ಜ್ಯೋತಿ ಬಸು
ಇದು ನನ್ನ ಸ್ನೇಹಿತನಿಂದ ಇ-ಮೈಲ್ನಲ್ಲಿ ಬಂದ ಸ್ವಾನುಭವ. ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದು ನೀವೂ ಒಪ್ಪುವುದಾದಲ್ಲಿ ದಯವಿಟ್ಟು ಮುಂದೆ ಓದಬೇಡಿ.
ನಾನು ರಾಜಕೀಯದ ಬಗ್ಗೆ ಓದಲು ಹಾಗೂ ಬರೆಯಲು ಇಚ್ಛಿಸುವುದಿಲ್ಲ. ನಾನು ಯಾವಾಗಲೂ ನನ್ನ ಪುಸ್ತಕ ಪ್ರಪಂಚ ಹಾಗೂ ಸಂಗೀತದಲ್ಲಿ ಮುಳುಗಿರುತ್ತೇನೆ ಹಾಗೂ ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸುರವರನ್ನು ಆದರ್ಶವಾದಿಗೆ ಹೋಲಿಸುತ್ತಿರುವುದು ನನಗೆ ಸರಿಕಾಣಲಿಲ್ಲ. ಆದ್ದರಿಂದ ನನ್ನ ಅಭಿಪ್ರಾಯವನ್ನು ನಿಮ್ಮ ಮುಂದೆ ಮಂಡಿಸುತ್ತಿದ್ದೇನೆ.
ಈ ಕಮ್ಯುನಿಸ್ಟ್ ಪಾದ್ರಿ ಎಂದು ಕರೆಸಿಕೊಳ್ಳುವ ಇತ್ತೀಚೆಗೆ ನಿಧನರಾದ (ನಿ)ರ್ಜ್ಯೋತಿ ಬಸು 25 ವರ್ಷಗಳಕಾಲ ಪಶ್ಚಿಮ ಬಂಗಾಳದ ಬೆಳವಣಿಗೆಯನ್ನು ತಡೆಹಿಡಿಯುವುದರಲ್ಲಿ ಹಾಗೂ West Bengalನ್ನು Waste Bengal ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಬಹುದು. ಹೌದು ನಾನವರನ್ನು ನಿರ್ಜ್ಯೋತಿ ಬಸು ಎಂದೇ ಕರೆಯುವೆ. ನಾನು 1965ರಲ್ಲಿ ಕಲಕೊತ್ತಾದಲ್ಲಿ ಜನಿಸಿ 1995ವೆರೆಗೆ ಅಲ್ಲೇ ನೆಲೆಸಿದ್ದವನು. ನನ್ನ ಬಾಲ್ಯದಲ್ಲಿ ವಿದ್ಯುತ್ ದೀಪಗಳನ್ನು ಉಪಯೋಗಿಸಿಯೇ ಇಲ್ಲ. ಕಾರಣ 14ಗಂಟೆಗಳ "power cuts!" ವಿಧ್ಯುತ್ ನಿಲುಗಡೆ! ಇದನ್ನ ಬಂಗಾಳದ ಸರ್ಕಾರವೂ ಸಹ ಒಪ್ಪಿಕೊಳ್ಳುತ್ತದೆ! ಬಂಗಾಳದ ಬೇಸಿಗೆಯಲ್ಲಿ ದೀಪ, ಫ್ಯಾನ್ಗಳಿಲ್ಲದೇ ನಾವೆಲ್ಲಾ ಹೊರಳಾಡುತ್ತಿದ್ದಾಗ, ಬಸುರವರು ತಮ್ಮ ಹವಾನಿಯಂತ್ರಿತ ಬಂಗಲೆಯಲ್ಲಿ ಐಸ್ ಮೇಲೆ ತಮ್ಮ ಸ್ಕಾಚ್ ಹೀರುತ್ತಿದ್ದರು. ಹೌದು, ಅಲ್ಲಿ ವಿದ್ಯುತ್ತೇ ಇರಲಿಲ್ಲ! 60ರ ದಶಕದಲ್ಲಿ ಪ. ಬಂಗಾಳ ಯಾಕೆ ವಿದ್ಯುತ್ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಬಸುರವರಿಂದ ಸಿಕ್ಕ ಉತ್ತರ! "ಹೆಚ್ಚಿನ ವಿದ್ಯುತ್ನಿಂದ ನಾವೇನು ಮಾಡಬೇಕಿದೆ! ಬಡಜನರು ವಿದ್ಯುತ್ತನ್ನು ತಿನ್ನಲಿಕ್ಕಾಗುತ್ತದೆಯೇ?" ("What shall we do with more power, eat it?")
