ಜೀವನ ಪ್ರತಿದಿನ ಪ್ರತಿಕ್ಷಣ

ಜೀವನ ಪ್ರತಿದಿನ ಪ್ರತಿಕ್ಷಣ

ತಾಯಿ ತಂದೆಯ ಹೊರತಾಗಿಲ್ಲ
ಅವರೊಳಗೇ ಎಲ್ಲ
ಇವರೀರ್ವರ ಹೊರತು
ನಾ ಜಗವ ಕಂಡಿರುತಿರಲಿಲ್ಲ
ದೇವರೆಂತಿರ ಬೇಕೆಂದರೆ
ಇವರಂತೇ ಇರಬೇಕು
ಇಲ್ಲವಾದರೆ ಅವ ದೇವರಲ್ಲ
ಕಾಣದ ದೇವರನರಸುತ
ಕಾಣುವ ದೇವರ ಮರೆತಿಹ
ಹೃದಯವೇ ಕುರುಡು
ಬಯಸದೆ ಏನೂ
ನೀಡುತ ಬಂದಿಹ
ತಾಯ ಒಂದರೆಕ್ಷಣವೂ
ಮರೆಯದಿರಲಿ ಮನ
ಎದೆತಟ್ಟಿ ಬೆಳೆಸಿಹ
ತಂದೆಯ ಎದೆಗಪ್ಪಿ
ಮುನ್ನಡೆಯಲಿ ಜೀವನ

Rating
No votes yet