ಜೋಳದ ಹಿಟ್ಟು ಇದೆಯಾ...?
ಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗುತ್ತೆ ಅಂತ ದೊಡ್ಡ-ದೊಡ್ಡ ಅಂಗಡಿಯವರು ಸಾಕಷ್ಟು ಜಾಹೀರಾತು ಹಾಕ್ತಾ ಇರ್ತಾರೆ...ಅಲ್ಲಿ ಸಿಗುತ್ತೆ...ಎಲ್ಲಾ ಈಗ "ಪಾಕೆಟ್"ನಲ್ಲಿ ಇಲ್ಲಿ ಸಿಗೋದು, ಅದು ಎಲ್ಲರಿಗೂ ಗೊತ್ತೇ ಇದೆ...ಜೋಳದ ಹಿಟ್ಟು ಸಿಕ್ಕೇ ಸಿಗುತ್ತೆ ಅಂತ ಉತ್ಸಾಹದಿಂದ ಹೋದೆ...ವಿಶಾಲವಾಗಿದ್ದ ಆ ಅಂಗಡಿಯ ಒಳಹೊಕ್ಕೆ...ಜೋಳದ ಹಿಟ್ಟು ಇದೆಯಾ? ಅಂತ ಕೇಳಿದೆ
"ಇಲ್ಲ" ಅಂತ ಉತ್ತರ ಬಂತು...
ಸ್ವಲ್ಪ ನಿರಾಶೆಯಾದ್ರೂ...ಇನ್ನಾ ಎಷ್ಟೊಂದು ಅಂಗಡಿಗಳು ಇವೆಯಲ್ಲ ಅಂತ... ಊರಗಲ ಹರಡಿಕೊಂಡಿದ್ದ ಎಲ್ಲಾ ಅಂಗಡಿಗಳ ಒಳಹೊಕ್ಕು ವಿಚಾರಿಸಿದ್ರೆ...ಎಲ್ಲೂ ಸಿಗಲಿಲ್ಲ....ಒಂದೇ ಒಂದು ಕಡೆ ನಾಳೆ ಬನ್ನಿ ಅಂದ್ರು....ಹೀಗೆ ನಾಲ್ಕು ದಿನಗಳಿಂದ ಹುಡುಕುತಲಿದ್ದೆ....ನಿನ್ನೆ ರಾತ್ರಿ...ನಾಳೆ ಬಾ ಅಂದಿದ್ದ ಅಂಗಡಿಗೆ ನಾಲ್ಕನೆಯ ಬಾರಿ ಹೋದೆ....
"ಜೋಳದ ಹಿಟ್ಟು ಇದೆಯಾ? ಅಂತ ಕೇಳಿದೆ
"ಯಾವುದು ಮೇಜ?" ಅಂತ ಅಲ್ಲಿಯ ಕೆಲಸದ ಹುಡುಗಿ ನನಗೆ ಮರುಪ್ರಶ್ನೆ ಹಾಕಿದ್ಳು.
ನಾನು 'ಜೋಳದ ಹಿಟ್ಟು" ಅಂತ ಎದೆಯುಬ್ಬಿಸಿ ಉತ್ತರ ಕೊಟ್ಟೆ.
"ಕನ್ನಡದಲ್ಲಿ ಹಾಗಂದ್ರೆ ಗೊತ್ತಿಲ್ಲ" ಅಂತ ಕನ್ನಡದಲ್ಲಿ ಹೇಳಿದಾಗ ಹೊಟ್ಟೆ ಉರಿದುಹೋಯ್ತು.
ಮತ್ತೆ ಅವಳಿದ್ದು "ಅಲ್ಲಿರೋದರಲ್ಲಿ ಯಾವುದು ಅಂತ ತೋರಿಸಿ ಅದರ ಹಿಟ್ಟು ಕೋಡ್ತೀನ"ಿ ಅಂದಳು.
ಅಲ್ಲೆ ಇದ್ದ ಜೋಳದ ಪಾಕೆಟ್ ತೋರಿಸಿದೆ...
ತಕ್ಷಣ ಹೋಗಿ ಜೋಳದ ಹಿಟ್ಟು ತಂದು ಕೊಟ್ಟಳು...
ಕರ್ನಾಟಕದಲ್ಲೆ ಇದ್ದುಕೊಂಡು ಕನ್ನಡ ಗೊತ್ತಿಲ್ವ ಅಂತ ಗಲಾಟೆ ಮಾಡೋಣ ಅನ್ಕೊಂಡೆ...ಗಲಾಟೆ ಮಾಡಿ ಸುಮ್ನೆ ನನ್ನ ಮನಸ್ಸು ಹಾಳೆಂದು ಸುಮ್ಮನಾದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ "ಜೋಳದ ಹಿಟ್ಟು" ಅಂದರೆ ಗೊತ್ತಿಲ್ಲ ಅಂದ್ರೆ...ಏನ್ ಹೇಳ್ ಬೇಕು ಈ ಪರಿಸ್ಥಿತಿಯ ಬಗ್ಗೆ..???
ನಾನು ಕರ್ನಾಟಕದಲ್ಲಿ ಇದ್ದೀನೋ...ಬೇರೆ ಯಾವುದಾದ್ರು ರಾಜ್ಯದಲ್ಲಿ ಬಂದಿದ್ದೀನೊ ಅಂತ ಮನಸ್ಸು ವಿಲವಿಲ ಒದ್ದಾಡ್ತಾಯಿದೆ...
---ಅಮರ್