ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ

ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ

 

"ಪ್ರಿಯ ವೀಕ್ಷಕರೆ, ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ. ಅಂಡಾಂಡಭಂಡ ಸ್ವಾಮಿಯ ಅನ್ಯಾಯಗಳನ್ನು ಬಯಲಿಗೆಳೆಯಲೆಂದು ಸ್ಟಿಂಗ್ ಆಪರೇಶನ್‌ಗೆ ಹೋಗಿ ನಾಪತ್ತೆಯಾಗಿರುವ ಗಣೇಶರ ಬಗ್ಗೆ  ಇನ್ನಷ್ಟು ವಿವರಗಳನ್ನು ಪಡೆಯೋಣ, ಅವರ ಪತ್ನಿಯಿಂದ- ಹಲೋ, ಮಿಸೆಸ್ ಗಣೇಶ್ ಅವರೆ,  ಹೇಳಿ..ಮೊಬೈಲಲ್ಲಿ ಅವರು ಕರೆ ಏನಾದರೂ ಮಾಡಿದರೆ?
"ಮೊಬೈಲ್ ಮನೇಲೇ ಬಿಟ್ಟು..."
"ಹಲೋ...ಹಲೋ..ಸಂಪರ್ಕ ಕಡಿದು ಹೋಯಿತು. ಪಾಪಿ ಸ್ವಾಮಿ, ಗಣೇಶ್ ಅವರು ಮೊಬೈಲಲ್ಲಿ ಮನೆಗೆ ಸಂಪರ್ಕಿಸಲೂ ಬಿಡಲಿಲ್ಲ ಎಂದು ಅವರ ಶ್ರೀಮತಿಯವರು ಹೇಳುತ್ತಿದ್ದರು. ಪುನಃ ಸಂಪರ್ಕ ಸಾಧಿಸುವವರೆಗೆ ಒಂದು ಚಿಕ್ಕ ಬ್ರೇಕ್."
ನ್ಯೂಸ್ ರೀಡರ್ ಫೋನ್ ಸಂಪರ್ಕ ನೀಡುವವನ ಬಳಿ ಹೋಗಿ, " ಎಷ್ಟು ಬಾರಿ ಹೇಳಿದ್ದೇನೆ ನಿನಗೆ. ಡೈರೆಕ್ಟ್ ರಿಲೇ ಇರುವಾಗ ಎಲರ್ಟ್ ಆಗಿರಬೇಕು. ನಮಗೆ ಬೇಡದ ಮಾಹಿತಿ ಬರುವಾಗ ಕಟ್ ಮಾಡಬೇಕು,ಇಲ್ಲಾ ಇತರ ಸೌಂಡ್ ಜಾಸ್ತಿ ಮಾಡಿ ಕೇಳದಂತೆ ಮಾಡಬೇಕು ಎಂದು. ಮೊಬೈಲ್ ಮನೇಲೇ ಬಿಟ್ಟು ಹೋದರು ಎನ್ನುವವರೆಗೂ ನಿದ್ರೆ ಮಾಡುತ್ತಿದ್ದಿಯಾ..*‍%(*%॓*"
"ವೀಕ್ಷಕರಿಗೆ ಪುನಃ ಸ್ವಾಗತ. ೨೪ ಗಂಟೆಯೂ ಜ್ಯೂಸಿ ನ್ಯೂಸ್‌ಗಾಗಿ ನಮ್ಮ ಚಾನಲ್ ವೀಕ್ಷಿಸಿ. ಈಗ ಅಂಡಾಂಡ ಭಂಡರ ಪೂರ್ತಿ ಕರಾಳ ಚರಿತ್ರೆಯನ್ನು ವಿವರವಾಗಿ ನಿಮ್ಮ ಮುಂದೆ ಇಡುವೆವು. ಕ್ಷಮಿಸಿ, ಪುನಃ ಶ್ರೀಮತಿ ಗಣೇಶ ಅವರು ಫೋನ್ ಸಂಪರ್ಕಕ್ಕೆ ಸಿಕ್ಕಿರುವರು- " ಮುಂದೇನಾಯ್ತು ಹೇಳಿ, ನೀವು ಪೋಲೀಸರಿಗೆ ದೂರು ಕೊಟ್ಟಿರುವಿರಾ? ಅವರಿಂದ ಏನಾದರೂ ಸುಳಿವು ಸಿಕ್ಕಿದೆಯಾ?"
