ಡಿಜಿಟಲ್ ಲೈಬ್ರರಿ ಯಲ್ಲಿ ಕನ್ನಡದ ಹದಿನಾರು ಸಾವಿರ ಪುಸ್ತಕ!- ಪುಸ್ತಕನಿಧಿ ಹೊಸ ಸರಣಿ!
ಇವತ್ತು http://dli.iiit.ac.in ತಾಣವನ್ನು ನೋಡುತ್ತಿರುವೆ . ಕನ್ನಡದ ಹದಿನಾರು ಸಾವಿರ ಪುಸ್ತಕಗಳಿವೆ. ಸುಮಾರು ೨೫ ಲಕ್ಷ ಪುಟಗಳಿವೆ! ನನಗೆ ನಿಧಿಯೇ ದೊರೆತಂತಾಯಿತು . ತಕ್ಷಣಕ್ಕೆ ಒಂದು ವಿಚಾರ ಹೊಳೆಯಿತು . ಬಿಡುವಿದ್ದಾಗ ಅಲ್ಲಿ ಹೋಗಿ ಓದುವೆ . ಹಾಗೆಯೇ ಆಯಾ ಪುಸ್ತಕಗಳ ಕುರಿತು ಒಂದಿಷ್ಟು - ಅಲ್ಲಿನ ವಿಶೇಷ ಇತ್ಯಾದಿ ಈ ಬ್ಲಾಗ್ ನಲ್ಲಿ ಬರೆಯಬೇಕೆಂದಿದ್ದೇನೆ. ನೋಡೋಣ . ಇಂಥ ಎಷ್ಟೋ ಪ್ರೊಜೆಕ್ಟುಗಳನ್ನು ಶುರುಮಾಡಿ ...... ಬಿಟ್ಟಿದ್ದೇನೆ ! ( ಅಂದ ಹಾಗೆ ನನ್ನ ಹಿಂದಿನ ಪ್ರೊಜೆಕ್ಟು - ಫೈರ್‌ಫಾಕ್ಸ್ /ಮೊಝಿಲ್ಲ ಕನ್ನಡ ಅನುವಾದ ಇನ್ನೇನು ಮುಗಿಯಬಂದಿದೆ)
ಪುಸ್ತಕಗಳ ಕುರಿತು ಪುಸ್ತಕನಿಧಿ ಸರಣಿಯಲ್ಲಿ ಬರೆವೆ. ನಾನು ಬರೆಯುತ್ತಿರುವವರೆಗೆ ನೀವು ಓದುತ್ತಿರಬಹುದುದು!
ಸರಿ ಇಂದಿನ ದಿನವೇ ಶುಭದಿನವು ....
ಇದೋ ಇಲ್ಲಿದೆ ..... (ಮುಂದಿನ ಬ್ಲಾಗ್ ಟಿಪ್ಪಣಿ ನೋಡಿ)
Rating