ಈ ಕಾರಣಕ್ಕಾಗಿಯೇ 70ರ ಹಾಗೂ 80ರ ದಶಕದಲ್ಲಿ ಬಂಗಾಳದಲ್ಲಿದ್ದ ಬಾಲಕ, ಬಾಲಕಿಯರು ಬಸುರವರನ್ನು ದ್ವೇಷಿಸುತ್ತೇವೆ! ನಮ್ಮೆಲ್ಲರ ಬಾಲ್ಯವನ್ನು ಕಸಿದುಕೊಂಡರು. 60ರ ಹಾಗೂ 70ರ ದಶಕದಲ್ಲಿ ಹುಟ್ಟಿ ಬೆಳೆದಿರುವ ಯಾವ ಬೆಂಗಾಲಿಯಾದರೂ ಈ ವಿಷಯವನ್ನು ಒಪ್ಪುತ್ತಾನೆ(ಳೆ)! ನನ್ನ ಬಾಲ್ಯದಲ್ಲಿ ಒಂದೇ ಒಂದು ದಿನವಾದರೂ ನೆಮ್ಮದಿಯಿಂದ ಓದಲಿಕ್ಕೆ, ನಿದ್ರಿಸುವುದಕ್ಕಾಗಲೀ ಆಗಲಿಲ್ಲ! ಆದರೆ ಅವರು ದಿನಾಲೂ ತಮ್ಮ ಹವಾನಿಯಂತ್ರಿತ ಬಂಗಲೆಯಲ್ಲಿ ಐಸ್ ಮೇಲೆ ತಮ್ಮ ಸ್ಕಾಚ್ ಹೀರುತ್ತಿದ್ದರು. ಅವರ ಬಂಗಲೆಗೆ 24 ತಾಸೂ ಅನಿಯಮಿತ ವಿಧ್ಯುತ್ ಇತ್ತು. ನಾವೆಲ್ಲಾ ಉರಿ ಬೇಸಿಗೆಯಲ್ಲಿ ಬೇಯುತ್ತಿದ್ದರೆ, ಬಸುರವರು ಪ್ರತಿ ಬೇಸಿಗೆಯಲ್ಲಿ ಲಂಡನ್ ಪ್ರವಾಸಕ್ಕೆ ಹೋಗುತ್ತಿದ್ದರು. ಏಕೆ ಗೊತ್ತೇ? ವಿದೇಶಿ ಬಂಡವಾಳ ಆಕರ್ಷಿಸಲು! ನಗಬೇಡಿ. ಬಸು ಅವರ ಸಾಧನೆಯಂದರೆ ಪ್ರತಿಯೊಂದು ಕಂಪನಿಯನ್ನೂ ಬಂಗಾಳದಿಂದ ಪಲಾಯನ ಮಾಡಿಸಿದ್ದು. ಕಾರಣ ವ್ಯವಸ್ಥಿತ 24X7 ಮುಷ್ಕರಗಳು, ಹರತಾಳಗಳು, ಲಾಕೌಟ್ಗಳು ಯಾವ ಕಂಪನಿಯನ್ನೂ ಉಳಿಸಲಿಲ್ಲ,. ಬಡತನ ಮತ್ತೆ ನಿರುದ್ಯೋಗ ಊಹಿಸಲಸಾಧ್ಯ ವೇಗದಲ್ಲಿ ಬೆಳೆದವು. ಕೇರಳವು, ಬಂಗಾಳದಿಂದ ಕಮ್ಯುನಿಸ್ಟ್ ಪಾಠಗಳನ್ನು ಕಲಿತು ಬಹಳ ಕಲಾತ್ಮಕವಾಗಿ ಅಳವಡಿಸಿಕೊಂಡಿದೆ! ಮುಂದಿನ ಕೇರಳದ ಸಂಪುಟದಲ್ಲಿ ಹರತಾಳ ಮಂತ್ರಿ ಅಥವಾ ಲಾಕೌಟ್ ಮಂತ್ರಿಗಳಿದ್ದರೆ ಯಾರೂ ಅಚ್ಚರಿ ಪಡಬೇಕಿಲ್ಲ!
