ಡಾಕ್ಟರ್ಸ್ ಡೇ
(೧-೭-೦೮ ಡಾಕ್ಟರ್ಸ್ ಡೇ.)
-ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ರೋಗಿಯನ್ನು,
ಹಿಂದಿರುಗುವಾಗ ನಗುತ್ತಾ ಹೋಗುವಂತೆ ಮಾಡುವ-ಡಾಕ್ಟ್ರಿಗೆ ನನ್ನಿ.
-ಆಸ್ಪತ್ರೆಗೆ ಅಡ್ಮಿಟ್ ಮಾಡುವ ಪ್ರಸಂಗವೇ ಬರದಂತೆ
ನೋಡಿಕೊಳ್ಳುತ್ತಿರುವ -ಡಾಕ್ಟ್ರಿಗೆ ನನ್ನಿ.
-ಯಾವುದೇ ಸವಲತ್ತು ಇಲ್ಲದ ಊರಲ್ಲೂ ಜನರ ಆರೋಗ್ಯಕ್ಕಾಗಿ
ದುಡಿಯುತ್ತಿರುವ -ಡಾಕ್ಟ್ರಿಗೆ ನನ್ನಿ.
-ರೋಗಿಯನ್ನು ನೋಡಿಕೊಳ್ಳುವವರೇ ಇಲ್ಲದಿದ್ದರು,
ತನ್ನ ಖರ್ಚಲ್ಲೇ ಆರೈಕೆ ಮಾಡುವ- ಡಾಕ್ಟ್ರಿಗೆ ನನ್ನಿ.
- ತಮ್ಮ ಊಟ,ತಿಂಡಿ,ಆರೋಗ್ಯ,ಮನರಂಜನೆ ಕಡೆ ಗಮನ ನೀಡದೆ
ರೋಗಿಯ ಚಿಂತೆಯಲ್ಲೇ ಕಾಲ ಕಳೆಯುವ- ಡಾಕ್ಟ್ರಿಗೆ ನನ್ನಿ.
-ಮಾತೆತ್ತಿದರೆ ಸಿಡಿಮಿಡಿಗೊಳ್ಳುವವರು, ಅಹಂಕಾರಿಗಳು, ವಿಚಿತ್ರ ರೀತಿಯ,
ವಿಚಿತ್ರ ವರ್ತನೆಯ ಜನರೊಂದಿಗೂ ವಿನಯದಿಂದ ವರ್ತಿಸುವ-ಡಾಕ್ಟ್ರಿಗೆ ನನ್ನಿ.
-ದೇಶ,ಭಾಷೆ,ಜಾತಿ,ಬಣ್ಣ,ಯಾವುದರಲ್ಲೂ ಭೇದಭಾವ ಮಾಡದೇ,
ಸೇವೆ ಮಾಡುವ- ಡಾಕ್ಟ್ರಿಗೆ ನನ್ನಿ.
(ಇಂತಹ ಉತ್ತಮ ವೈದ್ಯರ ಸಲಹೆಗಿಂತಲೂ, ವಿದೇಶೀ ವೈದ್ಯರ ಸಲಹೆಗಾಗಿ ತೆರಳುತ್ತಿರುವ ದೇಶಭಕ್ತ ಪಕ್ಷದ, ದೇಶಭಕ್ತ ಮಂತ್ರಿಗಳಿಗೆ ಧಿಕ್ಕಾರ)
-ಚಿಕುನ್ಗುನ್ಯಾ ಪೀಡಿತ ಪ್ರದೇಶಕ್ಕೆ ಹೋಗಿ ಆರೈಕೆ ಮಾಡುತ್ತಿರುವ ಡಾಕ್ಟ್ರಿಗೆ ನನ್ನಿ.
-ಕಡೆಯದಾಗಿ ಮತ್ತು ಮುಖ್ಯವಾಗಿ, ಸಂಪದದಲ್ಲಿ ಆಗಾಗ ವೈದ್ಯಕೀಯ ಸಲಹೆಗಳನ್ನು ನೀಡುತ್ತಿರುವ ಎಲ್ಲಾ ಡಾಕ್ಟ್ರಿಗೂ ನನ್ನಿ.
-ನನ್ನ ನಿಮ್ಮೆಲ್ಲರ ಆರೋಗ್ಯಕ್ಕೆ ಕಾರಣರಾದ ಎಲ್ಲಾ ಡಾಕ್ಟ್ರಿಗೂ ನನ್ನಿ.
ಈ ಸಂತೋಷದಲ್ಲಿ ಒಂದು ಹಾಡು ಹಾಡುವ ಆಸೆ. (ಡಾಕ್ಟ್ರುಗಳು ಕ್ಷಮಿಸಿ)
--'ಕೊಲ್ಲೇ.. .. ..ನನ್ನನ್ನೇ.. ..'
-ಗಣೇಶ.