ಡೈನೋಸಾರ್!...ನಮ್ಮ ಬೀದೀಲಿ!!
ನಿಜಕ್ಕೂ!..
ಒಂದು ಫೋಟೋ ತೆಗೆಯಲು ಬಹಳ ಪ್ರಯತ್ನಿಸಿದೆ. ಮಧ್ಯರಾತ್ರಿ,ಮುಂಜಾನೆ,ಸಂಜೆ.. .ಊಹೂಂ..
ಅದು ಬಂದು ಹೋಗುವ ಸಮಯವೇ ಗೊತ್ತಾಗುವುದಿಲ್ಲ.
ಹೆಂಗಸರ ಕಿವಿ ಬಹಳ ಸೂಕ್ಷ್ಮ.ನಿನ್ನೆ ಮಧ್ಯರಾತ್ರಿ ನನ್ನಾಕೆ ಎಬ್ಬಿಸಿದಳು..
ದೂರದಿಂದ ಕೇಳಿಸುತಿತ್ತು..ಢಂ..ಢಂ. ..ಢಂ.. .. ಕುರ್ಚಿ,ಮೇಜು,ಕಪಾಟು,ಲೋಟಗಳು ನಡುಗಲು ಸುರು. ನನ್ನ ಹೃದಯ,ಮೆದುಳು ಸಹ ನಡುಗುತ್ತಿತ್ತು.ಲಬ್..ಢಂ.. ..ಲಬ್..ಢಂ..
ಭಯವಾದರೂ ಟಾರ್ಚ್,ಕ್ಯಾಮರಾದೊಂದಿಗೆ ಹೊರಬಂದೆ.
ಕಿವಿಗಪ್ಪಳಿಸಿತು ಶಬ್ದ.. ಐತಲಕಡಿ...; ಕ್ಯಾಮರ,ಟಾರ್ಚ್ ಬಿಟ್ಟು ಎರಡೂ ಕಿವಿ ಮುಚ್ಚಿದೆ.
ಅಷ್ಟರಲ್ಲಿ ಅದು ನಮ್ಮ ಬೀದಿ ಕೊನೆ ದಾಟಿ ಬಿಟ್ಟಿತು.
ಈ ಸಲ ಕಂಡು ಹಿಡಿದೆ. ಮೈ,ಸ್ವರ ಇನ್ನೂ ನಡುಗುತ್ತಿತ್ತು. ನನ್ನಾಕೆಯನ್ನು ಕರೆದೆ-
ಜಲ ಜಲ ಜಲಜಾಕ್ಷಿ..
ಮಿನ ಮಿನ ಮೀನಾಕ್ಷಿ..
ಕಾರೇ..ಐತಲಕಡಿ ಕಾರೇ!
(ಡೈನೋಸಾರ್‌ನ ಮರಿಮರಿಮರಿಮರಿಮರಿಮರಿಮರಿಮರಿಮರಿಮರಿಮಗು ಇರಬೇಕು-ಡೈನೋಕಾರ್!)
Rating