ಹಿಂಸಾತ್ಮಕ ಹಾಗೂ ಬಲಪ್ರಯೋಗದಲ್ಲಿ ಇವರು ಯಾವ ಸ್ಟಾಲಿನ್ ಅಥವಾ ಮಾವೋರಿಗಿಂತ ಕಡಿಮೆಯಿಲ್ಲ. 1982ರಲ್ಲಿ ನಡೆದ 18 ಆನಂದ ಮಾರ್ಗಿಗಳ ಭೀಕರ ಕೊಲೆ ಇವರ ಹಿಂಸೆಗೆ ಸಾಕ್ಷಿ. ನಡುರಸ್ತೆಯಲ್ಲಿ ಆನಂದಮಾರ್ಗಿಗಳ ಮಾರಣಹೋಮ ನಡೆದಂದು, ನನ್ನಮ್ಮ ನನ್ನನ್ನು ಹೊರಗೆ ಹೋಗಲು ಬಿಡಲಿಲ್ಲ. ಆದರೂ ಸಂಜೆ ಕಸ್ಬ ಸೇತುವೆಯಬಳಿ ನೋಡಿದಾಗ ಬರೀ ರಕ್ತವಷ್ಟೇ ಕಂಡದ್ದು. ಒಮ್ಮೆ ಬಸುರವರ ದುರಾಡಳಿತದ ವಿರುದ್ಧ ನಡೆಸಿದ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿಯ (ವಿರೋಧ ಪಕ್ಷದ ನಾಯಕಿಯಾಗಿ) ತಲೆಯನ್ನೊಡೆದಿದ್ದರು ಈ ಸಿಪಿಐ(ಎಂ) ಗೂಂಡಾಗಳು! ಯಾರಾದರೂ ವಿರೋಧಿಸಿದರೆ ಅವರು ಅಂಗವಿಕಲರಾಗುವುದು ನಿಶ್ಚಿತವಾಗಿತ್ತು! ಅದೃಷ್ಟವಿದ್ದಲ್ಲಿ ಆತ ಸೀದಾ ಸ್ವರ್ಗಕ್ಕೇ! ಇದು ಕಲಕತ್ತಾನಗರದ ಕತೆಯಾದರೆ, ಹಳ್ಳಿಗಳಲ್ಲಿ ಸ್ವಲ್ಪ ಪ್ರಚೋದನೆಗಳಿಗೂ ಸಹ ಪ್ರಾಣತೆಗೆಯುದು ಸಾಮಾನ್ಯವಾಗಿತ್ತು. ಪಾಪ ನಮ್ಮ ಕೇರಳದವರು ಹೀಗೇ ಆರ್.ಎಸ್.ಎಸ್ ರವರ ಮೇಲೆ ಕಣ್ಣೂರಿನಲ್ಲಿ ದೌರ್ಜನ್ಯ ನಡೆಸಿದಾಗ, ನಮ್ಮ ಪತ್ರಿಕೆಗಳು, ಹಾಗೂ 24ಗಂಟೆ ಟೀವಿಯವರು ಅದಕ್ಕೆ ಮತೀಯ ಗಲಭೆಯ ಬಣ್ಣ ಹಚ್ಚಿದ್ದರು. ಹೇಗೆ ಮಾಹಿತಿಗಳನ್ನು ತಡೆಹಿಡಿಯಬಹುದೆಂಬುದನ್ನು ಕೇರಳದವರು ಬಂಗಾಲದವರಿಂದ ಕಲಿಯದಿದ್ದುದೇ ಇದಕ್ಕೆಲ್ಲಾ ಕಾರಣ. ಇದೆಲ್ಲದರ ಫಲವೇ ನಂದಿಗ್ರಾಮ, ಲಾಲ್ಘರ್ ಹಾಗೂ ನಕ್ಸಲ್ಬಾರಿಯಲ್ಲಿನ ಅವ್ಯವಸ್ಥೆಗಳು! ಯಾರೊಬ್ಬರೂ ಕುರಿಯ ವೇಷದಲ್ಲಿರುವ ತೋಳವನ್ನು 