ಟ್ರಿವೆಂಡರ್ ರೈಲ್ವೆ ನಿಲ್ದಾಣದ ಸೊಬಗನ್ನು ನೋಡಿ ಆನಂದಿಸಿ !
ಮುಂಬೈನಿಂದ ದಕ್ಷಿಣ ಭಾರತದ ಪರ್ಯಟನೆ ಮಾಡಿದೆವು : (ಚೆನ್ನೈ-ಟ್ರಿವೆಂಡರ್ಮ್-ಮುಂಬೈ)
ನಮಗೆ ರಾಮೇಶ್ವರದ ದೇವಸ್ಥಾನದಲ್ಲಿ ಕಾಶಿಯಿಂದ ತಂದ ಗಂಗೆಯ ನೀರಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ ಕೃತಾರ್ಥರಾಗುವ ಬಯಕೆ ಬಹಳ ವರ್ಷದಿಂದ್ದಿತ್ತು. ಅದು ಹೇಗೋ ಈ ವರ್ಷ ನಮಗೆ ಕೂಡಿಬಂತು; ಮತ್ತು ಹೂವಿನ ಸರದಂತೆ ಸಮರ್ಪಕವಾಗಿ ನಡೆದೂ ಹೋಯಿತು. ನಮ್ಮ ಪ್ರಮುಖ ಸ್ಥಾನ ರಾಮೇಶ್ವರವಾಗಿತ್ತು. ಅದರಜೊತೆ ಚೆನ್ನೈ, ಪಾಂಡಿಚೆರಿ, ತಂಜಾವೂರ್, ಮಹಾಬಲಿಪುರಂ, ಶ್ರೀರಂಗಮ್, ತಿರುಶೆಂದೂರ್, ಕನ್ಯಾಕುಮಾರಿ, ಟ್ರಿವೆಂಡ್ರಮ್ ನೋಡಿ ಬಂದೆವು. ಚೆನ್ನೈಗೆ ಹೋಗುವಾಗ ಮುಂಬೈನ ಟ್ರಾವೆಲ್ ಏಜೆಂಟ್ ಮುಖಾಂತರ ತತ್ಕಾಲ್ ನಲ್ಲಿ ಬುಕ್ ಮಾಡಿಸಿದೆವು. ವಾಪಸ್ ಬರುವಾಗ ನಾನೇ ಟ್ರಿವೆಂಡ್ರಮ್ ಸೆಂಟ್ರೆಲ್ ಅಡ್ವಾನ್ಸ್ ಬುಕಿಂಗ್ ಕೌಂಟರ್ ನಲ್ಲಿ ಕುದ್ದಾಗಿ ನಿಂತು ಮುಂಬೈಗೆ ಸ್ಥಳ ಕಾದಿರಿಸಿದೆ. ಇದಕ್ಕಾಗಿ ನಾನು ನಾವು ಇಳಿದುಕೊಂಡಿದ್ದ ಹೋಟೆಲ್ ನಿಂದ ಬೆಳಿಗ್ಯೆ ೫ ಗಂಟೆಗೇ ಬಂದು ಕ್ಯೂ ನಲ್ಲಿ ನಿಂತೆ. ೭-೩೦ ಕ್ಕೆ ಬಾಗಿಲು ತೆರೆಯಿತು. ನಂತರ ನಮಗೆ ನಮ್ಮ ಸರತಿಯ ನಂಬರ್ ಬರೆದುಕೊಟ್ಟರು. ಆಮೇಲೆ ಸರಿಯಾಗಿ ೧೦ ಗಂಟೆಗೆ ಕಿಟಕಿ ತೆರೆಯುವ ಮೊದಲೇ ನಮ್ಮ ನಮ್ಮ ಸರತಿ ನಂಬರ್ ನಲ್ಲಿ ನಿಂತು ಟಿಕೆಟ್ ಪಡೆಯಬೇಕು. ನನಗೆ ಮತ್ತು ನನ್ನ ಶ್ರೀಮತಿಗೆ 'ಟ್ರಿವೆಂಡ್ರಮ್ (ದೆಹಲಿ) ನಿಜಾಮುದ್ದೀನ್ ರಾಜಧಾನಿ ಎಕ್ಸ್ ಪ್ರೆಸ್,' ನಲ್ಲಿ ೨ ನೆ ಎ.ಸಿ.ಡಬ್ಬಿಯಲ್ಲಿ ( ಕೆಳಗಿನ ಬರ್ತ ಸಿಕ್ಕಿತು. ಈಗ ಸರ್ಕಾರ ಮಾಡಿರುವ 'ತತ್ಕಾಲ್ ಸ್ಥಳಕಾದಿರಿಸುವ ವ್ಯವಸ್ಥೆ' ಚೆನ್ನಾಗಿದೆ. ಆದರೆ ಇದಕ್ಕೂ ಮತ್ತೆ ಎಲ್ಲಿ ನಮ್ಮ ಜನ ಧಕ್ಕೆ ತರುತ್ತಾರೋ ತಿಳಿಯದು. (ನಮ್ಮ ಜನ ಮೊಸಗಾರರಲ್ಲಿ ಅಗ್ರೆಸರು)
ಟ್ರಿವೆಂಡ್ರಮ್ ಸೆಂಟ್ರೆಲ್ ರೈಲ್ವೆ ನಿಲ್ದಾಣದ ಅಂದ-ಚೆಂದ :
ವಾಪಸ್ ಬರುವಾಗ ಟ್ರಿವೆಂಡ್ರಮ್ ಸೆಂಟ್ರೆಲ್ ರೈಲ್ವೆ ನಿಲ್ದಾಣದ ವೈಟಿಂಗ್ ರೂಂ ನಲ್ಲಿ ಸ್ವಲ್ಪ ಕಾಲ ಕಳೆದೆವು. ನಾವು ಸ್ಥಳ ಕಾದಿರಿಸಿದ, ರಾಜಧಾನಿ ಎಕ್ಸ್ ಪ್ರೆಸ್ ಸಾಯಂಕಾಲ ೧೯.೧೫ ಕ್ಕೆ ಹೊರಡಬೇಕು. ಆದರೆ ಅದು ೫-೪೫ ಕ್ಕೆ ಪ್ಲಾಟ್ಫಾರಂನಲ್ಲಿ ಬಂದು ನಿಂತಿತು. ಎಲ್ಲರೂ ಒಳಗೆ ಕೂತಾಗ ನಾವೂ ಅವರನ್ನು ಅನುಸರಿಸಿದೆವು. ನಮ್ಮ ಮುಂಬೈನಲ್ಲಿ ಇನ್ನೇನು ರೈಲು ಹೊರಡುತ್ತೆ ಅನ್ನುವ ೧ ಗಂಟೆಗೆ ಮೊದಲು ರೈಲು ನಿಲ್ದಾಣಕ್ಕೆ ಬರುತ್ತದೆ. ಈ ಅಭ್ಯಾಸವಾಗಿದ್ದ ನಮಗೆ ಸ್ವಲ್ಪ ಆಶ್ಚರ್ಯವೆನಿಸಿತು.