"ಪೋಲೀಸರಿಗೆ ದೂರು ಈ ಕಾಲದಲ್ಲಿ ಯಾರಾದರೂ ಕೊಡುತ್ತಾರಾ? ದೂರು ಕೊಡಲು ಹೋದರೆ, ಸಂಬಂಧಿಸಿದವರು ಹೆಡ್ ಆಫೀಸಿಗೆ ಹೋಗಿದ್ದಾರೆ, ಡ್ಯೂಟಿ ಮೇಲೆ ಹೊರಗೆ ಹೋಗಿರುವರು...ಎಂದೆಲ್ಲಾ ಹೇಳುವರು.ಅವರು ದೂರು ಸ್ವೀಕರಿಸಿದರೂ, ಉಳಿದ ತನಿಖೆ ಕೆಲಸವನ್ನೆಲಾ ನಿಮ್ಮ ಚಾನಲ್‌ಗಳೇ ಮಾಡುವುದಲ್ವಾ? ಸುತ್ತಿ ಬಳಸಿ ನಿಮ್ಮಲ್ಲಿಗೆ ಬರುವ ಬದಲು ನೇರ ನಿಮ್ಮಲ್ಲಿಗೆ ಬಂದರೆ ಕ್ಷಣದಲ್ಲಿ ದೇಶಾದ್ಯಂತ ಪ್ರಚಾರ ಸಿಗುವುದು..ಅದಕ್ಕೇ....."
ಇತ್ತ ಸಪ್ತಗಿರಿವಾಸಿಗೆ ಕೆಲ ಡೌಟುಗಳು ಬಂದು, ಪುನಃ ಪಾರ್ಥಸಾರಥಿಯವರಿಗೆ ಫೋನಾಯಿಸಿದ-"ಗುರುಗಳೇ, ಗಣೇಶರಿಗೆ ಗಿಡ ಮರ ಬಳ್ಳಿ ಕೀಟಗಳ ಫೋಟೋ ತೆಗೆಯುವ ಚಟವಿದೆಯಲ್ಲಾ.. ಹಾಗೆ ತೆಗೆಯುತ್ತಿರುವಾಗ ಸ್ಟಿಂಗ್ ಆಪರೇಶನ್ ಎಂದು....."
"ಅಯ್ಯೋ..ಅಲ್ವೋ..ಗಣೇಶರನ್ನು ಅಂಡಾಡಭಂಡ ಸ್ವಾಮಿ ಮಾಡಿದ್ದು ನಾವೇ ಅಲ್ಲವಾ? ಟಿ.ವಿಯವರಿಗೆ ಹೊಸ ವಿಷಯ ಸಿಗುವವರೆಗೆ ಇದನ್ನೇ ಜಗಿಯುವರು. ನಂತರ ಉಗಿದು ಇನ್ನೊಂದು ಜರ್ದಾ ಹಾಕುವರು. ಮೊದಲು ನೀನು ಟಿ.ವಿ ಆಫ್ ಮಾಡು.."
"ಗುರುಗಳೇ, ಯಾವುದಕ್ಕೂ ಅವರ ಆಶ್ರಮಕ್ಕೆ ಒಮ್ಮೆ ಹೋಗಿ ನೋಡಿಕೊಂಡು ಬರೋಣವಾ? ಕಳೆದ ಬಾರಿ ನಾನು ನೋಡಿದ್ದು ನೆನಪಿದೆ.."
"ನಿನಗೆ ಬೇರೇನೂ ಕೆಲಸವಿಲ್ಲವಾ? ಓ ದೇವರೆ..ನಿನ್ನಿಂದಾಗಿ ನನ್ನ ಕೆಲಸವೂ ಹಾಳಾಯಿತು. ಚಿರೋಟಿ ಹಲ್ವಾ ಬೇಯಿಸಲು ಇಟ್ಟಿದ್ದೆ..."ಫೋನ್ ಕಟ್.
ಚಿಕ್ಕು ಅಥವಾ ಜಯಂತ್ ಆದರೂ ಜತೆಗೆ ಬರುವರಾ ಎಂದು ವಿಚಾರಿಸಿದಾಗ, ದಸರಾ ರಜೆಯಲ್ಲಿ ನಮ್ಮನ್ನು ಡಿಸ್ಟರ್ಬ್ ಮಾಡಬೇಡ ಎಂದು ಗದರಿದರು.
ಕೊನೆಗೆ ಎವರ್ರೆಡಿ ರಾಮಮೋಹನರ ಜತೆಗೂಡಿ ಸಪ್ತಗಿರಿವಾಸಿ, ಅಂಡಾಂಡಭಂಡರ ಆಶ್ರಮಕ್ಕೆ ಹೊರಟ..
Rating
No votes yet

