ಡೈರಿಯ ಕೆಲವು ಹಾಳೆಗಳು - ಭಾಗ ೭
ದಿನಾಂಕ: ೨೭-ಜನವರಿ
ಅವಳು:
ಇವತ್ತು ಅವ್ನು ಯೋಚನೆಯಲ್ಲಿ ಕಳೆದು ಹೋಗಿದ್ದ. ಅವ್ನು ಬಸ್ಸು ಹತ್ತಿದ ಮೇಲೆ ನನ್ನ ಕಡೆ ತಿರುಗಿಯೂ ಕೂಡ ನೋಡಲಿಲ್ಲ. ಅವ್ನು ಸೀದಾ ಹೋಗಿ ಕೊನೆಯ ಸೀಟಿನಲ್ಲಿ ಕುಳಿತು ಕಾದಂಬರಿ ಓದಲು ಶುರು ಮಾಡಿದ. ಅವನ ಕಡೆ ನೋಡಲು ಒಂದೆರಡು ಬಾರಿ ಪ್ರಯತ್ನ ಪಟ್ಟೆ ಆದ್ರೆ ಅವ್ನು ತಲೇನೆ ಎತ್ತಲಿಲ್ಲ. ಅವ್ನು ನಿಜಕ್ಕೂ ಘಾಸಿಗೊಂಡಿದ್ದಾನೆ. ನನಗೆ ನಿಜಕ್ಕೂ ದುಃಖ ಆಗ್ತಿದೆ. ಆದ್ರೆ ನಾನೇನು ಮಾಡೋಕೆ ಸಾಧ್ಯ? ಇವತ್ತು ಆಫೀಸಿನ ಹತ್ತಿರ ಇಳಿದಾಗ ನಾನು ಬೇಕಂತಲೇ ಗೇಟಿನ ಹತ್ತಿರ ಅವನನ್ನ ಮಾತಾಡಿಸೋಣ ಅಂತ ಬಹಳ ಹೊತ್ತು ಕಾದೆ. ಆದ್ರೆ ಅವ್ನು ಆ ಜನ ಜಂಗುಳಿಯಲ್ಲಿ ಕಾಣಲೇ ಇಲ್ಲ. ನಿರು ಸಾರೀ ಕಣೋ, ನೀನು ಮೊದಲಿನ ಹಾಗೆ ಇರೋ ಪ್ಲೀಸ್.....
ದಿನಾಂಕ: ೨೮-ಜನವರಿ
ಅವಳು: ಇವತ್ತು ಅವನನ್ನ ಫುಡ್ ಕೋರ್ಟಿನಲ್ಲಿ ನೋಡಿದೆ. ಅವ್ನು ಇಬ್ಬರು ಹುಡುಗಿಯರ ಜೊತೆ ನಗುತ್ತ, ಹರಟುತ್ತ, ಜೋಕೆ ಹೇಳುತ್ತಾ ಕುಳಿತುಕೊಂಡಿದ್ದ. ಅವರ ಜೊತೆ ಇರೋಕೆ ಅವನಿಗೆ ಇಷ್ಟ ಅಂತ ಕಾಣಿಸುತ್ತೆ. ಅವ್ನು ಕೂಡ ಬೇರೆ ಹುಡುಗರ ತರಹ ಬಹಳ ಹುಡುಗಿಯರೂ ನನ್ನ ಜೊತೆ ಇರಬೇಕು ಅನ್ನೋ ಮನೋಭಾವ ಇರೋನ?
ಅವ್ನು ಕೂಡ ಒಬ್ಬ ಫ್ಲರ್ಟ ಇರ್ಬೋದಾ? ಅವ್ನು ನನ್ನನ ಕೂಡ ಆ ಗುಂಪಿನ ಜೊತೆ ಸೇರ್ಕೊಳ್ಳೋಕೇ ಹೀಗೆ ಮಾಡ್ತಿದಾನ?
ಬಹುಷಃ ಈ ಇಬ್ಬರು ಹುಡುಗಿಯರೂ ಅವನ ಒಳ್ಳೆಯ ಸ್ನೇಹಿತರಿರಬೇಕು. ಕನಿಷ್ಠ ನಾನು ಹಾಗೆ ಭಾವಿಸ್ತೀನಿ.
ದೇವ್ರೇ ಆ ಇಬ್ಬರು ಅವನ ಅಕ್ಕಂದಿರೋ/ತಂಗಿಯಂದಿರೋ ಅಥವಾ ಬರಿಯ ಸ್ನೇಹಿತರೇ ಆಗಿರುವಂತೆ ಮಾಡು ಪ್ಲೀಸ್, ಅಷ್ಟೆ ಸಾಕು ಮತ್ತೇನು ಬೇಡ.
Comments
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೭ by savithasr
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೭ by ASHOKKUMAR
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೭ by savithasr
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೭ by Chetan.Jeeral
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
In reply to ಉ: ಡೈರಿಯ ಕೆಲವು ಹಾಳೆಗಳು - ಭಾಗ ೭ by savithasr
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