ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:
ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ!
ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು!
-ಹಂಸಾನಂದಿ
ಕೊ: ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರು ನೀಡಿದ ಸಲಹೆಗಳಿಗೆ ಧನ್ಯವಾದಗಳು!
ಕೊ.ಕೊ. ಯುಎಸ್ಎ ಯಲ್ಲಿ ಅತಿ ಬಿಸಿಲು ಝಳವಿರುವ, ಅತಿ ತಗ್ಗಾದ (ಸಮುದ್ರ ಮಟ್ಟಕ್ಕಿಂತ ೨೮೨ ಅಡಿ ಕೆಳಗೆ) ಮತ್ತೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ. ಚಿತ್ರ ಕೃಪೆ - ನನ್ನ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್
ಚಿತ್ರಗಳ ವಿವರ (ಮೇಲಿನಿಂದ ಕೆಳಕ್ಕೆ) - ದೊಡ್ಡದಾಗಿ ನೋಡಲು ಚಿತ್ರಗಳ ಮೇಲೆ ಚಿಟಕಿಸಿ:
೧) ಡಾಂಟೆಯ ನೋಟ - ಸುಮಾರು ಆರು ಸಾವಿರ ಅಡಿಯೆತ್ತರದಿಂದ ಕಾಣುವ ಡೆತ್ ವ್ಯಾಲಿಯ ನೋಟ
೨) ಸ್ಟೋವ್ ಪೈಪ್ ವೆಲ್ಸ್ ಹಳ್ಳಿ
೩) ಗೋಲ್ಡನ್ ಕ್ಯಾನ್ಯನ್
೪) ಬ್ಯಾಡ್ ವಾಟರ್ ಬೇಸಿನ್ - ಡೆತ್ ವ್ಯಾಲಿಯ ಅತಿ ತಗ್ಗು ಪ್ರದೇಶ. ಚಿತ್ರದ ಮೇಲೆ ಚಿಟಕಿಸಿದಾಗ, ಕಲ್ಲು ಬಂಡೆಯ ಗೋಡೆಯ ಮೇಲೆ ಬಿಳಿ ಪಟ್ಟಿಯ ಮೇಲೆ ಸಮುದ್ರ ಮಟ್ಟವನ್ನು ಗುರುತಿಸಿ ತೋರಿಸಿದೆ
೫)ಬ್ಯಾಡ್ ವಾಟರ್ ಬೇಸಿನ್ ನಲ್ಲಿ ಉಪ್ಪು ಹರಳುಗಟ್ಟಿದ ನೆಲ
೬) "ಚಿತ್ರಕಾರನ ಬಣ್ಣದ ತಟ್ಟೆ" - Artist's Palette ಎಂಬ ಹೆಸರುಳ್ಳ ಜಾಗವೊಂದು
ಕೊ.ಕೊ.ಕೊ: Death Valley, California ಬಗ್ಗೆ ಹೆಚ್ಚಿನ ಮಾಹಿತಿ, ವಿಕಿಪೀಡಿಯಾದಲ್ಲಿ
Comments
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
In reply to ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ by hamsanandi
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
In reply to ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ by sasi.hebbar
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
In reply to ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ by ಸುಮ ನಾಡಿಗ್
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
In reply to ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ by Shreekar
ಉ: ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