ಟಿಪ್ಪು ಸುಲ್ತಾನ್ ಅಲ್ಲ ತಿಪ್ಪು ಸುಲ್ತಾನ್
ನಾನು ಬಹಳ ದಿನಗಳ ಹಿಂದೆ ಚಿತ್ರದುರ್ಗಕ್ಕೆ ಹೋದಾಗ ಹತ್ರದಲ್ಲೆ ಇರುವ 'ನಾಯಕನಹಟ್ಟಿ' ಗೆ ಹೋಗಿದ್ದೆ.
ಅಲ್ಲಿಗೆ ಹೋಗಿದ್ದಾಗ ಒಂದು ಸೋಜಿಗ ತಿಳಿಯಿತು..ಒಂದು ಕತೆಯ ಪ್ರಕಾರ ..
" ಹೈದರಾಲಿಯು ಚಿತ್ರದುರ್ಗವನ್ನು ಮುತ್ತಿಗೆ ಹಾಕಲು ಬಂದಾಗ ಅವನು ನಾಯಕನಹಟ್ಟಿಯ ದವಸವನ್ನು, ಬೇಳೆಕಾಳುಗಳನ್ನು ಕೊಳ್ಳೆ ಹೊಡೆದು ನಂತರ ಚಿತ್ರದುರ್ಗವನ್ನು ಮುತ್ತಿಗೆ ಹಾಕುವ ಪ್ಲಾನ್ ಮಾಡಿದ್ದನಂತೆ. ಅದರಂತೆ ಅವನು ಅಲ್ಲಿ ಬಂದು ಡೇರೆ ಹೂಡಿದ. ಅವನು ಡೇರೆ ಹೂಡಿದ ಜಾಗ ೧೨ನೇ ಶತಮಾನದಲ್ಲಿದ್ದ ಒಬ್ಬ ಸಿದ್ಧರ( ತಿಪ್ಪೇರುದ್ರಸ್ವಾಮಿ) ಸಮಾಧಿ ಸ್ಥಳ. ಹೈದರಾಲಿಗೆ ಆ ಸಿದ್ಧ ಕನಸಿನಲ್ಲಿ ಬಂದು ಹರಸಿದನಂತೆ. ಅದಕ್ಕೋಸ್ಕರ ಹೈದರಾಲಿ ತನ್ನ ಮಗನಿಗೆ 'ತಿಪ್ಪು' ಎಂದು ಹೆಸರಿಟ್ಟನಂತೆ.
ನಂತರ ಬ್ರಿಟಿಶರ ಕೈಗೆ ಸಿಕ್ಕಿ 'ತಿಪ್ಪು' --> 'ಟಿಪ್ಪು' ಆದನಂತೆ. :)
Rating