23ವರ್ಷಗಳಿಂದ ತೆರೆದಿಡುವಲ್ಲಿ ಧೈರ್ಯತೋರಲಿಲ್ಲ. ಇವರೆಲ್ಲರ ಪಾಪದ ಫಲವನ್ನು ಬುದ್ದದೇವರು ಹೊರಬೇಕಾಗಿ ಬಂದದ್ದು ದುರಂತ. ಹಿಂದೊಮ್ಮೆ ವಾರ್ತಾಮಂತ್ರಿಯಾಗಿದ್ದ ಬುದ್ದದೇವರು ಜ್ಯೋತಿಬಸುವಿಗೆ "ಸಿಪಿಎಂನಲ್ಲಿ ಬರೀ ಗೊಂಡಾಗಳೇ ತುಂಬಿದ್ದಾರೆ, ಇದಕ್ಕೇನಾದರೂ ಮಾಡಲೇಬೇಕೆಂದು" ತಾಕೀತು ಮಾಡಿದರು. ಹೌದು ನೀವು ಹೇಳುವುದು ನಿಜವೆಂದ ಬಸು ತಕ್ಷಣವೇ ಬುದ್ದದೇವರನ್ನು ಮಂತ್ರಿಪದವಿಯಿಂದ ವಜಾಮಾಡಿ, ಅವರನ್ನು ದೂರತಳ್ಳಿದರು. ಮತ್ತೆ ಇಂದಿನ ಎತ್ತರಕ್ಕೆ ಬರಲು ಬುದ್ದದೇವರು ಬಹಳಷ್ಟು ಕಷ್ಟಪಡಬೇಕಾದದ್ದು ಇತಿಹಾಸ.
ಒಂದೇ ಒಂದು ಶಾಸನದಿಂದ ಬಂಗಾಳವನ್ನು 25ವರ್ಷ ಹಿಂದೆ ತಳ್ಳಿದ ಕೀರ್ತಿ ಬಸುರವರಿಗೆ ಸಲ್ಲುತ್ತದೆ. ಬಂಗಾಳದ ಶಾಲೆಗಳಲ್ಲಿ ಇಂಗ್ಲೀಷನ್ನು ನಿಷೀಧಿಸಿ ಹೊರಡಿಸಿದ ಆದೇಶ, ಅವರ ಪಕ್ಷದವರಿಂದಲೇ ಒಪ್ಪಿಕೂಳ್ಳಲಾಗಲಿಲ್ಲ. ಇವರ ಬೂಟಾಟಿಕೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಅಮೆರಿಕಾ ರಾಯಭಾರ ಕಛೇರಿಯಿರುವ ರಸ್ತೆಗೆ ಹೋ ಚಿ ಮಿನ್ ರಸ್ತೆ ಎಂದು ಹೆಸರಿಟ್ಟರು. ಅಲ್ಪ ಪ್ರಚೋದನೆಗಳಿಗೂ ಸಹ ಈ ರಾಯಭಾರಿ ಕಛೇರಿ ಗೂಂಡಾಗಳ ಹೊಡೆತಕ್ಕೆ ಗುರಿಯಾಗುತ್ತಿತ್ತು! ಆದರೆ ಅದರ ಪಕ್ಕದಲ್ಲೇ ಇರುವ ಅಮೆರಿಕನ್ ಸ್ಕೂಲನ್ನು ಮಾತ್ರ ಯಾರೂ ಮುಟ್ಟುತ್ತಿರಲಿಲ್ಲ, ಯಾಕೆ ಗೊತ್ತೇ? ಅಲ್ಲಿ ಬಸು ಹಾಗೂ ಸಿಪಿಎಂ ಮುಖಂಡರ ಮಕ್ಕಳು, ಮ್ಮೊಮ್ಮಕ್ಕಳು ಓದುತ್ತಿದ್ದರು! ಎಲ್ಲರಿಗೊಂದು ಕಾನೂನಾದರೆ, ಇವರಿಗೇ ಒಂದು!
