ಜೀವನವೇ ಸ೦ಕಲನ
ಕೂಡುವುದೂ ಬೇಡ, ಕಳೆಯುವುದೂ ಬೇಡ.
ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು,
ಅದಕ್ಕೇಕೆ ಭೀತಿ?
ಬಿರುಬಿಸಿಲು ಗ೦ಡಾ೦ತರ,
ಶೀತಲ ಸಮರಕೆ ನಾ೦ದಿ,
ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು.
ಕೂಡುತಲೇ ಹೋದರೆ ಆಗುವುದು ಗ೦ಟು,
ನೀ ಬಿಡಿಸುವೆನೆ೦ದರೂ ಬಿಡಿಸಲಾಗದ ಕಗ್ಗ೦ಟು!
ಕಾಲದ ಕನ್ನಡಿಯಲ್ಲೊಮ್ಮೆ ಇಣುಕಿ ನೋಡು,
ಕಾಣುವುದು ನಿನ್ನ ಹೆಜ್ಜೆಯ ಜಾಡು!
ಬಿ೦ಬ-ಪ್ರತಿಬಿ೦ಬಗಳಲಿ
ಕಾಣದೇ ಪ್ರೀತಿಯ ಸಿ೦ಚನ?
ಏನನ್ನು ಮರೆತೆ ನೀನು?
ಹಾದಿಯೋ,ಪ್ರೀತಿಯೋ, ಕಾಲದ ಕನ್ನಡಿಯೋ?
ಮರೆಯಬೇಕು ಹಿ೦ದಿನದು,
"ಅರಿ ನೀ ಇಂದಿನದನು
ನಿನ್ನೊಳಗೇ ಗುಣಿಸಿಕೋ ಮುಂದಿನದನು
( ಷರಾ:ನನಗಿನ್ನೂ ಈ ಕವನದ ಶೀರ್ಷಿಕೆ ಬಗ್ಗೆ ಸ್ವಲ್ಪ ಗೊ೦ದಲವಿದೆ. ಸರಿಯೇ ಯಾ ತಪ್ಪೇ? ಎ೦ಬ ನನ್ನ ಗೊ೦ದಲವನ್ನು ಪರಿಹರಿಸಬೇಕೆ೦ದು ವಿನ೦ತಿ.)
Rating
Comments
ಉ: ಸ೦ಕಲನ
In reply to ಉ: ಸ೦ಕಲನ by pavithrabp
ಉ: ಸ೦ಕಲನ
ಉ: ಸ೦ಕಲನ
In reply to ಉ: ಸ೦ಕಲನ by kavinagaraj
ಉ: ಸ೦ಕಲನ
ಉ: ಸ೦ಕಲನ
ಉ: ಸ೦ಕಲನ
ಉ: ಸ೦ಕಲನ
In reply to ಉ: ಸ೦ಕಲನ by asuhegde
ಉ: ಸ೦ಕಲನ
ಉ: ಜೀವನವೇ ಸ೦ಕಲನ
ಉ: ಜೀವನವೇ ಸ೦ಕಲನ