ಜೋಕ್....

ಜೋಕ್....

ಒಮ್ಮೆ ಕ್ಷೌರಿಕ ಕಪಿಲ್ ಸಿಬಲ್ ಗೆ ಹೇರ್ ಕಟ್ ಮಾಡುತ್ತಾ, " ಸರ್, ಏನಿದು ಈ ಸ್ವಿಸ್ ಬ್ಯಾಂಕ್ ನ ವಿವಾದ.. ?"

ಕಪಿಲ್ ಸಿಬಲ್ ಒಮ್ಮೆಲೆ ಕೋಪಿಸಿಕೊಂಡು, "ನೀನು, ನೀನು ಹೇರ್ ಕಟಿಂಗ್ ಮಾಡ್ತಾ ಇದಿಯೊ ಇಲ್ಲಾ ಪತ್ತೇದಾರಿ ಕೆಲ್ಸ ಮಾಡ್ತಾಯಿದಿಯೊ... ??"

ಕ್ಷೌರಿಕ: ಕ್ಷಮಿಸಿ ಸರ್, ಸುಮ್ನೆ ಕೇಳ್ದೆ....

 

ಮರುದಿನ, ಪ್ರಣಬ್ ಮುಖರ್ಜಿಯವರ ಹೇರ್ ಕಟ್ ಮಾಡ್ತಾ, "ಸರ್, ಏನಿದು ಬ್ಲ್ಯಾಕ್ ಮನಿ ವಿವಾದ..?"

ಪ್ರಣಬ್ ಕೋಪದಿಂದ " ನನ್ನನ್ನ ಯಾಕೆ ಈ ಪ್ರಶ್ನೆ ಕೇಳ್ತಾಯಿದೀಯ... ??"

ಕ್ಷೌರಿಕ: ಕ್ಷಮಿಸಿ ಸರ್, ಸುಮ್ನೆ ಕೇಳ್ದೆ....

 

ಮರುದಿನ, ಸಿಬಿಐ ಕ್ಷೌರಿಕನನ್ನು ವಿಚಾರಣೆ ಮಾಡುತ್ತಾ, "ನೀನು ಬಾಬ ರಾಮ್ ದೇವ್ ಏಜೆಂಟಾ...?"

ಕ್ಷೌರಿಕ: ಇಲ್ಲ ಸರ್.

ಸಿಬಿಐ: ಅಣ್ಣಾ ಹಜಾರೆ ಏಜೆಂಟಾ.. ??

ಕ್ಷೌರಿಕ: ಇಲ್ಲ ಸರ್.

ಸಿಬಿಐ: ಮತ್ತೆ ಹೇರ್ ಕಟ್ ಮಾಡ್ಬೇಕಾದ್ರೆ ಯಾಕೆ, ಕಾಂಗ್ರೆಸ್ ಮಂತ್ರಿಗಳನ್ನ ಸ್ವಿಸ್ ಬ್ಯಾಂಕ್ ಹಾಗು ಬ್ಲ್ಯಾಕ್ ಮನಿ ವಿವಾದದ ಬಗ್ಗೆ ಕೇಳ್ತಾ ಇದ್ದೆ... ??

ಕ್ಷೌರಿಕ: ಸರ್, ಅದೇನೊ ಗೊತ್ತಿಲ್ಲಾ, ನಾನು ಈ ಸ್ವಿಸ್ ಬ್ಯಾಂಕ್ ಹಾಗು ಬ್ಲ್ಯಾಕ್ ಮನಿ ವಿವಾದದ ಬಗ್ಗೆ ಕೇಳ್ದಾಗ್ಲೆಲ್ಲಾ, ಕಾಂಗ್ರೆಸ್ ಮಂತ್ರಿಗಳ ಕೂದಲು ನೇರವಾಗಿ ನಿಲ್ಲುತ್ತಿತ್ತು, ಇದರಿಂದಾಗಿ ಕೂದಲನ್ನು ಕಟ್ ಮಾಡೋದು ತುಂಬ ಸುಲಭ ಅಗ್ತಾ ಇತ್ತು ನನಗೆ.... ಅದಕ್ಕೆ ಅಗಾಗ ಆ ವಿಷಯಗಳ ಬಗ್ಗೆ ಕೇಳ್ತಾ ಇದ್ದೆ...

Rating
No votes yet

Comments