ಇಡೀ ರಾಜ್ಯ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದಾಗ, ಬಸುರವರ ಮಗ ಚಂದನ್ ರವರ ಬಿಸ್ಕತ್ ಕಾರ್ಖಾನೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದವು! ಈ ಕಾರ್ಮಿಕ ಮುಖಂಡ, ಕಮ್ಯುನಿಸ್ಟ್ ಪಾದ್ರಿಯ ಮಗ ಮದುವೆಯಾದದ್ದು ಮಾತ್ರ ಬಂಡವಾಳಶಾಹಿ ಸ್ವರಾಜ್ ಪೌಲ್ ರ ಮಗಳನ್ನ! ಇವರೆಲ್ಲಾ ಮಾಡಿದ್ದು ಅವಕಾಶ ರಾಜಕಾರಣವಷ್ಟೇ! ಇಂದಿರಾರ ಮರಣದ ನಂತರ ಇಲ್ಲಸ್ಟ್ರೇಟಡ್ ವೀಕ್ಲಿಎಂಬ ಪತ್ರಿಕೆ ಇಂದಿರಾರವರನ್ನು ಬಹಳಷ್ಟು ಹೊಗಳಿ ಬರೆದಿತ್ತು. ಅದೇ ಪತ್ರಿಕೆ ಇಂದಿರಾರ ಮೊದಲನೇ ವರ್ಷಾಬ್ದೀಕದಂದು ಅವರ ಬಗ್ಗೆ ವಸ್ತುನಿಷ್ಟವಾಗಿ ಬರೆಯಲು ಡಾ. ಮಿತ್ರರವರನ್ನು ಕೋರಿತು. ಬಹಳ ಬುದ್ಧಿವಂತರೂ ಹಾಗೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದ ಡಾ. ಮಿತ್ರರವರು ವರ್ಲ್ಡ್ ಬ್ಯಾಂಕಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಂತರ ಬಂಗಾಳದ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಆಗವರು ಬಸುರವರ ಮಂತ್ರಿಮಂಡಲದಲ್ಲಿ ಹಣಕಾಸು ಮಂತ್ರಿಯಾಗಿದ್ದರು. ತಮ್ಮ ವಸ್ತುನಿಷ್ಠ ವರದಿಯಿಂದ ಇಲ್ಲಸ್ಟ್ರೇಟಡ್ ವೀಕ್ಲಿಯಲ್ಲಿ ಅವರು ಇಂದಿರಾರ ಬಹುಮುಖ ಪ್ರತಿಭೆಯನ್ನು ಬೆತ್ತಲು ಮಾಡಿದ್ದರು. ಅದಕ್ಕೆ ಅವರು ತೆತ್ತಬೆಲೆ, ಹೌದು, ನಮ್ಮ ಬಸುರವರು ಅವರನ್ನು ಮಂತ್ರಿಪದವಿಯಿಂದ ಕಿತ್ತು ಮೂಲೆಗೆ ಬಿಸಾಕಿದರು. ಕಾರಣ ರಾಜೀವರಿಗೆ ಅವರ ಲೇಖನ ಹಿಡಿಸದೇ ಬಸುವಿಗೆ ಕಂಪ್ಲೇಂಟ್ ಮಾಡಿದ್ದರು! ಈ ಕಮ್ಯುನಿಸ್ಟ್ ಕಾಮ್ರೇಡರು ತಮ್ಮ ಉಳಿದ ಕಾಮ್ರೇಡರನ್ನು ನಡೆಸಿಕೊಂಡ ರೀತಿ ಇದು! ಸ್ವಪಕ್ಷಪಾತ, ಲಂಚಕೋರ ಹಾಗೂ ಕುಟಿಲ ಕಾಮ್ರೇಡರಮುಂದೆ ಯಾರ ಆಟವೂ ಉಳಿಯಲಿಲ್ಲ!
