ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
ಅಣ್ಣಾ ಬಿಜೆಪಿ ಸುರೇಶ್ ಗೌಡ ನಂಗೆ ಬಿಜೆಪಿಗೆ ಬಾ ಬಾ ಬಾ ಬಾ ಅಂತಾ ಕರಿತಾವ್ನೆ . ಏನ್ ಮಾಡ್ಲಿ ಅಂದ್ರು ಗುಬ್ಬಿ ಸಾಸಕ ಶ್ರೀನಿವಾಸು. ಉಗಿಯಲಾ ಮಕ್ಕೆ. ಅಲ್ಲಾ ಕಲಾ ನಾನು ನಿನಗೆ ಸೀಟು ಕೊಟ್ಟು ಗೆಲ್ಲಿಸಿದ್ದು. ಅದೆಂಗಲಾ ಅಲ್ಲಿ ಹೋಯ್ತೀಯಾ. ನೀನೇದ್ರೂ ಹೋದ್ರೆ ಮುಂದಿನ ದಪಾ ಚುನಾವಣೆಗೆ ಅಂಗಲವಿಕಲರ ಸರ್ಟಿಫಿಕೇಟ್ ನೀಡಬೇಕಾಯ್ತದೆ ಅಂದ್ರು ಕುಮಾರಣ್ಣ, ಸರಿ ಏನ್ ಮಾಡಲಿ ನೀವೇ ಹೇಳಿ. ನೋಡಲಾ ನಿಂಗೆ ವಿಶೇಷ ಕ್ಯಾಮೆರಾ ಕೊಡಿಸ್ತೀನಿ. ನಿಮ್ಮನೆಗೆ ಕರೆಸಿ ಹಿಡಿಯಲಾ. ಮುಂದಿದ್ದು ನಾನು ನೋಡ್ಕೊತ್ತೀನಿ. ಸರಿ ಅಣ್ಣ, ನೀನು ಇಷ್ಟು ಹೇಳಿದ್ ಮ್ಯಾಕೆ ಮಾಡೇ ಮಾತ್ತೀನಿ. ಆದರೆ ಕಾಸು ಇಸ್ಕಂಡು ಮಾಡಲೋ, ಇಲ್ಲಾ ಅಂಗೇ ಮಾಡಲೋ. ನಾನು 30ಕೋಟಿ ಕೊತ್ತೀನಿ ಸುಮ್ಕೆ ವಿಡಿಯೋ ಮಾಡಲಾ.
ಸರಿ ನಾಡಿದ್ದು ಸುರೇಶ್ ಗೌಡ ಮನೆಗೆ ಬತ್ತಾರೆ ಅಂತಾ ಗೊತ್ತಾತು. ಸಾಸಕ ಶ್ರೀನಿವಾಸು, ಗಾಂಧಿನಗರಕ್ಕೆ ಹೋಗಿ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್್ರನ್ನು ಭೇಟಿಯಾಗಿ ಒಂದು ಕ್ಯಾಮೆರಾ ಕೊಡಿ ಸಾರ್ ಅಂದ್ರು. ನೋಡ್ರೀ ದಿನಕ್ಕೆ 10ಸಾವಿರ ಆಯ್ತದೆ. ಅಂಗೇ ಟ್ರಾಲಿ, ಹಳಿ, ಭಾರೀ ಲೈಟ್ಸ್ ಎಲ್ಲಾ ಕೊಡಿ. ಅಂದು ಊರಿಗೆ ಬಂತು. ಜನಾ ಯಾವುದೋ ಸೂಟಿಂಗ್ ಅಂತಾ ಮನೆ ಮುಂದೆ ಸೇರಿದ್ರಂತೆ. ಅಟೊತ್ತಿಗೆ ಕುಮಾರಣ್ಣ ಪೋನ್ ಮಾಡಿ. ಏನಲಾ ನಿಮ್ಮ ಮನೆ ಮುಂದೆ ಯಾವದೋ ಸೂಟಿಂಗ್ ನಡೀತಾ ಇದೆಯಂತೆ. ಇಲ್ಲಾ ಅಣ್ಣಾ, ನೀನು ಹೇಳ್ದಂಗೆ ಸುರೇಶ್ ಗೌಡರನ್ನ ಸಂದಾಗಿ ಹಿಡಿಯೋಕ್ಕೆ. ಲೇ ಅವರು ಬಂದ್ ಮ್ಯಾಕೆ, ಅಂಗೇ ಮೇಕಪ್ ಮಾಡಿಸಿ, ಡೈಲಾಗ್ ಕೊಟ್ಟು ಎಲ್ಲಾ ನೀನೆ ಹೇಳ್ ಕೊಡಲಾ. ಮೊದಲು ತೆಗಿಯಲಾ ಅಂದ್ ಮ್ಯಾಕೆ ಮತ್ತೆ ಶ್ರೀನಿವಾಸು ಬೆಂಗಳೂರಿಗೆ ಬಂದು ವಾಪಸ್ ಕೊಟ್ರು. ಏನ್ರೀ ಕ್ಯಾಮೆರಾದ್ದು ಕ್ಯಾಪೇ ಇಲ್ಲ ಅಂತಾ ಒಂದು 50ಸಾವಿರ ಕಿತ್ತಿದ್ರು ಅಶೋಕ್ ಕಶ್ಯಪ್.
