಬುದಿದು ಬಿಡದು
ನಿನ್ನೆ ಮುಗಿದಿಹುದು ನಾಳೆ ಬರಲಿಹುದು
ನೆನಹು ಕನಸುಗಳಲ್ಲಿ ಹೊಯ್ದಾಟವು
ಕಾಲ ಸಾಗುವುದು ಲೀಲೆ ಗೈಯುವುದು
ಇತಿಹಾಸಕಾಗಾಗ ಒಂದೊಂದು ಪುಟವು
- ಸದಾನಂದ
Comments
ಉ: ಜೀವನದ ಇತಿಹಾಸ ಪುಟ ಪುಟಗಳಲ್ಲಿ
In reply to ಉ: ಜೀವನದ ಇತಿಹಾಸ ಪುಟ ಪುಟಗಳಲ್ಲಿ by ananthaveera
ಉ: ಜೀವನದ ಇತಿಹಾಸ ಪುಟ ಪುಟಗಳಲ್ಲಿ
ಉ: ಜೀವನದ ಇತಿಹಾಸ ಪುಟ ಪುಟಗಳಲ್ಲಿ
In reply to ಉ: ಜೀವನದ ಇತಿಹಾಸ ಪುಟ ಪುಟಗಳಲ್ಲಿ by kavinagaraj
ಉ: ಜೀವನದ ಇತಿಹಾಸ ಪುಟ ಪುಟಗಳಲ್ಲಿ