ಬಸು ಉವಾಚ: ಒಮ್ಮೆ ಅಬಲೆಯೊಬ್ಬಳ ಮೇಲೆ ಹಾಡುಹಗಲಲ್ಲೇ ಈ ಕಮ್ಯುನಿಸ್ಟ್ ಗೂಂಡಾಗಳಿಂದ ಸಾಮೂಹಿಕ ಅತ್ಯಾಚಾರ ನಡೆದಾಗ ಬಸುರವಸು ಹೇಳಿದ್ದು "ಇರೋಂ ತೊ ಹೋಯೆ ಥಕೆ" - "ಈ ರೀತಿ ನಡೆಯುತ್ತಲೆ ಇರುತ್ತವೆ, ಇದು ಸಹಜ". ಇದೇರೀತಿಯ ನುಡಿಗಳು ಕೇರಳದಿಂದಲೂ ಕೇಳಿಬಂದವು. ಕೇರಳದಲ್ಲಿ ಅಮೆರಿಕನ್ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದಾಗ ನಮ್ಮ ಇ.ಕೆ. ನಾಯನಾರ್ ಹೇಳಿದ್ದು "ಚಾಯ ಕುಡಿಕ್ಕುನ್ನ ಮಾದಿರಿ ಆಣು" - ಅಮೆರಿಕ ಹುಡುಗಿಯನ್ನು ರೇಪ್ ಮಾಡುವುದು ಟೀ ಕುಡಿದ ಹಾಗೆ!
ಈ ಬಸುರವರು ಮು.ಮಂ ಆಗಿದ್ದೂ ಸಹ ಪ್ರಮೋದ್ ದಾಸ್ಗುಪ್ತಾ ಎಂಬ ನಾಯಕರು ಬಿಟ್ಟುಕೊಟ್ಟಿದ್ದರಿಂದ. ಬಂಗಾಳದ ಸಿಪಿಐ(ಎಮ್)ನ್ನು ಕಟ್ಟಿ, ಬೆಳೆಸಿ ಅದು ಅಧಿಕಾರಕ್ಕೆ ಬರುವುದಕ್ಕೆ ಪ್ರಮೋದ್ ದಾಸ್ಗುಪ್ತಾರವರೊಬ್ಬರೇ ಕಾರಣ. ಅವರೊಬ್ಬರೇ ಕಟ್ಟಿಬೆಳೆಸಿದ ಈ ಹುತ್ತದಲ್ಲಿ ಬಂದು ಸೇರಿದವರು ಬಸು. 1977ರಲ್ಲಿ ತಮ್ಮ ಪಕ್ಷ ಗೆದ್ದಾಗ ಪ್ರಮೋದ್ ರವರು ಸರ್ಕಾರದಲ್ಲಿ ಶಾಮೀಲಾಗಲು ನಿರಾಕರಿಸಿದರು ಮತ್ತು ಅಧಿಕಾರವನ್ನು ಸ್ಕಾಚ್ ಹೀರುವ, ಹವಾನಾ ಸಿಗಾರ್ ಸೇದುವ ಬಸುರವರಿಗೆ ಬಿಟ್ಟುಕೊಟ್ಟರು. ಈ ನಾಯಕರು ನಾಯಕತ್ವ ವಹಿಸಿಕೊಂಡಿವುದು, ತಮ್ಮ ಒಂದು ತಿಂಗಳ ಸಂಬಳವನ್ನು ಕೊಟ್ಟರೂ ಸಹ ಒಂದು ಪೆಗ್ ಸ್ಕಾಚಾಗಲೀ ಒಂದು ಸಿಗಾರಾಗಲೀ ಕೊಳ್ಳಲು ಶಕ್ತಿಯಿಲ್ಲದ ಜನರನ್ನು! ಇವರು ದೇವೇಗೌಡರಿಗೆ ಪ್ರಧಾನಿ ಪದವಿಯನ್ನು ಬಿಟ್ಟುಕೊಟ್ಟಬಗ್ಗೆ ಬಹಳಷ್ಟು ಪ್ರಚಾರ ಪಡೆದರು, ಅಸಲು ವಿಷಯವೇ ಬೇರೆ!