Comments

Submitted by Chikku123 Fri, 10/19/2012 - 12:19

:) :) :)

ನಿಮ್ಜೊತೆ ಇದ್ರೆ ಬಾರೀ ರಿಸ್ಕ್ ಹಾಗಾಗಿ ದಸರಾಗೆ ಊರಿಗೆ ಎಸ್ಕೇಪ್ ಗಣೇಶಣ್ಣ

Submitted by ಗಣೇಶ Sat, 10/20/2012 - 00:05

In reply to by Chikku123

:) :)
ಊರಿಂದ ಬರುವಾಗ ಅಲ್ಲಿ ತೆಗೆದ ಫೋಟೋಗಳನ್ನು ಕೂಡಲೇ ಸಂಪದದಲ್ಲಿ ಹಾಕಲು ಮರೆಯದಿರಿ. :)

Submitted by venkatb83 Fri, 10/19/2012 - 18:46

In reply to by RAMAMOHANA

"......ಗೆ ದೂರು ಈ ಕಾಲದಲ್ಲಿ ಯಾರಾದರೂ ಕೊಡುತ್ತಾರಾ? ದೂರು ಕೊಡಲು ಹೋದರೆ, ಸಂಬಂಧಿಸಿದವರು ಹೆಡ್ ಆಫೀಸಿಗೆ ಹೋಗಿದ್ದಾರೆ, ಡ್ಯೂಟಿ ಮೇಲೆ ಹೊರಗೆ ಹೋಗಿರುವರು...ಎಂದೆಲ್ಲಾ ಹೇಳುವರು.ಅವರು ದೂರು ಸ್ವೀಕರಿಸಿದರೂ, ಉಳಿದ ತನಿಖೆ ಕೆಲಸವನ್ನೆಲಾ ನಿಮ್ಮ ಚಾನಲ್‌ಗಳೇ ಮಾಡುವುದಲ್ವಾ? ಸುತ್ತಿ ಬಳಸಿ ನಿಮ್ಮಲ್ಲಿಗೆ ಬರುವ ಬದಲು ನೇರ ನಿಮ್ಮಲ್ಲಿಗೆ ಬಂದರೆ ಕ್ಷಣದಲ್ಲಿ ದೇಶಾದ್ಯಂತ ಪ್ರಚಾರ ಸಿಗುವುದು..ಅದಕ್ಕೇ.....""

:()))

ಎವರ್ರೆಡಿ ರಾಮೋ..!!

ಹ ಹಹಾ.... ಸೂಪರ್ ಗಣೇಶ್ ಅಣ್ಣ...

ಶುಭವಾಗಲಿ..

ನನ್ನಿ

\|

Submitted by ಗಣೇಶ Sat, 10/20/2012 - 00:11

In reply to by RAMAMOHANA

ಮುಂದ..?? ರಾಮಮೋಹನರೆ, ಇದೇ ಮ್ಯೂಸಿಕ್ ಬ್ಯಾಕ್‌ಗ್ರೌಂಡಲ್ಲಿ..ರಾಮಮೋಹನರು ಜೇಮ್ಸ್‌ಬಾಂಡ್ ತರಹ ಫುಲ್ಲಿ ಲೋಡೆಡ್(ಬಂದೂಕುಗಳಿಂದಲ್ಲಾ)-ಹಿಡನ್ ಮಿನಿ ಕ್ಯಾಮರಾಗಳೊಂದಿಗೆ-......ನಿರೀಕ್ಷಿಸಿ.:)

Submitted by Jayanth Ramachar Sat, 10/20/2012 - 09:26

ಗಣೇಶಣ್ಣ ಹಬ್ಬ ಮುಗಿಸಿ ಬ೦ದ‌ ಮೇಲೆ...ಆಪರೇಷನ್ ಅ೦ಡಾ೦ಡಬ೦ಡ‌ ಶುರು...ಅಲ್ಲಿಯವರೆಗೆ ಕ್ಯಾಮರಾಮೆನ್ ಚಿಕ್ಕು ಜೊತೆ ಜಯ೦ತ್...ಸ೦ಪದ‌ ಟಿವಿ.