ಹಾಗೆಯೇ ಅಲ್ಲಿನ ಪ್ಲಾಟ್ಫಾರಂ ಸುತ್ತಿದೆವು. ಅಬ್ಬ ! ೧ ನೆ ನಂಬರ್ ಎಷ್ಟು ಚೊಕ್ಕಟವಾಗಿತ್ತು. ಡಬ್ಬಗಳು ನಿಯಮಿತ ಜಾಗದಲ್ಲಿದ್ದವು. ಕಸ ಕಡ್ಡಿ ಸ್ವಲ್ಪವೂ ಚೆಲ್ಲಿರಲಿಲ್ಲ. ನೊಣಗಳ ಹಾವಳಿ, ಫೇರೀವಾಲರ ಯಾರ ಹಾವಳಿಯೂ ಇಲ್ಲದೆ ಯಾವುದೋ ಹಳ್ಳಿಯ ರೈಲ್ವೆ ನಿಲ್ದಾಣದ ತರಹದ ಮೌನ ನೀರವ ಪಟ್ಟಣದ ಚಾಕಚಕ್ಯತೆಗೆ ಕಡಿಮೆಯೇನೂ ಇಲ್ಲದ ವಾತಾವರಣವಿತ್ತು. ನಾನು ಕೇವಲ ನಮ್ಮ ಪ್ಲಾಟ್ಫಾರಂ ಮಾತ್ರ ಹೀಗಿದೆ ಬೇರೆ ಹೇಗಿವೆ ಎಂದು ಅಲ್ಲಿ ಅಡ್ಡಾಡಿದೆ. ೨ ಮತ್ತು ೩ ನೆಯ ಗಳೂ ಅಷ್ಟೆ ಉತ್ತಮವಾಗಿದ್ದವು. ರೈಲ್ವೆ ಸಿಬ್ಬಂದಿಯ ಅದಲ್ಲದೆ ಅದೇನು ಹೊಸ ನಿಲ್ದಾಣವೆಂಬಂತೆ ಕಾಣಿಸಲಿಲ್ಲ. ಮತ್ತೊಂದು ವಿಶೇಷ ದೃಶ್ಯ ನಮ್ಮ ಗಮನ ಸೆಳೆಯಿತು. ಇಬ್ಬರು ಹೆಣ್ಣಾಳುಗಳು ಕಡ್ಡಿ ಪೊರಕೆಯಲ್ಲಿ ರೈಲ್ವೆ ಪಟರಿಯ ಮಧ್ಯೆ ಬಿಸಾಡಿದ್ದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಹೆಕ್ಕಿ-ಹೆಕ್ಕಿ ತಮ್ಮ ಚೀಲದಲ್ಲಿ ತುಂಬಿಕೊಂಡು ಅವನ್ನು ಕಚಡಾ ಡಬ್ಬದಲ್ಲಿ ಜಮಾಮಾಡುತ್ತಿದ್ದರು.
ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಹೇಳಲೇ ಬೇಕಲ್ಲವೇ : (ಇವೆಲ್ಲಾ ನನ್ನ ವೈಯಕ್ತಿಕ ಅನುಭವದ ಮಾತುಗಳು)
ಸೆಂಟ್ರೆಲ್ ನಿಲ್ದಾಣದಲ್ಲಿ ಒಂದೇ ಒಂದು ಟೆಲಿಫೋನ್ ಬೂತ್ ಇತ್ತು. ಅದಕ್ಕೆ ಸಹಜವಾಗಿ ದೊಡ್ಡ ಲೈನೇ ಇತ್ತು. ಅಕ್ಕಪಕ್ಕದಲ್ಲಿ ಎಲ್ಲೂ ಖಾಸಗಿ ಅಂಡಿಯ ಫೋನ್ ಸೇವೆ ಇರಲಿಲ್ಲ. ಇದನ್ನು ನಾನು ಚೆನ್ನಾಗಿ ಪರಿಶೀಲಿಸಿ ಬರೆಯುತ್ತಿದ್ದೇನೆ.
ಅಲ್ಲಿನ ಪರಿಸರದಲ್ಲಿದ ೩ ಎಟಿಎಮ್. ಕೌಂಟರ್ ನಲ್ಲಿ ೨ ಹಣ ಇರಲಿಲ್ಲ. ನಾವುಗಳು 'ಕ್ಯೂ'ನಲ್ಲಿ ಇದ್ದಾಗ್ಯೂ ಅಲ್ಲಿನ ಸ್ಥಾನೀಯರು 'ಕಾಶು ಇಲ್ಲ' ಎಂದು ತಮ್ಮ ತಮ್ಮಲ್ಲೇ ಪೇಚಾಡಿಕೊಂಡು ಹೇಳಿದ್ದು ನಮಗೆ ವಿಚಿತ್ರವಾಗಿ ಕಾಣಿಸಿತು. ಒಂದರಲ್ಲಿ ಮಾತ್ರ ಇತ್ತು. ಅದೂ ಸರಿಯಾಗಿ ಕೆಲಸಮಾಡುತ್ತಿರಲಿಲ್ಲ. ಹೆಚ್ಚಾಗಿ ಯಾರೂ ಇಂಗ್ಲೀಷಿನಲ್ಲಾಗಲೀ ಹಿಂದಿಯಲ್ಲಾಗಲೀ ಉತ್ತರಿಸುವುದಿಲ್ಲ. ಸಹಾಯಮಾಡುವ ಪ್ರಶ್ನೆ ನಂತರವಲ್ಲವೇ ! ಅಷ್ಟರಲ್ಲಿ ೨ ಬಾರಿ ವಿದ್ಯುತ್ ಕಡಿತವಾಯಿತು. ರೈಲ್ವೆ ರಿಸರ್ವೇಶನ್ ಕೌಂಟರ್ ನಲ್ಲೂ ಆಯಿತು.