ಪ್ರಮೋದ್ ದಾಸ್ಗುಪಾರವರ ಅಕಾಲಿಕ ಮರಣದನಂತರ ಬಸುರವರನ್ನು ತಡೆಯುವವರೇ ಇರಲಿಲ್ಲ. ಸರೋಜ್ ಮುಖರ್ಜಿಯೆಂಬ ಕೈಗೊಂಬೆಯನ್ನು ಪಕ್ಷದ ಅಧ್ಯಕ್ಷಸ್ಥಾನದಲ್ಲಿರಿಸಿ ಬಸುರವರು ಪಕ್ಷವನ್ನೂ, ರಾಜ್ಯವನ್ನೂ ಗೂಂಡಾಗಳಮೂಲಕ ಆಳತೊಡಗಿದರು. ಹೇಗಂತೀರಾ, ಬಹಳ ವ್ಯವಸ್ಥಿತವಾಗಿ ಸಿಪಿಐ ಗೂಂಡಾಗಳನ್ನು ಸರ್ಕಾರದ ಎಲ್ಲಾ ಹುದ್ದೆಗಳಿಗೆ ನೇಮಿಸಿವುದರ ಮೂಲಕ - ಕೆಳಸ್ತರದಿಂದ ಹಿಡಿದು, ನಿಧಾನವಾಗಿ ಎಲ್ಲಾ ಸ್ತರಗಳಲ್ಲೂ ಸಿಪಿಐ ಕಾರ್ಯಕರ್ತರನ್ನು ನೇಮಿಸುವುದರ ಮೂಲಕ ಪಕ್ಷವನ್ನೂ, ಸರ್ಕಾರವನ್ನೂ ಒಂದಾಗಿಸಿದರು! ಇದು ನಮ್ಮ ಲಾಲೂ, ಮುಲಾಯಂ, ಗೌಡರಾಡಳಿತದಲ್ಲಿ ನಡೆದಿದೆಯೆನ್ನಲಾದ ಹಗರಣಗಳಿಗಿಂತ ಸಾವಿರ ಪಟ್ಟು ಜಾಸ್ತಿ! ಪಾಪ ನಮ್ಮ ಉಳಿದ ನಾಯಕರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಏನಿಲ್ಲಾ ಹಗರಣಗಳು ಮಾಡುತ್ತಾರೆ. ಇವರೆಲ್ಲಾ ಬಸುರವರಿಂದ ಕಲಿಯಬೇಕಾದುದು ಬಹಳಷ್ಟಿದೆ. ಬಸುರವರು ಚುಣಾವಣೆ ಮುಗಿದಾಕ್ಷಣ ಮುಂದಿನ ಚುಣಾವಣೆಯ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಬಹಳ ವ್ಯವಸ್ಥಿತವಾಗಿ ಹಾಗೂ ಮುಂಚಿತವಾಗಿ, ಮತದಾರರ ಪಟ್ಟಿಯಿಂದ ಪ್ರಾರಂಭಿಸಿ ಎಲ್ಲೆಡಯಲ್ಲೂ ಬರೀ ಕಮ್ಯುನಿಷ್ಟ್ ಕಾರ್ಯಕರ್ತರೇ ಇರುವಂತೆ ನೋಡಿಕೊಳ್ಳುತ್ತಿದ್ದರು. ಸಾವಿರಾರು ಜನ ಚುಣಾವಣೆಯ ದಿನಗಳಲ್ಲಿ ತಮ್ಮ ಹೆಸರು ಪಟ್ಟಿಯಲ್ಲಿಲ್ಲದಿದ್ದನ್ನೊ, ಈ ಕಮ್ಯುನಿಷ್ಟ್ ಗೂಂಡಾಗಳು ಓಟುಗಳ ಮೇಲೆ ಓಟುಗಳನ್ನು ಹಾಕುವುದು ನೋಡಿಕೊಂಡು ಬರುವುದು ಸಾಮಾನ್ಯವಾಗಿತ್ತು. ವಿರೋಧಿಸಿದಲ್ಲಿ ಕೈ ಅಥವಾ ಕಾಲುಗಳನ್ನು ಕಳೆದುಕೊಳ್ಳುವುದು ಸಹಜ ಪ್ರತಿಕ್ರಿಯೆಯಾಗಿತ್ತು! ಆದರೂ ಜನರು ಅವರನ್ನು ಜಂಟಲ್ ಮ್ಯಾನ್ ಎಂದರೆ ಅವರು "ನಾನು ಜಂಟಲ್ ಮ್ಯಾನಲ್ಲ! ನಾನು ಕಮ್ಯುನಿಷ್ಟ್!" ಎನ್ನುತ್ತಿದ್ದರು.