ಸರಿ ಶ್ರೀನಿವಾಸು ಹೆಂಡರು ಮಕ್ಕಳು ಜೊತೆ ಪಿಲಾನು ಮಾಡಿ. ಒಂದು ಹ್ಯಾಂಡಿ ಕ್ಯಾಮ್ ರೆಡಿ ಮಾಡ್ಕಂಡು ಕಾಯ್ತಾ ಇದ್ರು. ಒಂದು ಎರಡು ಪ್ಯಾಕ್ ಸಿಗರೇಟು ಅಂಗೇ ಒಂದು ಎರಡು ಲೀ ಚಾ ಕುಡಿದಿದ್ರು. ವಾಂತಿ ಬತ್ತಾ ಇದೆ ಕಣಮ್ಮೀ ಅಂತಿದ್ರು ಶ್ರೀನಿವಾಸು. ಆ ವಮ್ಮ ಕ್ಯಾಮೆರಾ ಹಿಡಿಕಂಡು ಕಾಯ್ತಾನೆ ಇದ್ರು, ಹೊರಗಡೆ ಕತ್ತಲು, ಬಂದ್ರು, ಬಂದ್ರು ಯಾರಲಾ ನಮ್ಮ ತೋಟ ಕಾಯೋ ಸೀನ, ಏ ಥೂ, ಸರ್ ಬಂದ್ರು, ಬಂದ್ರು ಯಾರಲಾ ನಮ್ಮ ಡೇವರ್ ರಾಜ, ಏ ಥೂ, ಸರ್ ಬಂದ್ರು, ಬಂದ್ರು ಯಾರಲಾ ಸುರೇಶ್ ಗೌಡರು. ಆಕ್ಸನ್, ಅಂತಿದ್ದಾಗೆನೇ ಸೂಟಿಂಗ್ ಸುರುವಾತು. ಆ ವಮ್ಮ ಓಣಿಯಲ್ಲಿ ಇರೋ ಕಿಟಕಿಯಿಂದ ಹಿಡಿತಾ ಇದ್ರೆ, ಕೆಳಗೆ ಇಲಿ,ಹೆಗ್ಗಣ ಎಲ್ಲಾ ಓಡಾಡುವಂತೆ. ಅಂಗಾಗಿ ಸೇಕ್ ಆಗೈತೆ. ಸರಿ ಎಲ್ಲಾ ಮಾತು ಮುಗಿದು,. ಕ್ಯಾಮೆರಾ ಟಿವಿಗೆ ಹಾಕಿದ್ರೆ, ಮೊದಲು ಒಂದು ಗಂಟೆ ಶ್ರೀನಿವಾಸು ಸಿಗರೇಟ್ ಸೇದದು ಅಂಗೇ ಚಾ ಕುಡಿಯದೇ ಇತ್ತಂತೆ,. ಕಡೇ ಎರಡು ನಿಮಿಸ ಮಾತ್ರ ಸುರೇಶ್ ಗೌಡರದ್ದು.