ರೈಲ್ವೆ ಪ್ಲಾಟ್ಫಾರಂ ನಲ್ಲಿದ್ದ ರೆಸ್ಟೋರೆಂಟ್ ನಲ್ಲಿ ತಿಂಡಿ-ಊಟ ಬಹಳ ಚೆನ್ನಾಗಿತ್ತು. ಟ್ರಿವೆಂಡ್ರಮ್ ನ ಇತರೆ ಹೋಟೆಲ್ ಗಳಿಗೆ ಹೋಲಿಸಿದರೆ ಅತಿ ಸೋವಿಯಾಗಿತ್ತು. ಆದರೆ ಅಲ್ಲಿಯೂ ವಿದ್ಯುತ್ ಕಡಿತವಾಗಿ ತೊಂದರೆಯಾಯಿತು.ಎಲ್ಲಕ್ಕಿಂತಾ ಅತಿ ಬೇಸರತಂದ ವಿಷಯವೆಂದರೆ, ಹೊರಗಡೆಯಿಂದ ಬಂದ ಮಲಯಾಳಮ್ ಗೊತ್ತಿರದ ವ್ಯಕ್ತಿ ಕೇಳಿದ ಯಾವುದೇ ಪ್ರಶ್ನೆಗೂ ಉತ್ತರ ಕೇವಲ ೨-೩ ಪದಗಳಲ್ಲಿ ಅದೂ ಮಲೆಯಾಳಂ ಭಾಷೆಯಲ್ಲಿ ಸಿಕ್ಕುತ್ತಿತ್ತು. ನನ್ನ ಮೇಲೆಯೇ ನನಗೆ ಮಲಯಾಳಂ ಭಾಷೆ ಕಲಿಯದಿದ್ದಕ್ಕೆ ಬಬಳ ಜಿಗುಪ್ಸೆ ಯಾಯಿತು. ಆ ಸಮಯದಲ್ಲಿ ಹೊರಗದೆಯಿಮ್ದ ಬಂದ ಉತ್ತರ ಭಾರತಿಯ ಪರ್ಯಟಕರು ಭಾಷೆಯ ಸಮಸ್ಯೆಯಿಂದ ತೊಲಳುತ್ತಿದ್ದರು. ಅವರಿಗೆ ಎಲ್ಲಿಗೆ ಮೊದಲು ಹೋಗಬೇಕು. ಬೇರೆಬೇರೆ ತಾಣಗಳ ಬಾಗಿಲು ತೆರೆಯುವ ಸಮಯ ಮೊದಲಾದವುಗಳನ್ನೂ ಹೇಳಲು ಯಾರು ಸಿಕ್ಕಿರಲಿಲ್ಲ. ನನ್ನ ಹೆಂಡತಿ ಸಿಕ್ಕು ಹಿಂದಿ ಇಂಗ್ಲಿಷ್ ನಲ್ಲಿ ಮಾತಾಡಿ ಅವರ ಬಗೆಹರಿಸಲು ಯತ್ನಿಸಿದಾವ ಅವರು ನಮಗೆ ಬಹಳ ಕೃತಜ್ಞತೆಯನ್ನು ಹೇಳಿದರು. ಭಾರತದಲಿ ವಾಸಿಸುವ ಯಾರಾದರು ಮಾಡುವಂತಹ ಸಾಮಾನ್ಯ ಕೆಲಸವದು ! ನಮಗೆ ಯಾರೂ ಆ ತರಹದ ನೆರವು ನೀಡಿರಲಿಲ್ಲ.
