ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
ಜೂನ್ ೨೦೦೭ ರ ಮಯೂರ ತೇಜಸ್ವಿ ಸಂಚಿಕೆಯಾಗಿ ಬಂದಿದೆ. ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವೈಯುಕ್ತಿಕ ಜೀವನ ಮತ್ತು ಕೃತಿಗಳ ಕುರಿತು ಲೇಖನಗಳಿವೆ. ( ಅವರ ನಿಧನದ ಮೊದಲು ಅವರ ಕೃತಿಗಳ ಬಗ್ಗೆ ಲೇಖನಗಳು ಪತ್ರಿಕೆಗಳಲ್ಲಿ ಬಂದಿದ್ದವೋ ಇಲ್ಲವೋ ಗೊತ್ತಿಲ್ಲ ) . ( ತೇಜಸ್ವಿ ಕಥನ ಎಂಬ ಪುಸ್ತಕವೊಂದು ತೇಜಸ್ವಿಯವರ ಎಲ್ಲಾ ಸಾಹಿತ್ಯದ ಕುರಿತು ಒಂದು ಪುಸ್ತಕ ಮೊದಲೇ ಬಂದಿದೆ. ನಾನು ಓದಿಲ್ಲ). ಇತ್ತೀಚೆಗೆ ಹುಲಿಯೂರಿನ ಸರಹದ್ದು ಹೆಸರಿನ ಪುಸ್ತಕ ಕೊಂಡಿದ್ದೇನೆ.
ತೇಜಸ್ವಿ ನಿಧನದ ವಿಷಯ ಒಂದೇ ಗಂಟೆಯ ಒಳಗೆ ವಿಕೀಪೀಡಿಯದಲ್ಲಿ ಇತ್ತಂತೆ!
ವಿವಾದಾಸ್ಪದ ಕಾದಂಬರಿ 'ಆವರಣ' ಕುರಿತು ತೇಜಸ್ವಿ ಅಭಿಪ್ರಾಯ ನಿಮಗೆ ಬೇಕಾದರೆ ಈ ಸಲದ ಮಯೂರ ನೋಡಿ.
ಈ ಸಲದ ಮಯೂರದಲ್ಲಿ ಮೂರು ಒಳ್ಳೆಯ ಕತೆಗಳೂ ಇವೆ.
Rating
Comments
ಉ: ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