ಕುಮಾರಣ್ಣಂಗೆ ಕೊಟ್ರೆ ಏನಲಾ ಇದು. ಬರೀ ನೀನೆ ಇದೆಯಾ ಅಂದ್ರಂತೆ. ಅವರು ಪ್ರೆಸ್ ಮೀಟ್ ಮುಗಿಸಿ ಬಂದರು ಇನ್ನೂ ಶ್ರೀನಿವಾಸ್ ಧಮ್ ಹೊಡೆಯೋ ಸೀನೆ. ಕಡೆಗೆ ಸುರೇಶ್ ಗೌಡರು ಬಂದಿದ್ದು. ಏನಲಾ ಇದು ಗೊಯ್ ಅಂತದೆ. ಅಣ್ಣೋ ನಮ್ಮನೇ ಹತ್ರನೇ ದೀಪದ ಕಂಬ ಐತೆ. ಚಿಟ್ಟೆ ಹುಳದ್ದ ಸವಂಡ್.
ಯಾರಲಾ ಸೂಟಿಂಗ್ ಮಾಡಿದ್ದು, ನಮ್ಮ ಹೆಂಡರು, ತಬರನ ಕತೆ ಪಾಲ್ಟು 2, ತೆಗೆದ್ರೆ ನಿನ್ನ ಹೆಂಡರೇ ಕ್ಯಾಮರಾವುಮೆನ್ ಕಲಾ ಅಂದ್ರು ಕುಮಾರಣ್ಣ, ಯಾಕಣ್ಣಾ, ಇನ್ನೇನ್ಲಾ ಸಿಡಿ ತುಂಬಾ ನಿನ್ನ ವೇಸನೇ ವಿಧವಿಧವಾಗಿ ಅಯ್ತಲಾ ಅದಕ್ಕೆ ಅಂದ್ರು.
ಸರಿ ಸುರೇಶ್ ಗೌಡರು ಬೇಡ ಕಲಾ. ನಾನು ನೀನು ಫ್ರೆಂಡ್ಸ್ ಕಲಾ ಅಂದ್ರಂತೆ, ನೋಡಲಾ ರಾಜಕೀಯದಾಗೆ ಫ್ರೆಂಡ್ಸ್, ಗಿಂಡ್ಸ್ ಇಲ್ಲ ಕಲಾ. ನೋಡಲಾ ನೀನು 15 ಅಂದಿಂದ್ದೆ, ಅದು ನನ್ನ ಜಾತಕಕ್ಕೆ ಸರಿ ಹೊಂದಕ್ಕಿಲ್ಲ. ಅದೇ 50ಕೊಟ್ಟರೆ ನಿಲ್ಸಿತ್ತೀನಿ ಕಲಾ. ಯಾರಿಗೆ ಬೇಕಾದರೂ ಉತ್ತರ ಹೇಳ್ಬೈದು. ಆದರೆ ಸುವರ್ಣ ರಂಗನಾಥ್ ಏನಲಾ ನ್ಯಾಯಾಧೀಸರು ಪ್ರಸ್ನೆ ಕೇಳ್ದಂಗೆ ಕೇಳ್ತವ್ರೆ. ಅಟೊಂದು ದುಡ್ಡು ಆಗಕ್ಕಿಲ್ಲಾ ಅಂದ್ ಮ್ಯಾಕೆ ಆಪರೇಸನ್ ಸುರೇಸ್ ಗೌಡ ಬಂದಿದ್ದು, ಇನ್ನೊಂದು ಆಪರೇಸನ್ ಐತೆ,. ಅದನ್ನು ನಿಮಗೆ ಹೇಳಕ್ಕೆ ಆಗಕ್ಕಿಲ್ಲ. ಅದು ಅಪೆಂಡಿಕ್ಸ್ ಆಪರೇಸನ್ ಸಿಡಿ. ಅದಕ್ಕೆ ನಾವೇ ಕಾಸು ಕೊಟ್ಟಿದೀವಿ.
Comments
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
In reply to ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ by kamath_kumble
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
In reply to ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ by shivarama
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
In reply to ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ by prashanth678
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
In reply to ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ by gopinatha
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ
ಉ: ಜೆಡಿಎಸ್ ಆಪರೇಷನ್ ಸಿಡಿ - ವಿಶೇಷ ಕಾರ್ಯಾಚರಣೆ