ಚೀನಾದ ತಿನ್ಯಾನ್ಮೆನ್ ಚೌಕದಲ್ಲಿ ನಡೆದ ನರಮೇಧದ ಬಗ್ಗೆ ಲಾರ್ಡ್ ದೇಸಾಯಿಯವರು ಬಸುರವರ ಪ್ರತಿಕ್ರಿಯಯನ್ನು ಕೇಳಿದಾಗ, ಅವರು "ನೀವು ಕಿಟಕಿ ತೆಗೆದಿಟ್ಟಲ್ಲಿ, ನೊಣಗಳು ಬರುವುದು ಸಹಜ (When you open the window, flies come in)" ಎಂದರು! ಚೀನಾದ ದಬ್ಬಾಳಿಕೆಗ ಭಾರತವನ್ನು ಬಸುರವರು ಬಹಳ ಚಾಣಾಕ್ಷತನದಿಂದ ಒಪ್ಪಿಸಿದ್ದರು. 80ರ ದಶಕದವೆರೆಗೂ ತ್ರಿವರ್ಣ ಧ್ವಜಕ್ಕೆ ಗೌರವಕೊಡಲು ನಿರಾಕರಿಸಿದ್ದರೆಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ! ಇಂದಿನ ದಿನಗಳಲ್ಲಿ ಲಾಲೂ, ಮುಲಾಯಂ ಹಾಗೂ ಗೌಡರು 5-10 ವರ್ಷಗಳು ಉಳಿಯಲೇ ಕಷ್ಟಪಡುವಾಗ (ಅಧಿಕಾರದಲ್ಲಿ!) ಬಸುರವರು 23 ವರ್ಷಗಳು ಏನೂ ಸಾಧಿಸದೇ ಅಧಿಕಾರ ನಡೆಸಿದ್ದು ಅವರ ಸಾಧನೆಯೇ ಹೌದು! ಅವರು ಮಾವೋ, ಸ್ಟಾಲಿನ್ಗಳ ರೀತಿಯಲ್ಲೇ ಅಧಿಕಾರ ನಡೆಸಿದರು. ಎದುರಾದವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿದರು. ಇಂಥವರಿಗಾಗಿ ಜನರು ಕಣ್ಣೀರು ಸುರಿಸುವುದು ಬೇಕಿಲ್ಲ.
------------------------
ಇದರ ಮೂಲ ಲೇಖಕರ ಲೇಖವನ್ನು ಓದಲು ಇಲ್ಲಿ ಚಿಟುಕಿಸಿ:
ಇದೇ ರೀತಿಯಲ್ಲಿನ ಇತರೆ ಲೇಖನಗಳನ್ನು ಓದಲು ಇಲ್ಲಿ ಚಿಟುಕಿಸಿ:
http://www.mid-day.com/opinion/2010/jan/180110-Jyoti-Basu-West-Bengal-Chief-Minister.htm
http://www.swapan55.com/2010/01/you-seek-his-monument-look-around.html
http://ibnlive.in.com/blogs/sumonkchakrabarti/52/54068/jyoti-basu-the-unkindest-cut.html
-------------------------------
Comments
ಉ: ಜ್ಯೋತಿ ಬಸು
ಉ: ಜ್ಯೋತಿ ಬಸು
ಉ: ಜ್ಯೋತಿ ಬಸು
In reply to ಉ: ಜ್ಯೋತಿ ಬಸು by Rakesh Shetty
ಉ: ಜ್ಯೋತಿ ಬಸು
ಉ: ಜ್ಯೋತಿ ಬಸು
In reply to ಉ: ಜ್ಯೋತಿ ಬಸು by hsprabhakara
ಉ: ಜ್ಯೋತಿ ಬಸು
ಉ: ಜ್ಯೋತಿ ಬಸು