ಡೈರಿಯ ಕೆಲವು ಹಾಳೆಗಳು - ಭಾಗ ೩

ಡೈರಿಯ ಕೆಲವು ಹಾಳೆಗಳು - ಭಾಗ ೩

ದಿನಾಂಕ: ೧೭-ಜನವರಿ
ಅವನು: ಇವತ್ತು ನಾನು ಬಸ್ಸು ಹತ್ತಿದಾಕ್ಷಣ ನನ್ನ ಕಣ್ಣುಗಳು ಅವಳನ್ನೇ ನೋಡಿದವು, ಅವಳು ನನ್ನನ್ನ ನೋಡಿ ನಕ್ಕಳು. ಅವಳು ಸೀರಿಯಸ್ ಆಗಿದ್ಲಾ? ನನಗೆ ಗೊತ್ತಿಲ್ಲ. ಬಹುಶಃ ಅವಳು ನನ್ನ ಬಗ್ಗೆ ಅವಳ ಸ್ನೇಹಿತರ ಹತ್ತಿರ ಹೇಳಿರಬೇಕು ಮತ್ತು ಅವ್ರು ನನ್ನ ಬಗ್ಗೆ ಹಾಸ್ಯ ಮಾಡಿರಬೇಕು, ಅದಕ್ಕೆ ನಾನು ಬಸ್ಸು ಹತ್ತಿದ ತಕ್ಷಣ ಅದನ್ನ ನೆನೆಸಿಕೊಂಡು ನಕ್ಕಿರಬೇಕು, ನಾನೇ ಅದನ್ನ ನಗು ಅಂತ ತಪ್ಪಾಗಿ ತಿಳಿದುಕೊಂಡೆ. ನಾನೆಂತಹ ಮೂರ್ಖ, ಅವಳ ಗೆಳತಿಯರು ನನ್ನ ಬಗ್ಗೆ ಹಾಸ್ಯ ಮಾಡ್ತಾ ಮಜಾ ತಗೊತಿರಬೇಕು. ಛೆ!!!

ಅವಳು: ಇವತ್ತು ಅವ್ನು ಬಸ್ಸು ಹತ್ತಿದ ತಕ್ಷಣ, ನಾನು ಅವನನ್ನ ನೋಡಿ ನಕ್ಕೆ. ಅವನು ಸಂತೋಷಿಸುವುದಕ್ಕಿಂತ ಗೊಂದಲಕ್ಕೊಳಗಾದ ಅಂತ ಅನ್ನಿಸ್ತು. ಅವನಿಗೆ ನಿಜವಾಗಲೂ ನನ್ನ ಜೊತೆ ಗೆಳೆತನ ಮಾದಬೇಕಂತಿದೆಯಾ? ನನಗೆ ಗೊತ್ತಾಗುತ್ತಿಲ್ಲ. ಛೆ ನಾನ್ಯಾಕೆ ಅವನ ಬಗ್ಗೆ ಅಷ್ಟು ಯೋಚನೆ ಮಾಡ್ತಿದೀನಿ? ನಾನು ಅವನನ್ನು ಇಷ್ಟ ಪಡುತ್ತಿದ್ದೇನಾ? ಅಥವಾ ಇದು ಕೂಡ ನಾವು ನಮ್ಮ ಹವ್ಯಾಸಕ್ಕೆ ಒಗ್ಗಿಕೊಂಡಂತೆ ಇದಕ್ಕೂ ಅಂಟಿಕೊಂಡಿದ್ದೇನಾ. ಆಮೇಲೆ ಕ್ರಮೇಣ ಅದನ್ನ ಇಷ್ಟ ಪಡುತ್ತೆವಲ್ಲ? ನನಗನ್ನಿಸುತ್ತೆ ಇದು ಎರಡನೆಯದು ಇರಬೇಕು ಅಂತ. ದೇವರೇ ಪ್ಲೀಸ್ ಅವನು ಒಳ್ಳೆಯ ಹುಡುಗನೇ ಆಗಿರಲಿ. ನನ್ನ ಒಳ ಮನಸ್ಸು ಹೇಳುತ್ತಿದೆ ಅವನು ಒಳ್ಳೆಯ ಹುಡುಗ ಅಂತ.
ನನಗನ್ನಿಸುತ್ತೆ ನನ್ನ ನಗು ಅವನನ್ನ ಗೊಂದಲಕ್ಕೆ ಕೆಡವಿದೆ ಅಂತ. ಅದು ನನ್ನ ತಪ್ಪಲ್ಲ, ನಾನು ಅವನ ಜೊತೆ ಗೆಳೆತನ ಮಾಡೋಕೆ ಸಿದ್ಧ ಅಂತ ಹೇಳಿದ್ದೇನೆ. ಇವಾಗ ಉಳಿದಿದ್ದೆಲ್ಲ ಅವನಿಗೆ ಬಿಟ್ಟಿದ್ದು. Now the ball lies in his court. ಅವ್ನು ನನ್ನ ಮಾತನಾಡಿಸೋ ಧೈರ್ಯ ಮಾಡ್ತಾನ?

Rating
No votes yet

Comments