ಜೈಲಿನ ಭೀತಿ ?
ಜೈಲಿನ ಭೀತಿ ?
ಕಳ್ಳ ಖದೀಮರಿಗಿಂದು
ಜೈಲಿನ ಭೀತಿ ?
ಕನ್ನವ ಕೊರೆಯುವ ಕಳ್ಳನಿಗಿರದು
ಜೈಲು ಕಂಬಿಗಳ ಭೀತಿ
ರೋಷದಿ ಕುದಿದು ಅನ್ಯರ ಕೊಲ್ಲುವ
ಕೊಲೆಗಾರನಿಗಿರದಿಹ ಭೀತಿ
ಬದುಕಲು ಹಾದಿಗಳರಿಯದೆ ಹಾಸಿಗೆ
ದಂದೆಗೆ ಇಳಿದವರರಿಯದ ಭೀತಿ
ಜನಪರ ಹೋರಾಟದ ಕಾವಿನಲಿ
ಶ್ರೀಸಾಮಾನ್ಯನಿಗಿಲ್ಲದ ಭೀತಿ
ಇಂದಿದೆ ನೋಡಿ ನಾಚಿಕೆಯಿಲ್ಲದ
ನಮ್ಮ ರಾಜಕಾರಣಿಗೆ ಭೀತಿ
ಗಳಿಸಿದ ದೇಶದ ಲೂಟಿಯ ಹಣ ಸುಖ
ನೀಡದು ಎನ್ನುವ ಭೀತಿ
ಮುಖವಾಡವು ಕಳಚಿ ಬಣ್ಣವು ಬೆಳಗಿತು
ಎನ್ನುವ ಸಂಕಟ ರೀತಿ.
ಸಿಗದಿರಲಿನ್ನು ನೀಚರಿಗೆಲ್ಲ
ರಕ್ಷಿಸಿಕೊಳ್ಳಲು ಜಾಮೀನು
ಭಯದಲಿ ಬಳಲುತ ಆಸ್ಪತ್ರೆಯಲಿ
ನರ್ಸುಗಳುಪಚಾರಕೆ ಫರ್ಮಾನು
ಮದ್ದನು ತರಿಸಿ ಜೈಲಲೆ ನೀಡಲಿ
ಒಲ್ಲೆನು ಎಂದವಗಿಡಿ ಗುದ್ದು
ಕಳಿಸದೆ ಇರಲವರನು ಹೊರ ಹೊರಗೆ
ಕಳೆಯಲಿ ಜೀವಿತವನು ಸೆರೆಯೊಳಗೆ
ಕಳ್ಳ ಖದೀಮಗೆ ಜೈಲಿನ ಭೀತಿ
ಆಗಲಿ ದೇಶದ ಹೊಸನೀತಿ
- ಸದಾನಂದ
Rating
Comments
ಉ: ಜೈಲಿನ ಭೀತಿ ?
In reply to ಉ: ಜೈಲಿನ ಭೀತಿ ? by ಗಣೇಶ
ಉ: ಜೈಲಿನ ಭೀತಿ ?
ಉ: ಜೈಲಿನ ಭೀತಿ ?
In reply to ಉ: ಜೈಲಿನ ಭೀತಿ ? by raghumuliya
ಉ: ಜೈಲಿನ ಭೀತಿ ?
ಉ: ಜೈಲಿನ ಭೀತಿ ?
In reply to ಉ: ಜೈಲಿನ ಭೀತಿ ? by RAMAMOHANA
ಉ: ಜೈಲಿನ ಭೀತಿ ?
ಉ: ಜೈಲಿನ ಭೀತಿ ?
In reply to ಉ: ಜೈಲಿನ ಭೀತಿ ? by manju787
ಉ: ಜೈಲಿನ ಭೀತಿ ?
In reply to ಉ: ಜೈಲಿನ ಭೀತಿ ? by sada samartha
ಉ: ಜೈಲಿನ ಭೀತಿ ?
In reply to ಉ: ಜೈಲಿನ ಭೀತಿ ? by ananthaveera
ಉ: ಜೈಲಿನ ಭೀತಿ ?