ಡೂಪ್ಲೆಯ ಮೇಲೆ ಕಾಗೆ

ಡೂಪ್ಲೆಯ ಮೇಲೆ ಕಾಗೆ

ಚಿತ್ರ

ಡೂಪ್ಲೆಯ ಮೇಲೆ ಕಾಗೆ

ಚೀಲ ತುಂಬಿಕೊಂಡು ಹೋಗಿ
ದೀರ್ಘ ಶರಧಿಯಲ್ಲಿ ಸಾಗಿ
ಸ್ವಂತ ನೆಲದಿ ನಿಂತು ಬೀಗಿ
ಒಂದಕೆರಡು ಮಾಡಿ ತೂಗಿ
ಬೇಗ ಮರಳಿ ಹಡಗನೇರಿ
ಬಂದು ತಿರುಗಿ ಹಳ್ಳಿ ಕೇರಿ
ಕಾಸುಗೀಸು ಜನಕೆ ಬೀರಿ
ಕಸಿದುಕೊಂಡು ಕ್ರೌರ್ಯ ತೋರಿ
ಸಾಲದಕ್ಕೆ ದೇಶದಲ್ಲಿ
ಕೊಳ್ಳೆಹೊಡೆದು ಚಿನ್ನ ಬೆಳ್ಳಿ
ಪಾಲು ನೋಡಿ ಆಂಗ್ಲರಲ್ಲಿ
ಜಗಳವಾಡಿ ಫ್ರೆಂಚರಿಲ್ಲಿ
ಸೋತು ಹೋದರಲ್ಲ ಹೇಗೆ
ಎಂಬ ಚಿಂತೆಯನ್ನು ನೀಗೆ
ಹೋಗುತೇನೆ ಎಂದು ಡೂಪ್ಲೆ
ಸೇನೆಯೊಡನೆ ಬಂದ ಹಾಗೆ
ಇಲ್ಲಿ ವೀರ ತನವು ಕಪಟ
ಆಂಗ್ಲರೊಡನೆ ಸೋತು ಸತತ
ಪುದುಚೇರಿಯ ವರೆಗೆ ಓಟ
ಚಿಕ್ಕದಾಯ್ತು ಭೂಪಟ
ಆಂಗ್ಲರೊಡನೆ ಕಾದಾಡಿ
ಉಳಿಸಿಕೊಳಲು ಕಾಡಿ ಬೇಡಿ
ದುಡಿದ ವೀರ ಡೂಪ್ಲೆಯ
ನೆನೆದು ದೊಡ್ಡ ಮೂರ್ತಿಯ
ಕಡಲತಡಿಯಲಿಟ್ಟು ನೆಟ್ಟಿ
ಸುತ್ತ ಬೇಲಿ ಕಟ್ಟೆ ಕಟ್ಟಿ
ಬಿಟ್ಟು ಹೋದ ಫ್ರೆಂಚರನ್ನು
ನೆನೆಸಿ ಬಂದ ಕಾಗೆಯೊಂದು
ದೊಡ್ಡ ತಲೆಯ ಮೆಲೆ ಸ್ವಲ್ಪ
 ಹೊತ್ತು ಕೂತುಕೊಂಡು ಸುತ್ತ
ಇದ್ದ ಜನರ ನೋಡಿ ಮತ್ತೆ
ಪೆದ್ದನಂತೆ ಬೆದರಿ ಪಿಷ್ಟಿ
ಹಾಕಿ ಕೂಗಿ ಹಾರಿತು.

     ಸದಾನಂದ

Rating
No votes yet

Comments

Submitted by venkatb83 Sun, 01/06/2013 - 19:31

ಸದಾನಂದ ಅವರೇ
ಕವನ‌ ಪ್ರಾಸಬದ್ದವಾಗಿದ್ದು ಓದಲು ಭಲೇ ಮುದ‌ ನೀಡುವುದು..
ಡೂಪ್ಲೆ ಬಗ್ಗೆ ಕಾಗೆಗೇನು ಗೊತ್ತು..!!

ಈಗ‌ ಅಲ್ಲಲ್ಲಿ ನಿಲ್ಲಿಸಿರುವ‌ ಪ್ರತಿಮೆಗಳ‌ ಮೇಲೆ ಕಾಗೆ‍ ಪಾರಿವಾಳ‌ ಇತರ‌ ಪಕ್ಷಿಗಳು ಮಾಡುವುದು ಅದನ್ನೇ..!!
ವರ್ಷಕ್ಕೊಮ್ಮೆ ಜಯ0ತಿ ಹಬ್ಬ ಇತ್ಯಾದಿಗಳ‌ ಸ0ದರ್ಭದಲ್ಲಿ ಮಾತ್ರ ಅವುಗಳಿಗೆ ಸ್ನಾನ‌, ಶ್ಹುಚ್ಹಿ ಬಾಗ್ಯ..!!
ಒಳಿತಾಗಲಿ...

\|/