ಪ್ರತಿ ಮಲಯಾಳಿಗೂ ತನ್ನ ಮಾತೃಭಾಷೆಯ ಬಗ್ಗೆ ಅಪಾರ ಪ್ರೇಮ "
ಅಲ್ಲಿನ ಯಾವುದೇ ಮತ, ಪಂಗಡದ ವ್ಯಕ್ತಿಗೆಮಲೆಯಾಳಿಯ ಮಾತೃ ಭಾಷೆ ಚೆನ್ನಾಗಿ ಬರುತ್ತಿತ್ತು. ಮೇಲಾಗಿ ಅವರೆಲ್ಲಾ ತಮ್ಮ ಮಾತೃಭಾಷೆಯಲ್ಲಿ ತಮ್ಮ ಭಾವನೆಗಳನ್ನು ಗಳನ್ನು ಹಂಚಿಕೊಳ್ಳುತ್ತಿದ್ದರು. ಇಂಗೀಷ್ ಬಂದರೂ ಮಾತಾಡುತ್ತಿರಲಿಲ್ಲ. ಹಿಂದಿ ವಿಧಿಯಿಲ್ಲದೆ ಅವರಿಗೆ ಸಂದಿಘ್ದ ಪರಿಸ್ಥಿತಿ ಬಂದಾಗ ಮಾತಾಡುತ್ತಿದ್ದರು. ಕೆರಳಕ್ಕಿಂತಾ ಹೊರರಾಜ್ಯ ವಿದೇಶಗಳಲ್ಲಿ ತಿರುಗಾಡುತ್ತಿರುವ ವಾಸಿಸುವ ಮಲಯಾಳಿಗಳು ತಮ್ಮ ಉರಿಗೆ ಬಂದಾಗ ಅಪ್ಪಿ ತಪ್ಪಿ ಹಿಂದಿ ಇಂಗ್ಲೀಶ್ ಭಾಷೆಗಳಲ್ಲಿ ಮಾತನಾಡುವುದಿಲ್ಲ. ನಮ್ಮ ಡಬ್ಬಿಯಲ್ಲಿ ಒಬ್ಬ ಹುಡುಗನನ್ನು ಕಳಿಸಿಕೊಡಲು ಬಂದ ಅವನ ತಂದೆ ತಾಯಿ, ಮತ್ತು ಸಂಬಂಧಿಕರು ೪೦ ನಿಮಿಷ ಬರಿ ಮಲೆಯಾಳಿ ಭಾಷೆಯಲ್ಲೇ ಮಾತಾಡುತ್ತಿದ್ದರು. ಅವರಲ್ಲಿ ೩ ಜನ ದೆಹಲಿ ವಾಸಿಗಳಾಗಿದ್ದರು. ರಜಕ್ಕಾಗಿ ಬಂದಿದ್ದರು. ಮತ್ತೊಬ್ಬ ಗೆಳೆಯ ಅದೇ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ. ಆತ 'ದುಬೈ' ನಿಂದ ಬಂದಿದ್ದ. 'ಬೆಳಗಾಂ' ಗೆ ತನ್ನ ಗೆಳೆಯನ ಮದುವೆಗೆ ಹೋಗುತ್ತಿದ್ದ. ಅವನು ಮಲೆಯಾಳಂ ನಲ್ಲೇ ಅಷ್ಟೂಹೊತ್ತು ಕಾಲ ಕಳೆದ !
