ಜೀಸಸ್ ಓ ಜೀಸಸ್

ಜೀಸಸ್ ಓ ಜೀಸಸ್

 ಜೀಸಸ್ ಓ ಜೀಸಸ್

ಜೀಸಸ್ ಓ ಜೀಸಸ್
ಏಸುಕ್ರಿಸ್ತನೆಂಬ ನೀನದೇಸು ಪುಣ್ಯವಂತನಯ್ಯ
ಮಾಸದಂತೆ ಲೋಕದಲ್ಲಿ ದ್ವೀಸಹಸ್ರ ವರ್ಷದಲ್ಲಿ
ದೇಶದೇಶವೆಲ್ಲ ನಿನ್ನನೀಸು ಆಸೆ ಮಾಡಿತಯ್ಯ
ಜೀಸಸ್ ಓ ಜೀಸಸ್ ||ಪ||

ಸತ್ಯದೇವನಿಂದ ಆಜ್ಞೆ ಹೊತ್ತು ಬಂದೆ ದೂತನಂತೆ
ಕತ್ತಲನ್ನು ನಾಶಮಾಡಿ ಸುತ್ತಲೆಲ್ಲ ಬೆಳಕು ನೀಡಿ
ನಿತ್ಯ ಸುತ್ತಲಿದ್ದ ಜನರ ಮಿಥ್ಯೆಯಳಿದು ಶಾಂತಿಯಂತೆ
ಜೀಸಸ್ ಓ ಜೀಸಸ್ ||1||

ನುಡಿಯ ಮಧುರ ಪ್ರೀತಿಯಲ್ಲಿ ನಡೆಯ ಕ್ಷಮೆಯ ದಾರಿಯಲ್ಲಿ
ದೃಢತೆ ಶತ್ರು ಬೆಚ್ಚುವಂತೆ ಬಿಡದೆ ಸತ್ಯ ಮೆಚ್ಚುವಂತೆ
ಹಿಡಿದೆ ವಿಶ್ವ ಪೂರ್ತಿಯಲ್ಲಿ ಪಡೆದ ದಿವ್ಯ ಕೀರ್ತಿಯಲ್ಲಿ
ಜೀಸಸ್ ಓ ಜೀಸಸ್ ||2||

ಶಾಂತ ವಿಶ್ವವಾಗಬೇಕು ಭ್ರಾಂತಿ ನಾಶವಾಗಬೇಕು
ಅಂತ್ಯವಾಗಿ ಮಿಥ್ಯೆಯಳಿದು ಕ್ರಾಂತಿಯಾಗಿ ಸತ್ಯವುಳಿದು
ಸ್ವಂತ ಬಲದಿ ಬಾಳಬೇಕು ಅಂತೆ ನೀನು ಹರಸಬೇಕು
ಜೀಸಸ್ ಓ ಜೀಸಸ್ ||3||

                                                                                -                 ಸದಾನಂದ

Rating
No votes yet

Comments

Submitted by gopinatha Tue, 12/25/2012 - 12:35

ಶಾಂತ ವಿಶ್ವವಾಗಬೇಕು ಭ್ರಾಂತಿ ನಾಶವಾಗಬೇಕು
ಅಂತ್ಯವಾಗಿ ಮಿಥ್ಯೆಯಳಿದು ಕ್ರಾಂತಿಯಾಗಿ ಸತ್ಯವುಳಿದು
ಸ್ವಂತ ಬಲದಿ ಬಾಳಬೇಕು ಅಂತೆ ನೀನು ಹರಸಬೇಕು
ಜೀಸಸ್ ಓ ಜೀಸಸ್

ಅಮೆನ್