ಸಾರಿಗೆ ವ್ಯವಸ್ಥೆ :
ಟ್ರಿವೆಂಡ್ರಮ್ ನ ನಗರ ಸಾರಿಗೆ ಬಸ್ ವ್ಯವಸ್ಥೆ ಚೆನ್ನಾಗಿತ್ತು. ಅಲ್ಲಿ ಕೆಲವು ವೋಲ್ವೋ ಬಸ್ ಗಳೂ ಇದ್ದವು. ಅವುಗಳಲ್ಲಿನ ದರ ಬೆಂಗಳೂರಿನ ಹೋಲಿಸಬಹುದಿತ್ತು.ಬೆಮ್ಗಳುರಿನಷ್ಟು ಹೆಚ್ಚಿನ ಪ್ರಮಾಣದ ಅತ್ಯುತ್ತಮ ಗುಣ ಮಟ್ಟದ ಬಸ್ ಗಳು ಇಲ್ಲದಿದ್ದರು ಮನಸ್ಸುಮಾಡಿದರೆ ಸ್ವಲ್ಪ ಭಾಷೆ ತಿಳಿದರೆ, ನಗರದ ಬಹು ಭಾಗಗಳನ್ನು ಬಸ್ಸಿನಲ್ಲೇ ಮಾಡಿಮುಗಿಸಬಹುದು ಎನ್ನಿಸಿತು. ಬೀಚ್ ನಿಂದ ದೇವಸ್ಥಾನಕ್ಕೆ ತಲಾ ೨೫ ರೂ ದರವಿತ್ತು.
ಒಟ್ಟು ಸಾರಾಂಶ :
'ನಮ್ಮ ರಾಮೇಶ್ವರಂ ಯಾತ್ರೆ ಅತ್ಯಂತ ಸುಂದರವಾಗಿತ್ತು'. ತಮಿಳುನಾಡಿನಲ್ಲಿ ಮಳೆ ಆಗ ತಾನೇ ಶುರುವಾಗಿತ್ತು. ಆದರೆ ನಮ್ಮ ಪುಣ್ಯದಿಂದ ನಮಗೆ ಯಾವ ತೊಂದರೆಯೂ ಆಗಲಿಲ್ಲ. ಮಳೆಯಿಂದಾಗಿ ಕೆಲವು ಜಾಗಗಳಿಗೆ ಹೋಗಲಾಗಲಿಲ್ಲ. ಆದರೆ ನೆಗಡಿ, ಜ್ವರ, ಇಲ್ಲವೇ ಮತ್ತಿತರ ಯಾವ ತೊಂದರೆಯೂ ಇಲ್ಲದೆ ಸುಖವಾಗಿ ನಮ್ಮ ಊರಿಗೆ (ಮುಂಬೈನ ಪನವೇಲ್ ನಿಲ್ದಾಣಕ್ಕೆ) ಬಂದು ತಲುಪಿದೆವು. ಅಲ್ಲಿಂದ ಕುರ್ಲಕ್ಕೆ ಬಂದು ರಿಕ್ಷಾದಲ್ಲಿ ನಮ್ಮ ಘಾಟ್ಕೋಪರ್ ಗೆ ತಲುಪಿ ಮನೆಗೆ ಹೋದೆವು.
Rating
Comments
'ಟ್ರಿವೆಂಡರ್,' ಎಂದು ತಪ್ಪಾಗಿ
'ಟ್ರಿವೆಂಡರ್,' ಎಂದು ತಪ್ಪಾಗಿ ಟೈಪಿಸಿದ್ದೇನೆ. ದಯಮಾಡಿ 'ಟ್ರಿವೆಂಡ್ರಮ್' ಎಂದು ಓದಿಕೊಳ್ಳಿ. ಬೇರೆ ತಪ್ಪುಗಳು ಇರಬಹುದು. ಅವೇನು ಅಂತಹ ದೊಡ್ಡ ಪ್ರಮಾಣದ್ದಲ್ಲ !
In reply to 'ಟ್ರಿವೆಂಡರ್,' ಎಂದು ತಪ್ಪಾಗಿ by venkatesh
ಚಿತ್ರಗಳು ಕಾಣೆಯಾಗಿವೆ :(
ಚಿತ್ರಗಳು ಕಾಣೆಯಾಗಿವೆ :(